ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಸಿಸ್ ಸ್ಟಾರ್ ಬೌಲರ್ ಆಡುವುದು ಖಚಿತ

ಬೆಂಗಳೂರು, ಆಗಸ್ಟ್ 22: ಐಪಿಎಲ್ 2021ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಮುಂದಿನ ತಿಂಗಳು ಆರಂಭವಾಗಲಿದೆ. ಆಟಗಾರರ ಲಭ್ಯತೆಯ ವಿಚಾರವಾಗಿ ಈಗ ಎಲ್ಲಾ ತಂಡಗಳಿಗೂ ಸ್ಪಷ್ಟನೆಗಳು ದೊರೆಯುತ್ತಿದೆ. ಆಸ್ಟ್ರೇಲಿಯಾ ಇಂಗ್ಲೆಂಡ್ ದೇಶಗಳ ಆಟಗಾರರ ಲಭ್ಯತೆಗೆ ಅಲ್ಲಿನ ಮಂಡಳಿಗಳು ಸ್ರೀನ್ ಸಿಗ್ನಲ್ ನೀಡಿರುವುದು ಫ್ರಾಂಚೈಸಿಗಳ ಚಿಂತೆಯನ್ನು ದೂರವಾಗಿಸಿದಿದೆ. ಈಗ ಆಟಗಾರರು ತಮ್ಮ ವೈಯಕ್ತಿಕ ನಿಲುವುಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರನ ಲಭ್ಯತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಪಷ್ಟವಾಗಿದೆ.

ಎರಡನೇ ಚರಣಕ್ಕೆ ಲಭ್ಯವಾಗುತ್ತಿದ್ದಾರೆ ಸ್ಟಾರ್ ಆಟಗಾರ: ಇನ್ನು ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಪಂದ್ಯಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಹದ ಬೌಲರ್ ಜೋಶ್ ಹ್ಯಾಜಲ್‌ವುಡ್ ಲಭ್ಯವಾಗುತ್ತಿದ್ದಾರೆ. ಈ ಮೂಲಕ ಧೋನಿ ನೇತೃತ್ವದ ತಂಡ ಬೌಲಿಂಗ್ ವಿಭಾಗದಲ್ಲಿ ಮತ್ತಷ್ಟು ಬಲಿಷ್ಠವಾಗುತ್ತಿದೆ. ಈಗಾಗಲೇ ಐಪಿಎಲ್ ಮೊದಲ ಭಾಗದಲ್ಲೊ ಅದ್ಭುತ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಮೂಲಕ ಬೌಲಿಂಗ್‌ನಲ್ಲಿ ಎದುರಾಳಿಗಳುಗೆ ಮತ್ತಷ್ಟು ಕಂಟಕವಾಗಲಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಮೊದಲ ಭಾಗದಲ್ಲಿ ಆಡಿರಲಿಲ್ಲ ಹ್ಯಾಜಲ್‌ವುಡ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಜೋಶ್ ಜ್ಯಾಜಲ್‌ವುಡ್ ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಭಾಗದ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ವೈಯಕ್ತಿಕ ಕಾರಣಗಳನ್ನು ನೀಡಿ ಹ್ಯಾಜಲ್‌ವುಡ್ ಟೂರ್ನಿಯಿಂದ ಹೊರಗುಳಿದಿದ್ದರು. ಈ ಟೂರ್ನಿ ಕೊರೊನಾವೈರಸ್‌ನ ಕಾರಣದಿಂದಾಗಿ ನಂತರ ಮುಂದೂಡಲ್ಪಟ್ಟಿತ್ತು. ಇದೀಗ ಎರಡನೇ ಭಾಗದ ಆವೃತ್ತಿಗೆ ಹ್ಯಾಜಲ್‌ವುಡ್ ಲಭ್ಯವಾಗುತ್ತಿದ್ದಾರೆ.

