ಐಪಿಎಲ್ 2021: ಆರ್‌ಸಿಬಿಗೆ ಇಂದು ಪಂಜಾಬ್ ಕಿಂಗ್ಸ್ ಎದುರಾಳಿ: ಸಂಭಾವ್ಯ ತಂಡ

ಐಪಿಎಲ್‌ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇರಾಟ್ ಕೊಹ್ಲಿ ಪಡೆ ಹಾಗೂ ಕೆಎಲ್ ರಾಹುಲ್ ಬಳಗ ಅಂತಿಮ ಪಂದ್ಯಗಳನ್ನು ಗೆದ್ದಿದ್ದು ತಮ್ಮ ಗೆಲವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಆರ್‌ಸಿಬಿ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಲು ಬಯಸಿದ್ದರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ.

ಅಂಕಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಮೂರನೇ ಸ್ಥಾನದಲ್ಲಿದ್ದು ಟಾಪ್ 2ರಲ್ಲಿ ಸ್ಥಾನ ಪಡೆಯಲು ಕಣ್ಣಿಟ್ಟಿದೆ. ಹೀಗಾಗಿ ಮುಂದಿನ ಮೂರು ಪಂದ್ಯಗಳನ್ನು ಕೂಡ ಗೆದ್ದರೆ ಮಾತ್ರವೇ ಇದಕ್ಕೆ ಅವಕಾಶವಿದೆ. ಅದಕ್ಕೂ ಮುನ್ನ ಆರ್‌ಸಿಬಿ ಪ್ಲೇಆಫ್‌ಗೆ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಬೇಕು.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಶಾರ್ಜಾ ಕ್ರೀಡಾಂಗಣ ನಿಧಾನಗತಿಯ ಪಿಚ್ ಹೊಂದಿದ್ದು ಮತ್ತೊಂದು ಲೋಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಶಾರ್ಜಾದಲ್ಲಿ ಈ ಬಾರಿಯ ಐಪಿಎಲ್‌ನ ಮೊದಲ ನಾಲ್ಕು ಪಂದ್ಯಗಳ ಸರಾಸರಿ ಸ್ಕೋರ್ ಕೇವಲ 135 ರನ್. ಟಾಸ್ ಗೆದ್ದ ತಂಡದ ನಾಯಕ ಮೊದಲಿಗೆ ಬ್ಯಾಟಿಂಗ್ ನಡೆಸುವ ಸಾಧ್ಯತೆಯಿದೆ.

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಮೂಲದ ಫ್ರಾಂಚೈಸಿ ಹಾಗೂ ಆರ್‌ಸಿಬಿ ಈವರೆಗೆ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದ್ದು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಇದರಲ್ಲಿ ಭಾರತದಲ್ಲಿ ಈ ಎರಡು ತಂಡಗಳ ಮುಖಾಮುಖಿಯಲ್ಲಿ ಎರಡು ತಂಡಗಳು ಕೂಡ ತಲಾ 11 ಗೆಲುವು ಸಾಧಿಸಿದ್ದರೆ ವಿದೇಶದಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿದ್ದು ಇದರಲ್ಲಿ 4ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ 1ರಲ್ಲಿ ಮಾತ್ರವೇ ಆರ್‌ಸಿಬಿ ಗೆದ್ದಿದೆ.

ಐಪಿಎಲ್ 2021: ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕಐಪಿಎಲ್ 2021: ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ

ಇನ್ನು ಈ ಎರಡು ತಂಡಗಳ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡದ ಸರಾಸರಿ ಸ್ಕೋರ್ 159 ಆಗಿದ್ದರೆ ಪಂಜಾಬ್ ತಂಡದ ಸರಾಸರಿ ಸ್ಕೋರ್ 158 ಆಗಿದೆ. ಇನ್ನು ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳ ಹಣಾಹಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಯಶಸ್ಸು ಸಾಧಿಸಿದ್ದಾರೆ. ಕೊಹ್ಲಿ ಪಂಜಾಬ್ ವಿರುದ್ಧ 716 ರನ್‌ಗಳಿಸಿದ್ದಾರೆ. ಪಂಜಾಬ್ ತಂಡದ ಪರವಾಗಿ ರಾಹುಲ್ ಹೆಚ್ಚು ರನ್‌ಗಳಿಸಿದ್ದು 412 ರನ್‌ಗಳಿಸಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ಮುಖಾಮುಖಿಯಲ್ಲಿ 22 ವಿಕೆಟ್ ಪಡೆದಿರುವ ಯುಜುವೇಂದ್ರ ಚಾಹಲ್ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ. ಪಂಜಾಬ್ ಪರವಾಗಿ ಎಂ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ 6 ವಿಕೆಟ್ ಪಡೆದು ಅತಿ ಹೆಚ್ಚಿನ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!

ಆರ್‌ಸಿಬಿ ಸಂಭಾವ್ಯ ತಂಡ:

ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಡಾನ್ ಕ್ರಿಶ್ಚಿಯನ್, ವನಿಂದು ಹಸರಂಗ/ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್

RCB ತಂಡದಲ್ಲಿ ಮ್ಯಾಕ್ಸ್​ವೆಲ್ ಚೆನ್ನಾಗಿ ಆಡ್ತಾ ಇರೋದು ಯಾಕೆ ಗೊತ್ತಾ? | Oneindia Kannada

ಪಿಬಿಕೆಎಸ್ ಸಂಭಾವ್ಯ ತಂಡ:
ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಮ್, ಶಾರುಖ್ ಖಾನ್, ಹರ್ ಪ್ರೀತ್ ಬ್ರಾರ್, ಫ್ಯಾಬಿಯನ್ ಅಲೆನ್/ಆದಿಲ್ ರಶೀದ್, ಕ್ರಿಸ್ ಜೋರ್ಡಾನ್/ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 9:00 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X