ಹರಾಜು 2021: ಆಕಾಶ್ ಛೋಪ್ರಾ ಆಯ್ಕೆಯ ಬಹುಬೇಡಿಕೆಯ ವಿದೇಶಿ ಆಟಗಾರರಿವರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಮಧ್ಯಾಹ್ನ ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೆ ಸಿದ್ಧವಾಗಿರುವ ಆಟಗಾರರ ಅಂತಿಮ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೆ.11ರಂದು ಪ್ರಕಟಿಸಿದೆ.
ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿವೆ. ಒಟ್ಟಾರೆ, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಅಸೋಸಿಯೇಟೆಡ್ ದೇಶಗಳ ಆಟಗಾರರು ಹರಾಜಿಗೆ ಸಿದ್ಧವಾಗಿದ್ದಾರೆ.
68 ವಿದೇಶಿ ಆಟಗಾರರು ಸೇರಿದಂತೆ ಸುಮಾರು 1114 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆಯಲ್ಲಿ ಕಡಿತಗೊಳಿಸಿ 292ಕ್ಕೆ ಇಳಿಸಲಾಗಿದೆ. ಈ ಪೈಕಿ ಐವರು ವಿದೇಶಿ ಆಟಗಾರರು ಬಹುಬೇಡಿಕೆ ಹೊಂದಲಿದ್ದಾರೆ ಎಂದು ಮಾಜಿ ಓಪನರ್ ಆಕಾಶ್ ಛೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಯಾವ ಆಟಗಾರರು ಯಾವ ತಂಡಕ್ಕೆ?
ಆಕಾಶ್ ಪ್ರಕಾರ ಮೊದಲಿಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅತಿ ಹೆಚ್ಚು ಬೆಲೆಗೆ ಸೇಲ್ ಆಗಬಲ್ಲರು. ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಆಡಿರುವ ಮ್ಯಾಕ್ಸ್ ವೆಲ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿರುವ ಸಾಧ್ಯತೆಯಿದೆ ಎಂದಿದ್ದಾರೆ.
ಎರಡನೇ ಆಟಗಾರ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಖರೀದಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡ ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಅಕಾಶ್ ಹೇಳಿದ್ದಾರೆ.
ಮಿಕ್ಕಂತೆ ಡೇವಿಡ್ ಮಲಾನ್, ಜೈಲ್ ರಿಚರ್ಡ್ಸನ್, ನಾಥನ್ ಕೌಲ್ಟರ್ ನೈಲ್ ಅಲ್ಲದೆ , ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೊರಿಸ್ ಕೂಡಾ ಬೇಡಿಕೆ ಹೊಂದಿದ್ದಾರೆ. ಅಕಾಶ್ ಪ್ರಕಾರ ಮಲಾನ್ , ಫಿಂಚ್, ಜಾಸನ್ ರಾಯ್ ಗಾಗಿ ಕೆಕೆಆರ್, ಚೆನ್ನೈ, ಆರ್ ಸಿಬಿ ಪೈಪೋಟಿ ನಡೆಸಲಿವೆ. ಜೈಲ್ ರಿಚರ್ಡ್ಸನ್ ಗಾಗಿ ಮುಂಬೈ, ಪಂಜಾಬ್, ಬೆಂಗಳೂರು ಬಿಡ್ ಮಾಡಲಿವೆ. ಕ್ರಿಸ್ ಮೊರಿಸ್, ಕೌಲ್ಟರ್ ನೈಲ್ ಗಾಗಿ ಆರ್ ಸಿಬಿ, ಸಿಎಸ್ ಕೆ, ಪಂಜಾಬ್ ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications