ಐಪಿಎಲ್ 2021: ದುಬೈನಲ್ಲಿ ಅಭ್ಯಾಸ ಆರಂಭಿಸಿದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್

ದುಬೈ, ಆಗಸ್ಟ್ 20: ಈ ಬಾರಿಯ ಐಪಿಎಲ್‌ನ ಎರಡನೇ ಚರಣದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ದುಬೈಗೆ ತಲುಪಿದೆ. ಸದ್ಯ ಕ್ವಾರಂಟೈನ್ ಕೂಡ ಪೂರೈಸಿರುವ ಧೋನಿ ಬಳಗ ಅಭ್ಯಾಸವನ್ನು ಆರಂಭಿಸಿದೆ. ಗುರುವಾರದಿಂದ ಸಿಎಸ್‌ಕೆ ತಂಡದ ಸದಸ್ಯರು ದುಬೈನಲ್ಲಿರುವ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಅಭ್ಯಾಸವನ್ನು ಆರಂಭಿಸಿದ್ದಾರೆ. ಧೋನಿ ನೇತೃತ್ವದ ಈ ತಂಡದಲ್ಲಿ ಸ್ಟಾರ್ ಆಟಗಾರರಾದ ಸುರೇಶ್ ರೈನಾ, ದೀಪಕ್ ಚಾಹರ್ ಮತ್ತು ರಾಬಿನ್ ಉತ್ತಪ್ಪ ಸೇರಿದಂತೆ ಉಳಿದ ಸದಸ್ಯರು ಕೂಡ ಇದ್ದು ಆಗಸ್ಟ್ 13ರಂದು ದುಬೈಗೆ ತಲುಪಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಂಡದ ಸದಸ್ಯರು ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸದ ಅವಧಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆಗಸ್ಟ್ 13ರಂದು ದುಬೈ ತಲುಪಿದ್ದ ಧೋನಿ ನೇತೃತ್ವದ ತಂಡ ಬಳಿಕ ನೇರವಾಗಿ ದುಬೈನಲ್ಲಿರುವ ಪಾಲ್ಮ್ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿತ್ತು.

ಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರುಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರು

ಈ ಬಾರಿಯ ಐಪಿಎಲ್ ಕಳೆದ ಮೇ ತಿಂಗಳಿನಲ್ಲಿ ಟೂರ್ನಿಯ ಮಧ್ಯ ಭಾಗದಲ್ಲಿದ್ದಾಗ ಕೊರೊನಾವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಟೂರ್ನಮೆಂಟ್‌ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಎರಡನೇ ಚರಣದ ಈ ಪಂದ್ಯಾವಳಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕದನದ ಮೂಲಕ ಆರಂಭವಾಗಲಿದೆ.

ಒಟ್ಟು ಮೂರು ತಾಣಗಳಲ್ಲಿ ಇನ್ನುಳಿದ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಅಬುದಾಬಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪಂದ್ಯಗಳಿಗೆ ಚಾಲನೆ ನೀಡಲಿದೆ. ಈ ಬಾರಿಯ ಆವೃತ್ತಿಯಲ್ಲಿ ಶಾರ್ಜಾದಲ್ಲಿ ನಡೆಯುವ ಪಂದ್ಯ ರಾಯಲ್ಸ್ ಚಾಲೆಂಜರ್ಸ್ ಬೆಂಗಳುರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಮಡಗಳ ನಡುವೆ ಸೆಪ್ಟೆಂಬರ್ 24ರಿಮದ ಆರಂಭವಾಗಲಿದೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಉಳಿದಿರುವ ಪಂದ್ಯಗಳ ಪೈಕಿ 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.

ಮೊದಲ ಆವೃತ್ತಿಯಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಬಯೋಬಬಲ್‌ನ ಒಳಗೆ ಕೊರೊನಾವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಅನುವಾರ್ಯವಾಗಿ ಟೂರ್ನಿಯನ್ನು ಮುಂದೂಡಬೇಕಾಯಿತು. ಈಗ ಮತ್ತಷ್ಟು ಕಠಿಣ ಕ್ರಮಗಳನ್ನು ಬಿಸಿಸಿಐ ತೆಗೆದುಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ 46 ಪುಟಗಳ ಆರೋಗ್ಯ ಮಾರ್ಗಸೂಚಿಯನ್ನು ಬಿಸಿಸಿಐ ಸಿದ್ಧಪಡಿಸಿದ್ದು ಟೂರ್ನಿಯಲ್ಲಿ ಭಾಗಿಯಾಗುವ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳು ಇವುಗಳನ್ನು ಪಾಲಿಸಬೇಕಿದೆ.

ಇನ್ನು ಯುಎಇನಲ್ಲಿ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳು ನಡೆಯುತ್ತಿರುವುದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮ ಕರಾಳ ನೆನಪುಗಳನ್ನು ಅಳಿಸುವ ವಿಶ್ವಾಸದಲ್ಲಿದೆ. 2020ರ ಆವೃತ್ತಿಯ ಐಪಿಎಲ್ ಟೂರ್ನಿ ಸಂಪೂರ್ಣವಾಗಿ ಯುಎಇನಲ್ಲಿ ನಡೆದಿದ್ದು ಇದರಲ್ಲಿ ಧೋನಿ ನೇತೃತ್ವದ ತಂಡ ಸಂಪೂರ್ಣವಾಗಿ ಹಿನ್ನೆಡೆಯನ್ನು ಅನುಭವಿಸಿತ್ತು. ಐಪಿಎಲ್ ಇತಿಹಾಸದಲ್ಲಿ ತಾನು ಪಾಲ್ಗೊಂಡ ಟೂರ್ನಿಯಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು.

KCA ನಿಂದ ರಣಜಿ ಆಟಗಾರನಿಗೆ ಅವಮಾನ ! | Oneindia Kannada

ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಈವರೆಗಿನ ಪಂದ್ಯಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಡಿರುವ ಮೊದಲ ಏಳು ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಯಾರೂ ಊಹಿಸದ ರೀತಿಯಲ್ಲಿ ಧೋನಿ ಪಡೆ ತಿರುಗಿ ಬಿದ್ದಿದೆ. ಈಗ ಉಳಿದ ಪಂದ್ಯಗಳನ್ನಾಡಲು ಯುಎಇಗೆ ತೆರಳಿದ್ದು ಅಲ್ಲಿಯೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 15:39 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X