ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಐಪಿಎಲ್‌ಗೆ ಹೊಸ ಮಾದರಿ, ಮಹತ್ವದ ಬದಲಾವಣೆಗಳು!

IPL 2021: 10 teams will be divided into two groups – New format of IPL from Upcoming season

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಎರಡು ಹೆಚ್ಚುವರಿ ತಂಡಗಳನ್ನು ತರಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಎಲ್ಲಾ ತಯಾರಿ ನಡೆಸುತ್ತಿದೆ. ಡಿಸೆಂಬರ್ 24ರಂದು ನಡೆಯುವ ವಾರ್ಷಿಕ ಸಭೆಯ ವೇಳೆ ಇದಕ್ಕೆ ಬಿಸಿಸಿಐ ಅಧಿಕೃತ ಅನುಮೋದನೆ ನೀಡುವುದರಲ್ಲಿದೆ. ಐಪಿಎಲ್‌ನಲ್ಲಿ 10 ತಂಡಗಳು ಸ್ಪರ್ಧಿಸುತ್ತಿರುವುದು ಇದೇ ಮೊದಲಸಾರಿಯೇನಲ್ಲ. ಈ ಹಿಂದೆಯೂ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಸ್ಪರ್ಧಿಸಿದ್ದವು.

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳುಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

2011ರಲ್ಲೂ ಐಪಿಎಲ್‌ನಲ್ಲಿ 10 ತಂಡಗಳು ಕಣಕ್ಕಿಳಿದಿದ್ದವು. ಮುಂಬರಲಿರುವ ಐಪಿಎಲ್‌ಗೆ 9 ತಂಡಗಳು ಸ್ಪರ್ಧಿಸಲಿವೆ ಎಂದು ಬಿಸಿಸಿಐ ಆರಂಭದಲ್ಲಿ ಹೇಳಿತ್ತು. ಆದರೆ ಈಗ 10 ತಂಡಗಳನ್ನು ಸೇರಿಸಲು ಬಿಸಿಸಿಐ ಯೋಚಿಸುತ್ತಿದೆ.

ಕನ್ಕಶನ್ ಬದಲಾವಣೆಗೆ ಪ್ರತಿಕ್ರಿಯಿಸಿದ ಮೈಕಲ್ ವಾನ್, ಟಾಮ್ ಮೂಡಿಕನ್ಕಶನ್ ಬದಲಾವಣೆಗೆ ಪ್ರತಿಕ್ರಿಯಿಸಿದ ಮೈಕಲ್ ವಾನ್, ಟಾಮ್ ಮೂಡಿ

ಎರಡು ಹೆಚ್ಚುವರಿ ತಂಡಗಳ ಸೇರ್ಪಡೆ ಮುಂದಿನ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆಗಳಿಗೂ ಕಾರಣವಾಗಲಿದೆ.

ಫ್ರಾಂಚೈಸಿಗಳಲ್ಲಿ ಅಸಮಾಧಾನ

ಫ್ರಾಂಚೈಸಿಗಳಲ್ಲಿ ಅಸಮಾಧಾನ

ಹೆಚ್ಚುವರಿ ತಂಡಗಳನ್ನು ಸೇರಿಸಲಿರುವುದರಿಂದ ಮುಂದಿನ ವರ್ಷ ಮೆಗಾ ಆಕ್ಷನ್ (ಆಟಗಾರರ ಹರಾಜು) ನಡೆಯುವ ಸಾಧ್ಯತೆಯಿರುವುದರಿಂದ ಈಗಾಗಲೇ ಬಲಿಷ್ಠ ತಂಡಗಳನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳಿಗೆ ಹೆಚ್ಚುವರಿ ತಂಡಗಳ ಸೇರ್ಪಡೆ ಖುಷಿ ನೀಡಿಲ್ಲ. ಅಂತೂ ಮುಂದಿನ ಐಪಿಎಲ್ ಇನ್ನಷ್ಟು ರೋಚಕ ಅನ್ನಿಸಲಿದೆ. ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಪ್ರತೀ ತಂಡಗಳಿಗೂ 18 ಪಂದ್ಯಗಳು

ಪ್ರತೀ ತಂಡಗಳಿಗೂ 18 ಪಂದ್ಯಗಳು

ಸದ್ಯ ಐಪಿಎಲ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ರೌಂಡ್ ರಾಬಿನ್ ಮಾದರಿ ಪ್ರಕಾರ ಪ್ರತೀ ತಂಡಗಳೂ ಎಲ್ಲಾ ಎದುರಾಳಿ ತಂಡಗಳನ್ನು ಒಮ್ಮೆ ಲೀಗ್‌ನಲ್ಲಿ ಎದುರಿಸಲಿದೆ. ಲೀಗ್‌ ಹಂತದಲ್ಲಿ ಪ್ರತೀ ತಂಡಗಳೂ 14 ಪಂದ್ಯಗಳನ್ನು ಆಡಲಿದೆ. ಐಪಿಎಲ್ 2021ರ ಐಪಿಎಲ್‌ನಲ್ಲಿ 10 ತಂಡಗಳಾದರೆ ಇದೇ ಮಾದರಿಯ ಪ್ರಕಾರ ಲೀಗ್‌ ಹಂತದಲ್ಲಿ ಪ್ರತೀ ತಂಡಗಳೂ 18 ಪಂದ್ಯಗಳನ್ನು ಆಡಬೇಕಾಗುತ್ತದೆ.

ಐಪಿಎಲ್ 2021ಕ್ಕೆ ಹೊಸ ಮಾದರಿ

ಐಪಿಎಲ್ 2021ಕ್ಕೆ ಹೊಸ ಮಾದರಿ

ಟೈಮ್ಸ್ ಆಫ್‌ ಇಂಡಿಯಾ ವರದಿಯ ಪ್ರಕಾರ, ಮುಂದಿನ ಐಪಿಎಲ್‌ಗೆ ಐಪಿಎಲ್ ಮಾದರಿಯಲ್ಲಿ ಬದಲಾವಣೆಯಾಗಲಿದೆ. ಮತ್ತೆ 2011ರ ಮಾದರಿಗೆ ಮರಳಲು ಆಯೋಜಕರು ಯೋಚಿಸುತ್ತಿದ್ದಾರೆ. 2011ರಲ್ಲಿ 10 ತಂಡಗಳನ್ನು 5ರಂತೆ ಎರಡು ಗುಂಪುಗಳಾಗಿ ವಿಭಾಜಿಸಲಾಗಿತ್ತು. ಪ್ರತೀ ತಂಡವೂ ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತಿತ್ತು. ಪ್ರತೀ ತಂಡವೂ ತಮ್ಮದೇ ಗುಂಪಿನ ಇತರ ನಾಲ್ಕು ತಂಡಗಳನ್ನು ಎರಡು ಬಾರಿ ಎದುರಿಸುತ್ತಿತ್ತು. ಪ್ರತೀ ತಂಡವೂ ಎದುರಾಳಿ ಗುಂಪಿನಿಂದ ನಾಲ್ಕು ತಂಡಗಳನ್ನು ಒಂದು ಬಾರಿ ಮತ್ತು ಉಳಿದ ಇನ್ನೊಂದು ತಂಡವನ್ನು ಎರಡು ಬಾರಿ ಎದುರಿಸುತ್ತಿತ್ತು.

Story first published: Saturday, December 5, 2020, 17:16 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X