ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು: ಪ್ಲೇಆಫ್ ಟಿಕೆಟ್ ಖಚಿತ

IPL 2021: match 48, RCB won against Punjab Kings by 6 runs

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಪ್ಲೇಆಫ್ ಸ್ಥಾನವನ್ನು ಆರ್‌ಸಿಬಿ ಖಚಿತಗೊಳಿಸಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಈ ಸೋಲಿನ ಮೂಲಕ ಪ್ಲೇಆಪ್‌ಗೇರುವ ತನ್ನ ಕನಸನ್ನು ಭಗ್ನಗೊಳಿಸಿದೆ.

ಶಾರ್ಜಾದಲ್ಲಿ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಎರಡು ತಮಡಗಳು ಕೂಡ ಸಾಕಷ್ಟು ಜಿದ್ದಾಜಿದ್ದಿನ ಪ್ರದರ್ಶನ ನೀಡಿತ್ತು. ಆದರೆ ಅಂತಿಮ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೈಮೇಲಾಯಿತು. ಅಂತಿಮವಾಗಿ ಆರ್‌ಸಿಬಿಗೆ ಕೆಎಲ್ ರಾಹುಲ್ ಬಳಗ ಶರಣಾಗಿದೆ. ಈ ಮೂಲಕ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ಸತತ ಗೆಲುವಿನ ಸರಪಳಿಯ ಮೂರಕ್ಕೆ ತುಂಡಾಗಿದೆ. ಇನ್ನು ಪ್ಲೇಆಪ್‌ಗೇರಲು ಆರ್‌ಸಿಬಿ ತಂಡಕ್ಕೆ ಒಂದು ಗೆಲುವು ಅಗತ್ಯವಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧದ ಈ ಗೆಲುವಿನ ಮೂಲಕ ಆರ್‌ಸಿಬಿ ಪ್ಲೇಆಪ್ ಸಾಧನೆಯನ್ನು ಮಾಡಿದೆ.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಆರ್‌ಸಿಬಿ ಶಾರ್ಜಾದ ಸವಾಲಿನ ಪಿಚ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಿತು. ನಂತರ ಮಂದ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆರ್‌ಸಿಬಿ ಆಸರೆಯಾಗುವ ಮೂಲಕ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಮತ್ತೊಂದು ನಿರ್ಣಾಯಕ ಅರ್ಧಶತಕದ ಕೊಡುಗೆ ನೀಡಿದ ಮ್ಯಾಕ್ಸ್‌ವೆಲ್ ಆರ್‌ಸಿಬಿ 164 ರನ್‌ಗಳಿಸಲು ಕಾರಣರಾದರು. ಯುವ ಆರಂಭಿಕ ಆಟಗಾರ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಮಿಂಚಿದರು. ಯುಎಇ ಚರಣದಲ್ಲಿ ಫಾರ್ಮ್ ಕಳೆದುಕೊಂಡಂತಿದ್ದ ಎಬಿ ಡಿವಿಲಿಯರ್ಸ್ ಕೂಡ ಈ ಪಂದ್ಯದಲ್ಲಿ ಲಯಕ್ಕೆ ಮರಳಿದರೂ ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್‌ಗಳಿಸಿತು.

ಮತ್ತೊಂದು ಉತ್ತಮ ಆರಂಭ ಪಡೆದ ಪಂಜಾಬ್: ಪಂಜಾಬ್ ಕಿಂಗ್ಸ್ ತಂಡ ಆರ್‌ಸಿಬಿ ವಿರುದ್ಧದ ಪಂದ್ಯದ್ಲಲಿಯೂ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ನೀಡಿದರು. ಆರ್‌ಸಿಬಿ ಸ್ಪಿನ್ನರ್ ಶಹ್ಬಾಜ್ ಅಹ್ಮದ್ ಕೆಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ರಾಹುಲ್ 35 ಎಸೆತಗಳನ್ನು ಎದುರಿಸಿ 39 ರನ್‌ಗಳಿಗೆ ಔಟಾದರು.

ರನ್ ಗಳಿಸಿದರೆ ಆಗಲ್ಲ, ಪಂದ್ಯ ಸೋತಿದ್ದರೆ ಯಾರು ಹೊಣೆ?; ಪಂಜಾಬ್ ಆಟಗಾರನ ವಿರುದ್ಧ ಸೆಹ್ವಾಗ್ ಕಿಡಿರನ್ ಗಳಿಸಿದರೆ ಆಗಲ್ಲ, ಪಂದ್ಯ ಸೋತಿದ್ದರೆ ಯಾರು ಹೊಣೆ?; ಪಂಜಾಬ್ ಆಟಗಾರನ ವಿರುದ್ಧ ಸೆಹ್ವಾಗ್ ಕಿಡಿ

