Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು ಚೆನ್ನಾಗಿ ಆಡಿಲ್ಲ: ಸೋಲಿಗೆ ತನ್ನನ್ನೇ ದೂರಿದ ಆರ್‌ಆರ್‌ನ ಸ್ಟೀವ್ ಸ್ಮಿತ್

IPL 2020: Steve Smith blame himself after loss against Delhi Capitals

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಲೇ ಬೇಕಾಗಿದ್ದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಸೋತಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ರಾಜಸ್ಥಾನ್ 46 ರನ್‌ಗಳ ಸೋಲನುಭವಿಸಿದೆ. ತಂಡದ ಸೋಲಿಗೆ ನಾಯಕ ಸ್ಟೀವ್ ಸ್ಮಿತ್ ತನ್ನನ್ನೇ ದೂರಿಕೊಂಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 19, ಐಯ್ಯರ್ 22, ಮಾರ್ಕಸ್ ಸ್ಟೀಯ್ನಿಸ್ 39, ಶಿಮ್ರನ್ ಹೆಟ್ಮೈಯರ್ 45 (24 ಎಸೆತ) ರನ್‌ ಕೊಡುಗೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 184 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ಕಡೆಯಿಂದ ಯಶಸ್ವಿ ಜೈಸ್ವಾಲ್ 34, ಜೋಸ್ ಬಟ್ಲರ್ 13, ಸ್ಟೀವ್ ಸ್ಮಿತ್ 24 (17), ರಾಹುಲ್ ತೆವಾಟಿಯಾ 38 ರನ್‌ ಸೇರಿಸಿದರು. ಆರ್‌ಆರ್ 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 138 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಗೆಲ್ಲಬೇಕಿದ್ದ ಪಂದ್ಯ ಸೋತಿದ್ದಕ್ಕಾಗಿ ಸ್ಮಿತ್ ಹೊಣೆ ಹೊತ್ತುಕೊಂಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಸ್ಮಿತ್, 'ಇನ್ನೂ ಕೂಡ ನಾವು ಸಕಾರಾತ್ಮಕವಾಗಿ ಉಳಿಯಬೇಕು. ವಿಚಾರಗಳು ಬೇಗನೆ ನಡೆದು ಹೋಗುತ್ತವೆ. ಆ ಕ್ಷಣ ನನಗೆ ಪಂದ್ಯ ಸೋಲುತ್ತೇವೆ ಅನ್ನಿಸಿರಲಿಲ್ಲ. ನಾನೂ ಕೂಡ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಇವತ್ತು ಬ್ಯಾಟಿಂಗ್ ಚೆನ್ನಾಗಿ ಮಾಡಬಹುದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ,' ಎಂದಿದ್ದಾರೆ. ಆರ್‌ಆರ್ 6ರಲ್ಲಿ 4 ಪಂದ್ಯ ಸೋತಂತಾಗಿದೆ.

Story first published: Saturday, October 10, 2020, 9:55 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+