ಕ್ರಿಸ್‌ ಗೇಲ್‌ಗೆ ಭಾರತದ ಮೇಲಿರುವ ಪ್ರೀತಿಗೆ ಉದಾಹರಣೆ ಕೊಟ್ಟ ಶಮಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ವೆಸ್ಟ್‌ ಇಂಡೀಸ್‌ ಸ್ಟಾರ್ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಬಗ್ಗೆ ಹಲವಾರು ಮಂದಿ ಮಾತನಾಡುತ್ತಿರುತ್ತಾರೆ. ಇದಕ್ಕೆ ಕಾರಣ 41ರ ಹರೆಯದ ಗೇಲ್ ವಯಸ್ಸಿನ ಹಂಗಿಲ್ಲದೆ ಕ್ರಿಕೆಟ್‌ನಲ್ಲಿ ಮುಂದುವರೆಯುತ್ತಿರುವುದು. ಗೇಲ್ ಬಗೆಗಿನ ನಿರೀಕ್ಷೆಯೂ ಕಡಿಮೆಯೇನೂ ಆಗುತ್ತಿಲ್ಲ.

ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!

ಭಾರತೀಯ ಕ್ರಿಕೆಟಿಗರು ಮತ್ತು ಕ್ರಿಸ್‌ ಗೇಲ್ ಮಧ್ಯೆ ಒಳ್ಳೆಯ ಸ್ನೇಹ ಬಾಂಧವ್ಯವಿದೆ. ವಿರಾಟ್ ಕೊಹ್ಲಿ, ಯುಜುವೇಂದ್ರ ಚಾಹಲ್ ಸೇರಿದಂತೆ ಅನೇಕ ಭಾರತೀಯ ಆಟಗಾರರ ಜೊತೆ ಗೇಲ್ ತರಲೆ, ತಮಾಷೆಯಲ್ಲಿ ತೊಡಗಿಕೊಂಡಿದ್ದ ಉದಾಹರಣೆಗಳೂ ಇವೆ.

ಗೇಲ್‌ಗೆ ಭಾರತೀಯ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಪ್ರೀತಿಯಿದೆಯಂತೆ. ಇಲ್ಲಿನ ಆಚಾರ ವಿಚಾರ, ಭಾಷೆಗಳ ಕಲಿಯುವ ಯತ್ನವನ್ನು ಗೇಲ್ ಮಾಡುತ್ತಿದ್ದಾರಂತೆ. ಇದನ್ನು ಪಂಜಾಬ್‌ ಕಿಂಗ್ಸ್‌ ಸಹ ಆಟಗಾರ, ವೇಗಿ ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್‌ಗೆ ಸೋಮವಾರ ಶಸ್ತ್ರ ಚಿಕಿತ್ಸೆ, 3 ತಿಂಗಳು ವಿಶ್ರಾಂತಿ

'ನಾವು ಹಿಂದಿ ಸಾಂಗ್ ಆಡುವಾಗ ಕ್ರಿಸ್ ಗೇಲ್ ಹಿಂದಿ ಮಾತನಾಡುತ್ತಾರೆ. ಅದೇ ವೇಳೆ ನಮ್ಮ ತಂಡದ ಪಂಜಾಬಿ ಕ್ರಿಕೆಟರ್‌ಗಳು ಪಂಜಾಬಿ ಭಾಷೆಯನ್ನೂ ಗೇಲ್‌ಗೆ ಹೇಳಿಕೊಡುತ್ತಿದ್ದಾರೆ,' ಎಂದು ಎಬಿಪಿ ಆನಂದ ಜೊತೆ ಮಾತನಾಡಿದ ಶಮಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 20:14 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X