ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೂವರು ವಿದೇಶಿ ಆಟಗಾರರು

IPL ನಿಂತ ನಂತರ ಒಂದು ಹಿನ್ನೋಟ | Oneindia Kannada

14ನೇ ಆವೃತ್ತಿಯ ಐಪಿಎಲ್ ಇನ್ನೂ ಸಂಪೂರ್ಣವಾಗಿಲ್ಲ. ಐಪಿಎಲ್ ಬಯೋಬಬಲ್‌ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದ ಕಾರಣ ಟೂರ್ನಿಯನ್ನು ಅರ್ಧಕ್ಕೆ ಮೊಟಲುಗೊಳಿಸಲಾಗಿದೆ. ಈ ಟೂರ್ನಿಯ ಮೊದಲಾರ್ಧ ಪಂದ್ಯಗಳು ಸಂಪೂರ್ಣವಾಗಿದ್ದು ಉಳಿದ ಪಂದ್ಯಗಳ ಆಯೋಜನೆಯ ಬಗ್ಗೆ ಇನ್ನಷ್ಟೇ ಬಿಸಿಸಿಐ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ.

ಐಪಿಎಲ್ 2021 ಆವೃತ್ತಿಯಲ್ಲಿ ಮೊದಲ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದೆ. ಇದರಲ್ಲಿ ಕೆಲ ತಂಡಗಳು ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರೆ ಇನ್ನೂ ಕೆಲವು ಅತ್ಯಂತ ಕಳಪೆ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಸಂಕಷ್ಟದಲ್ಲಿ. ಅದೇ ರೀತಿ ಆಟಗಾರರಲ್ಲಿಯೂ ಕೆಲ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು ತಂಡದ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮವನ್ನು ಬೀರಿದ್ದಾರೆ.

ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್

ಈ ವರದಿಯಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿ ತಂಡದ ಪ್ರದರ್ಶನಕ್ಕೆ ಗಣನೀಯ ಕೊಡುಗೆ ನೀಡಿದ ಮೂವರು ವಿದೇಶಿ ಆಟಗಾರರು ಯಾರು ಎಂಬುದನ್ನು ಬನ್ನಿ ನೋಡೋಣ

ಫಾಫ್ ಡು ಪ್ಲೆಸಿಸ್

ಫಾಫ್ ಡು ಪ್ಲೆಸಿಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿಯ ಟೂರ್ನಿಯಲ್ಲಿಯೂ ಚೆನ್ನೈ ಸೂಪೊರ್ ಕಿಂಗ್ಸ್ ತಂಡದ ಪರವಾಗಿ ಶ್ರೇಷ್ಠ ಆಟವನ್ನು ಪ್ರದರ್ಶಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕನಾಗಿ ಕಣಕ್ಕಿಳಿದು ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಆಡಿದ 7 ಮ್ಯಾಚ್‌ಗಳಲ್ಲಿ ಈ ಬಲಗೈ ದಾಂಡಿಗ 320 ರನ್‌ಗಳಿಸಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ಡು ಪ್ಲೆಸಿಸ್ 4 ಅರ್ಧ ಶತಕವನ್ನು ದಾಖಲಿಸಿದ್ದಾರೆ.

ಕ್ರಿಸ್ ಮೋರಿಸ್

ಕ್ರಿಸ್ ಮೋರಿಸ್

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕ್ರಿಸ್ ಮೋರಿಸ್ ನಿರೀಕ್ಷೆಯಗೆ ತಕ್ಕ ಪ್ರದರ್ಶನವನ್ನು ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅನುಭವಿ ಆಲ್‌ರೌಂಡರ್ ಆಗಿರುವ ಮೋರಿಸ್ ಬೌಲಿಂಗ್ ವಿಭಾಗದ ನೇತೃತ್ವವನ್ನು ವಹಿಸಿಕೊಂಡು ಮಿಂಚಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಒಂದು ಅತ್ಯಂತ ಸ್ಮರಣಿಯ ಇನ್ನಿಂಗ್ಸ್ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಲ್ಲದೆ ತಂಡಕ್ಕೆ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ. ವಿದೇಶಿ ಬೌಲರ್‌ಗಳ ಪೈಕಿ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ. 7 ಪಂದ್ಯಗಳಲ್ಲಿ ಮಾರಿಸ್ 14 ವಿಕೆಟ್ ಸಂಪಾದಿಸಿದ್ದಾರೆ.

ಮೊಯೀನ್ ಅಲಿ

ಮೊಯೀನ್ ಅಲಿ

ಈ ಬಾರಿಯ ಐಪಿಎಲ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ಮೊತ್ತವನ್ನು ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಈ ಮೊತ್ತಕ್ಕೆ ಮೊಯೀನ್ ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿದ 6 ಪಂದ್ಯಗಳಲ್ಲಿ 206 ರನ್‌ಗಳಿಸಿರುವ ಮೊಯೀನ್ ಅಲಿ 157.25ರಷ್ಟು ಅದ್ಭುತವಾದ ಸ್ಟ್ರೈಲ್‌ರೇಟ್ ಕೂಡ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿಯೂ ಮಿಂಚಿರುವ ಅಲಿ ಕೇವಲ 7 ರನ್‌ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 7, 2021, 15:54 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X