ಐಪಿಎಲ್ 2021: ಸಿಎಸ್‌ಕೆ ವಿರುದ್ಧ 14 ಓವರ್‌ಗೆ ಮುನ್ನವೇ ಗುರಿ ತಲುಪಲು ಬಯಸಿದ್ದೆವು: ರಾಹುಲ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಏಕಾಂಗಿಯಾಗಿ ಪ್ರದರ್ಶಿಸಿದ ಅಮೋಘ ಆಟದಿಂದಾಗಿ ಕೇವಲ 13 ಓವರ್‌ಗಳಲ್ಲಿಯೇ ಪಂಜಾಬ್ ಗೆದ್ದು ಬೀಗಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಾಂತ್ರಿಕವಾಗಿ ಪ್ಲೇಆಫ್ ರೇಸ್‌ನಲ್ಲಿ ಇನ್ನೂ ಉಳಿದುಕೊಂಡಿದೆ. ಈ ಭರ್ಜರಿ ಗೆಲುವು ಸಾಧಿಸುವ ಮುನ್ನ ಪಂಜಾಬ್ ಕಿಂಗ್ಸ್ ತಂಡ ಸ್ಪಷ್ಟವಾದ ಗುರಿಯೊಂದಿಗೆ ಕಣಕ್ಕಿಳಿದಿತ್ತು ಎಂಬುದನ್ನು ನಾಯಕ ಕೆಎಲ್ ರಾಹುಲ್ ವಿವರಿಸಿದ್ದಾರೆ.

ಈ ಭರ್ಜರಿ ಗೆಲುವಿನಿಂದಾಗಿ ಪಂಜಾಬ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಮೂಲಕ ಕೆಕೆಆರ್ ಹಾಗೂ ಮುಂಬೈ ಜೊತೆಗೆ ಪ್ಲೇಆಫ್ ರೇಸ್‌ನಲ್ಲಿ ಮುಂದುವರಿದಿದೆ. ಆದರೆ ಕೆಕೆಆರ್ ಹಾಗೂ ಮುಂಬೈ ತಂಡಗಳಿಗೆ ಒಂದೊಂದು ಪಂದ್ಯ ಉಳಿದಿದ್ದು ಪಂಜಾಬ್ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಆಡಿ ಮುಗಿಸಿದೆ. ಕೆಕೆಆರ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯವನ್ನಾಡುತ್ತಿದ್ದು ಇದು ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪ್ಲೇಆಫ್‌ನ ಮೇಲೂ ಪರಿಣಾಮ ಬೀರುವ ಕಾರಣದಿಂದಾಗಿ ಕುತೂಹಲ ಮೂಡಿಸಿದೆ.

ಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆ

ಇನ್ನು ಪ್ಲೇಆಫ್ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ರನ್‌ರೇಟ್ ಮುಖ್ಯವಾಗಿದ್ದ ಕಾರಣ ಕೆಎಲ್ ರಾಹುಲ್ ಬಳಗ ಆ ಲೆಕ್ಕಾಚಾರದೊಂದಿಗೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದಿತ್ತು ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗಿತ್ತು. ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, 14 ಓವರ್‌ಗಳಿಗಿಂತ ಮೊದಲು ಪಂದ್ಯವನ್ನು ಗೆಲ್ಲು ಸಾಧ್ಯವಾದರೆ ಉತ್ತಮವಾದ ಪ್ಲೇಆಫ್‌ನಲ್ಲಿ ಮುಂದುವರಿಯಲು ಅವಕಾಶವಿದೆ ಎಂದು ತಿಳಿಸಿದ್ದರು. ಹೀಗಾಗಿ ಆ ಗುರಿಯಲ್ಲಿ ಪಂದ್ಯವನ್ನು ಗೆಲ್ಲಲು ಬಯಸಿದ್ದೆವು. ನಮ್ಮ ಯೋಜನೆ ತುಂಬಾ ಸ್ಪಷ್ಟವಾಗಿತ್ತು. ಮೊದಲ ಎಸೆತದಿಂದಲೇ ಮುನ್ನುಗ್ಗಿ ಬಾರಿಸಲು ನನಗೆ ಅನುಮತಿಯೂ ದೊರೆತಿತ್ತು. ನೀವು ನಿಮ್ಮ ಯೋಜನೆಯಲ್ಲಿ ತುಂಬಾ ಸ್ಪಷ್ಟವಾಗಿದ್ದಾಗ ಎಲ್ಲವೂ ಯೋಜನೆಯಂತೆಯೇ ನಡೆಯುತ್ತದೆ. ಎಲ್ಲವೂ ಬ್ಯಾಟ್‌ನ ಮಧ್ಯಕ್ಕೆ ಅಂದುಕೊಂಡಂತೆಯೇ ಬಡಿದಿತ್ತು" ಎಂದು ತಮ್ಮ ಯೋಜನೆಯ ಬಗ್ಗೆ ಕೆಎಲ್ ರಾಹುಲ್ ವಿವರಸಿದ್ದಾರೆ.

ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್

"ನಾನು ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡಲು ಸದಾಸಿದ್ದನಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನನ್ನ ಸ್ಟ್ರೈಕ್‌ರೇಟ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ ಎಂಬುದರ ಬಗ್ಗೆ ನನಗೆ ಅರಿವಿದೆ ಹಾಗೂ ನಾನು ನಿಧಾನವಾಗಿ ಆಡುತ್ತೇನೆ ಎನ್ನುತ್ತಿದ್ದಾರೆ. ಆದರೆ ನನಗೆ ಮತ್ತು ನನ್ನ ತಂಡಕ್ಕೆ ಮಾತ್ರ ನಮ್ಮ ಪಾತ್ರವೇನು ಮತ್ತು ಜವಾಬ್ಧಾರಿಯೇನು ಎಂಬುದು ತಿಳಿದಿದೆ. ಆ ಪಾತ್ರವನ್ನು ನಿರ್ವಹಿಸಲು ನಾನು ಪ್ರಯತ್ನಿಸುತ್ತೇನೆ ಹಾಗೂ ಅದನ್ನು ಪ್ರತಿ ಪಂದ್ಯದಲ್ಲಿಯೂ ತಂಡ ಬಯಸುತ್ತದೆ. ನಾನು ಬಯಸಿದಂತೆ ಆಡಲು ಮುಂದಾದರೆ ತಂಡವನ್ನು ಕುಸಿಯುಂತೆ ಮಾಡುತ್ತೇನೆ ಎಂದು ಭಾಸವಾಗುತ್ತದೆ. ನನಗೆ ಯಾವಾಗಲೂ ನನ್ನ ತಂಡ ಮೊದಲು. ನಾನು ಅದೇ ರೀತಿಯಾಗಿ ಬೆಳೆದಿದ್ದೇನೆ. ಮುಂದೆಯೂ ನಾನು ಅದೇ ರೀತಿಯಾಗಿ ಆಡುತ್ತೇನೆ" ಎಂದಿದ್ದಾರೆ ಕೆಎಲ್ ರಾಹುಲ್.

ಮುಮದುವರಿದು ಮಾತನಾಡಿದ ರಾಹುಲ್ "ಇಂದು ತಂಡ ನನ್ನಿಂದ ಈ ರೀತಿಯ ಆಟವನ್ನು ಬಯಸಿತ್ತು. ಇಂತಾ ಆಟವನ್ನು ಪ್ರದರ್ಶಿಸಲು ನನ್ನಿಂದ ಸಾಧ್ಯವಾಗಿದ್ದಕ್ಕೆ ನಾನು ತುಂಬಾ ಸಂತೋಷಗೊಂಡಿದ್ದೇನೆ. ನೀವು ಉತ್ತಮವಾಗಿ ಆಡಲು ಆರಂಭಿಸಿದಾಗ ಪ್ರತಿ ಎಸೆತವನ್ನು ಕೂಡ ಬಾರಿಸಲು ಸಾಧ್ಯವಾಗುತ್ತದೆ ಎಂಬಂತಾ ಮನಸ್ಥಿತಿಯಿರುತ್ತದೆ. ಆಗ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ಅಂತಾ ಸಂದರ್ಭದಲ್ಲಿ ನನಗೆ ನಾನೇ "ನಾನು ಪವರ್‌ಹಿಟ್ಟರ್ ಅಲ್ಲ" ಎಂಬ ಮಾತನ್ನು ಹೇಳುತ್ತಿರುತ್ತೇನೆ. ನಾನು ಉತ್ತಮ ಟೈಮಿಂಗ್‌ನೊಂದಿಗೆ, ಸರಿಯಾದ ಸ್ಥಾನದಲ್ಲಿ ನಿಂತು ಸೂಕ್ತ ಹೊಡೆತವನ್ನು ಬಾರಿಸುವ ಪ್ರಯತ್ನ ಮಾಡುತ್ತೇನೆ" ಎಂದು ಕೆಎಲ್ ರಾಹುಲ್ ವಿವರಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಲೀಗ್‌ನ ಎಲ್ಲಾ ಪಂದ್ಯಗಳನ್ನು ಮುಗಿಸಿದ್ದು ಮುಂದಿನ ಪಂದ್ಯದಲ್ಲಿ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೋತರೆ ಪ್ಲೇಆಫ್‌ಗೇರುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಕೂಡ ತಾಂತ್ರಿಕವಾಗಿ ಇನ್ನೂ ಪ್ಲೇಆಫ್ ರೇಸ್‌ನಲ್ಲಿ ಮುಂದುವರಿದಿದೆ. ಆದರೆ ಕೆಕೆಆರ್ ವಿರುದ್ಧ ಭಾರೀ ಅಂತರದಿಂದ ಗೆಲ್ಲುವ ಮೂಲಕ ರನ್‌ರೇಟ್‌ನಲ್ಲಿ ಗಣನೀಯ ಏರಿಕೆ ಕಂಡರೆ ಮಾತ್ರವೇ ಅದು ಸಾಧ್ಯವಾಗಲಿದೆ.

ಐಪಿಎಲ್ 2021: ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡ್ತಾರಾ, ಇಲ್ವಾ?ಐಪಿಎಲ್ 2021: ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡ್ತಾರಾ, ಇಲ್ವಾ?

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಸುರೇಶ್ ರೈನಾ, ಚೇತೇಶ್ವರ ಪೂಜಾರ, ಕರ್ನ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮ

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಬೆಂಚ್: ಆದಿಲ್ ರಶೀದ್, ಮನ್ ದೀಪ್ ಸಿಂಗ್, ಜಲಜ್ ಸಕ್ಸೇನಾ, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಷ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, October 7, 2021, 20:36 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X