ಪಂಜಾಬ್‌ಗೆ ಕಾಡಿದ ಚಾಹಲ್: ಇನ್ನು ಇದಾದ ನಂತರ ಆರ್‌ಸಿಬಿ ತಂಡದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ರಾಹುಲ್ ಪಡೆಗೆ ಆಘಾತ ನೀಡಿದರು. ರಾಹುಲ್ ವಿಕೆಟ್ ಪಡೆದ ನಂತರ ಚಾಹಲ್ ನಿಕೋಲಸ್ ಪೂರನ್ ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿರುವ ಪೂರನ್ ಈ ಪಂದ್ಯದಲ್ಲಿಯೂ 3 ರನ್‌ಗಳಿಗೆ ಔಟಾದರು. ಅದಾದ ಬಳಿಕ ಮಯಾಂಕ್ ಅಗರ್ವಾಲ್ ಕೂಡ ಚಾಹಲ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಮಯಾಂಕ್ ಅಗರ್ವಾಲ್ 57 ರನ್‌ಗಳಿಸಿ ಪಂಜಾಬ್‌ಗೆ ಮಹತ್ವದ ಕೊಡುಗೆ ನೀಡಿದರು. ಬಳಿಕ ಸರ್ಫರಾಜ್ ಖಾನ್ ಕೂಡ ಚಾಹಲ್‌ಗೆ ಬೌಲ್ಡ್ ಆಗುವ ಮೂಲಕ ಪೆವಿಲಿಯನ್‌ಗೆ ಸೇರಿಕೊಂಡರು.

ಗೆದ್ದು ಬೀಗಿದ ಆರ್‌ಸಿಬಿ: ಬಳಿಕ ಆರ್‌ಸಿಬಿ ಬೌಲರ್‌ಗಳು ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾ ಸಾಗಿದರು. ಶಾರೂಖ್ ಖಾನ್ ಹಾಗೂ ಮೋಯ್ಸಿಸ್ ಹೆನ್ರಿಕ್ಯೂಸ್ ಅಂತಿಮ ಪ್ರಯತ್ನ ನಡೆಸಿದರಾದರೂ ಆರ್‌ಸಿಬಿ ಬೌಲರ್‌ಗಳ ಶಿಸ್ತಿನ ದಾಲಿಯ ಮುಂದೆ ಅದು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಆರ್‌ಸಿಬಿ ನೀಡಿದ 165 ರನ್‌ಗಳ ಗುರಿಯ ಬದಲಾಗಿ 158 ರನ್‌ಗಳಿಸಲಷ್ಟೇ ರಾಹುಲ್ ಪಡೆ ಯಶಸ್ವಿಯಾಯಿತು. ಈ ಮೂಲಕ ಈ ಪಂದ್ಯವನ್ನು 6 ರನ್‌ಗಳ ಅಂತರದಿಂದ ಪಂಜಾಬ್ ಕಿಂಗ್ಸ್ ಸೋಲು ಕಂಡಿದೆ.

ಸಂಕ್ಷಿಪ್ತ ಸ್ಕೋರ್‌ ಹೀಗಿದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್‌ (ವಿರಾಟ್ ಕೊಹ್ಲಿ 25, ದೇವದತ್ ಪಡಿಕ್ಕಲ್ 40, ಗ್ಲೆನ್‌ ಮ್ಯಾಕ್ಸ್‌ವೆಲ್‌ 57, ಎಬಿ ಡಿ'ವಿಲಿಯರ್ಸ್‌ 23; ಮೊಹಮ್ಮದ್‌ ಶಮಿ 39 ರನ್‌ಗಳಿಗೆ 3 ವಿಕೆಟ್, ಮೊಯ್ಸೆಸ್‌ ಹೆನ್ರಿಕ್ಯೂಸ್ 12 ರನ್‌ಗಳಿಗೆ 3 ವಿಕೆಟ್).

ಪಂಜಾಬ್ ಕಿಂಗ್ಸ್: ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 158 ರನ್ (ಕೆಎಲ್‌ ರಾಹುಲ್ 39 ರನ್, ಮಯಾಂಕ್ ಅಗರ್ವಾಲ್ 57 ರನ್, ಐಡೆನ್ ಮಾರ್ಕ್ರಮ್ 20 ರನ್; ಯುಜ್ವೇಂದ್ರ ಚಹಲ್ 29ರನ್‌ಗಳಿಗೆ 3 ವಿಕೆಟ್).

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಟಿಮ್ ಡೇವಿಡ್, ಆಕಾಶ್ ದೀಪ್, ಸುಯಾಶ್ ಪ್ರಭುದೇಸಾಯಿ
ಪಂಜಾಬ್ ಕಿಂಗ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

RCB ತಂಡದಲ್ಲಿ ಮ್ಯಾಕ್ಸ್​ವೆಲ್ ಚೆನ್ನಾಗಿ ಆಡ್ತಾ ಇರೋದು ಯಾಕೆ ಗೊತ್ತಾ? | Oneindia Kannada

ಬೆಂಚ್: ಆದಿಲ್ ರಶೀದ್, ಮನ್ ದೀಪ್ ಸಿಂಗ್, ಕ್ರಿಸ್ ಜೋರ್ಡಾನ್, ಜಲಜ್ ಸಕ್ಸೇನಾ, ಮುರುಗನ್ ಅಶ್ವಿನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಫ್ಯಾಬಿಯನ್ ಅಲೆನ್, ದೀಪಕ್ ಹೂಡಾ

Story first published: Monday, October 4, 2021, 10:31 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X