ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ಸ್‌ಗೆ ಎಂಟ್ರಿ?!

IPL 2021: Kolkata Knight Riders have almost qualified to the last four

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್‌ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 86 ರನ್‌ಗಳ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಬಹುತೇಕ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ಶುಬ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್, ಶಿವಂ ಮಾವಿ ಮತ್ತು ಲಾಕಿ ಫಾರ್ಗುಸನ್ ಮಾರಕ ಬೌಲಿಂಗ್‌ನೊಂದಿಗೆ ಕೆಕೆಆರ್ ಪ್ಲೇ ಆಫ್ಸ್‌ ದಾರಿ ಸುಲಭವಾಗಿಸಿಕೊಂಡಿದೆ.

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್

ಇನ್ನು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನಕ್ಕೇರುವ ಸಣ್ಣ ಅವಕಾಶ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಮಾತ್ರ ಇದೆ. ಆದರೆ ಇದು ಆಗಿ ಹೋಗುವ ಮಾತಲ್ಲ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಜಯದೊಂದಿಗೆ ಕೆಕೆಆರ್ ಈಗಾಗಲೇ ಪ್ಲೇ ಆಫ್ಸ್‌ಗೆ ಪ್ರವೇಶಿಸಿದಂತಾಗಿದೆ.

ಅಕ್ಟೋಬರ್ 8ರ ಶುಕ್ರವಾರ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೆ ಲೀಗ್‌ ಹಂತದ ಕೊನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೂ ಅದು ಈಗಾಗಲೇ ಪ್ಲೇ ಆಫ್ಸ್‌ ಅವಕಾಶ ಕಳೆದುಕೊಂಡಿದೆ. ಆದರೆ ಮುಂಬೈಗೆ ಅವಕಾಶ ಇದೆಯಾದರೂ ಪ್ಲೇ ಆಫ್ಸ್‌ ಸಾಧ್ಯತೆ ಕೂದಲೆಳೆಯಷ್ಟು ಮಾತ್ರ ಉಳಿದಿದೆ.

ಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋ

ಐಪಿಎಲ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಮುಂಬೈ, 12 ಪಾಯಿಂಟ್ಸ್, -0.048 ನೆಟ್ ರನ್‌ರೇಟ್ ಹೊಂದಿದೆ. ಈಗ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ 14 ಪಾಯಿಂಟ್ಸ್, +0.587 ನೆಟ್ ರನ್‌ ರೇಟ್ ಹೊಂದಿದೆ. ಮುಂದಿನ ಪಂದ್ಯ ಗೆದ್ದು ಕೆಕೆಆರ್ ತಂಡವನ್ನು ಮುಂಬೈ ಕೆಳಗಿಳಿಸಬೇಕಾದರೆ ಮುಂಬೈ ತಂಡ ಹೈದರಾಬಾದ್ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಬೇಕು. ಅಷ್ಟೇ ಅಲ್ಲ, ಹೈದರಾಬಾದ್ ವಿರುದ್ಧ ಬರೋಬ್ಬರಿ 170+ ರನ್‌ಗಳಿಂದ ಪಂದ್ಯ ಗೆಲ್ಲಬೇಕು. ಇದು ನಿಜಕ್ಕೂ ಸಾಧ್ಯವಾಗದ ಮಾತು.

Rajasthan Royals ಅವರು ಪಂದ್ಯದ ನಡುವೆ ಹೀಗೆ ಎಡವಟ್ಟು ಮಾಡಿದ್ದೇಕೆ | Oneindia Kannada

ಹೈದರಾಬಾದ್ ಮತ್ತು ಮುಂಬೈ ಪಂದ್ಯಕ್ಕೂ ಮುನ್ನ ಟಾಸ್ ವೇಳೆಯೇ ಮುಂಬೈ ಪ್ಲೇ ಆಫ್ಸ್‌ ಸಾಧ್ಯತೆ ನಿರ್ಧಾರವಾಗಲಿದೆ. ಹೇಗೆಂದರೆ, ಒಂದು ವೇಳೆ ಮುಂಬೈ ಇಂಡಿಯನ್ಸ್ ಟಾಸ್ ಸೋತರೆ ಮುಂಬೈ ಪ್ಲೇ ಆಫ್ಸ್‌ ಅವಕಾಶ ಮುಗಿದಂತೆಯೇ. ಯಾಕೆಂದರೆ ಎಂಐ ಪ್ಲೇ ಆಫ್ಸ್‌ಗೆ ಪ್ರವೇಶಿಸಬೇಕಾದರೆ ಮೊದಲು ಬ್ಯಾಟಿಂಗ್ ಮಾಡಿ 170+ ರನ್‌ನಿಂದ ಪಂದ್ಯ ಗೆಲ್ಲಬೇಕು. ಆದರೆ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ ಆಗ ಮುಂಬೈಗೆ 170+ ರನ್‌ನಿಂದ ಗೆದ್ದು ನೆಟ್ ರನ್‌ರೇಟ್ ಉತ್ತಮಗೊಳಿಸಲು ಅವಕಾಶವೇ ಇರುವುದಿಲ್ಲ.

Story first published: Friday, October 8, 2021, 9:57 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X