ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್!

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 12) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್ 4 ರನ್‌ನಿಂದ ಸೋತಿದ್ದು ನಿಜ. ಆದರೆ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್‌ಗಾಗಿ ಮಿನುಗಿದ್ದು ಅಷ್ಟೇ ನಿಜ. ನಾಯಕನಾಗಿ ಆಡಿದ ಚೊಚ್ಚಲ ಪಂದ್ಯದಲ್ಲೇ ಸ್ಯಾಮ್ಸನ್ ಸಾಲು ಸಾಲು ದಾಖಲೆಗಳನ್ನು ಬರೆದಿದ್ದಾರೆ.

ಐಪಿಎಲ್ ಪಂದ್ಯದ ವೇಳೆ ನಿತೀಶ್ ರಾಣಾ 3 ಬೆರಳು ತೋರಿಸಿದ್ಯಾಕೆ?!

ಈ ಸೀಸನ್‌ನಲ್ಲಿ ಮೊದಲ ಶತಕದ ಮೈಲಿಗಲ್ಲು ಸ್ಥಾಪಿಸಿರುವ ಸಂಜು ಸ್ಯಾಮ್ಸನ್ ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ದಾಖಲೆ ನಿರ್ಮಿಸಿದ್ದಾರೆ. ನಗದು ಶ್ರೀಮಂತ ಟೂರ್ನಿಯಲ್ಲಿ ಸಂಜು ಬರೆದಿರುವ ದಾಖಲೆಗಳ ಪಟ್ಟಿ, ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ.

ನಾಯಕನಾಗಿ ಮೊದಲ ಶತಕ

ನಾಯಕನಾಗಿ ಮೊದಲ ಶತಕ

2021ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ನಾಯಕನಾಗಿ ಮೊದಲ ಪಂದ್ಯ ಆಡಿದ್ದ ಸಂಜು ಸ್ಯಾಮ್ಸನ್ 63 ಎಸೆತಗಳಲ್ಲಿ 199 ರನ್ ಸಿಡಿಸಿದರು. ಇದರಲ್ಲಿ 12 ಫೋರ್ಸ್, 7 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಸಂಜು ಈ ಸೀಸನ್‌ನ ಮೊದಲ ಶತಕ ದಾಖಲಿಸಿದರಲ್ಲದೆ ಐಪಿಎಲ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೂ ಕಾರಣರಾಗಿದ್ದಾರೆ. ಇದು ಸ್ಯಾಮ್ಸನ್ ಐಪಿಎಲ್‌ನಲ್ಲಿ ಬಾರಿಸಿದ ಮೂರನೇ ಶತಕ ಕೂಡ ಹೌದು.

ಐಪಿಎಲ್‌ನಲ್ಲಿ ಸಂಜು ಶತಕಗಳು

ಐಪಿಎಲ್‌ನಲ್ಲಿ ಸಂಜು ಶತಕಗಳು

* ರೈಸಿಂಗ್ ಪುಣೆ ವಾರಿಯರ್ಸ್ ವಿರುದ್ಧ, ಪುಣೆ, 2017

* ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ, ಹೈದರಾಬಾದ್, 2019

* ಪಂಜಾಬ್ ಕಿಂಗ್ಸ್ ವಿರುದ್ಧ, ಮುಂಬೈ, 2021*

ಐಪಿಎಲ್‌ನಲ್ಲಿ ಅತ್ಯಧಿಕ ಶತಕ ದಾಖಲೆಗಳು

ಐಪಿಎಲ್‌ನಲ್ಲಿ ಅತ್ಯಧಿಕ ಶತಕ ದಾಖಲೆಗಳು

* ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 6 ಶತಕಗಳು

* ವಿರಾಟ್ ಕೊಹ್ಲಿ, ಭಾರತ, 5 ಶತಕಗಳು

* ಶೇನ್ ವಾಟ್ಸನ್, ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 4 ಶತಕಗಳು

* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಸಂಜು ಸ್ಯಾಮ್ಸನ್ (ಭಾರತ), 3 ಶತಕಗಳು

ಸ್ಯಾಮ್ಸನ್ ವಿಶೇಷ ದಾಖಲೆಗಳು

ಸ್ಯಾಮ್ಸನ್ ವಿಶೇಷ ದಾಖಲೆಗಳು

* ಐಪಿಎಲ್‌ನಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ ಭಾರತದ ಎರಡನೇ ಆಟಗಾರ (3 ಶತಕಗಳು), ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ (5 ಶತಕಗಳು) ಇದ್ದಾರೆ.

* ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 3 ಶತಕಗಳನ್ನು ಬಾರಿಸಿದ ಅತೀ ಕಿರಿಯ ಆಟಗಾರ. ಸ್ಯಾಮ್ಸನ್‌ಗೀಗ 26ರ ಹರೆಯ.

* ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಉತ್ತಮ ರನ್ ಸಾಧನೆ (104 ಇನ್ನಿಂಗ್ಸ್‌ಗಳಲ್ಲಿ 2703 ರನ್, 3 ಶತಕ, 13 ಅರ್ಧ ಶತಕ).

For Quick Alerts
ALLOW NOTIFICATIONS
For Daily Alerts
Story first published: Tuesday, April 13, 2021, 8:15 [IST]
Other articles published on Apr 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X