ವೈಯಕ್ತಿಕ ಕಾರಣಗಳನ್ನು ನೀಡಿ ಜೋಶ್ ಹ್ಯಾಜಲ್‌ವುಡ್ ಮೊದಲ ಭಾಗದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಕಾರಣದಿಂದಾಗಿ ಇನ್ನೋರ್ವ ಆಸ್ಟ್ರೇಲಿಯಾ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಂಡಿತ್ತು. ಜೇಸನ್ ಬೆಹ್ರೆಂಡ್ರಾಫ್ ಅವರೊಂದಿಗೆ ಚೆನ್ನೂ ಸೂಪರ್ ಕಿಂಗ್ಸ್ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಐಪಿಎಲ್ 2021 ಆವೃತ್ತಿಯ ಮೊದಲ ಭಾಗದ ಪಂದ್ಯದಲ್ಲಿ ಬೆಹ್ರೆಂಡ್ರಾಫ್ ಅವರಿಗೆ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ದೊರೆತಿರಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಜೋಶ್ ಹ್ಯಾಜಲ್‌ವುಡ್ ಲಭ್ಯತೆಯ ಬಗ್ಗೆ ಖಚಿತ ಮಾಹಿತಿಯನ್ನು ನೀಡಿದ್ದಾರೆ. ಯುಎನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಎರಡನೇ ಚರಣದ ಐಪಿಎಲ್ ಟೂರ್ನಿಗೆ ಆಸ್ಟ್ರೇಲಿಯಾದ ವೇಗಿ ಭಾಗಿಯಾಗುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ ಕಾಸಿ ವಿಶ್ವನಾಥನ್. ಎರಡನೇ ಹಂತದ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ.

"ಸೆಪ್ಟೆಂಬರ್ 19ರಿಂದ ಆರಂಬವಾಗಲಿರುವ ಎರಡನೇ ಚರಣದ ಐಪಿಎಲ್ ಪಂದ್ಯಗಳಿಗೆ ಲಭ್ಯವಿರುವುದಾಗಿ ಜೋಶ್ ಹ್ಯಾಜಲ್‌ವುಡ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಬಿಸಿಸಿಐ ಕೂಡ ಮೊದಲ ಭಾಗದಲ್ಲಿ ಲಭ್ಯವಿಲ್ಲದಿದ್ದ ಆಟಗಾರರನ್ನು ಎರಡನೇ ಭಾಗದಲ್ಲಿ ಅವರು ಸಮರ್ಥರಿದ್ದು ಲಭ್ಯವಿದ್ದರೆ ಸೇರ್ಪಡೆಗೊಳಿಸಬಹುದು ಎಂದು ಖಚಿತಪಡಿಸಿದೆ. ಹಈಗಾಗಿ ಜೋಶ್ ಹ್ಯಾಜಲ್‌ವುಡ್ ಅವರ ಫಾರ್ಮ್ ಗಮನಿಸಿದರೆ ಅವರು ನಮ್ಮ ತಂಡಕ್ಕೆ ಮತ್ತಷ್ಟು ಸಾಮರ್ಥ್ಯವನ್ನು ತುಂಬಲಿದ್ದಾರೆ" ಎಂದು ಕಾಸಿ ವಿಶ್ವನಾಥನ್ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ಕೋಟಿ ನೀಡಿ ಖರೀದಿ ಮಾಡಿತ್ತು. ಆಸ್ಟ್ರೇಲಿಯಾ ತಂಡದ ಪರವಾಗಿ ಹ್ಯಾಜಲ್‌ವುಡ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಸರಣಿಯಲ್ಲಿ ಆಡಿದ್ದ ಅವರು ನಾಲ್ಕು ಪಂದ್ಯಗಳಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು. ಹ್ಯಾಜಲ್‌ವುಡ್ ಈ ಬಾರಿಯ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಆಸ್ಟ್ರೇಲಿಯಾ ತಂಡದ ಭಾಗವೂ ಆಗಿದ್ದಾರೆ.

ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುತೇಕ ಆಟಗಾರರು ಈಗಾಗಲೇ ದುಬೈಗೆ ತಲುಪಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಧೋನಿ ನೇತೃತ್ವದ ತಂಡ ಈ ಬಾರಿಯ ಟೂರ್ನಿಯಲ್ಲಿ ಯುಎಇಗೆ ತೆರಳಿ ಅಭ್ಯಾಸ ಆರಂಭಿಸಿದ ಮೊದಲ ತಂಡವಾಗಿದೆ. ಎಂಎಸ್ ಧೋನಿ ನೇತೃತ್ವದಲ್ಲಿ ಭಾರತೀಯ ಆಟಗಾರರನ್ನು ಒಳಗೊಂಡಿರುವ ಚೆನ್ನೈ ತಂಡ ಈಗ ಅಭ್ಯಾಸವನ್ನು ಕೂಡ ಆರಂಭಿಸಿದೆ. ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಕರ್ಣ್ ಶರ್ಮಾ, ದೀಪಕ್ ಚಹರ್ ಕೂಡ ಈ ಅಭ್ಯಾಸ ನಡೆಸುತ್ತಿರುವ ತಂಡದ ಭಾಗವಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, August 22, 2021, 9:07 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X