ಐಪಿಎಲ್ 2021: T20 ಕ್ರಿಕೆಟ್‌ನಲ್ಲಿ ದಾಖಲೆ 10 ಸಾವಿರ ರನ್‌ಗಳ ಸರದಾರನಾದ ವಿರಾಟ್ ಕೊಹ್ಲಿ

ಮುಂಬೈ ವಿರುದ್ಧ ಪಂದ್ಯ ನಮ್ ಕಡೆ‌ ವಾಲಿದ್ದು ಯಾವಾಗ ಗೊತ್ತಾ? | Oneindia Kannada

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಹೊಸಾ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ಮಾದರಿಯಲ್ಲಿ 10,000 ರನ್‌ಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆಯನ್ನು ಬರೆಯಲು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳಿಸಿದ್ದರೆ ಸಾಕಿತ್ತು. ಇದನ್ನು ಸಾಧಿಸಿದ ಕೊಹ್ಲಿ ಚುಟುಕು ಮಾದರಿಯಲ್ಲಿಯೂ ತಮ್ಮ ಪಾರುಪತ್ಯವನ್ನು ಮುಂದುವರಿಸಿದ್ದಾರೆ.

ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ 9987 ರನ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದರು. 10 ಸಾವಿರಕ್ಕೂ ಅಧಿಕ ಟಿ20 ರನ್‌ಗಳಿಸಿದ ಆಟಗಾರರ ಪಟ್ಟಿಯನ್ನು ಸೇರಿಕೊಂಡ ಐದನೇ ಆಟಗಾರನಾಗಿದ್ದಾರೆ ವಿರಾಟ್ ಕೊಹ್ಲಿ. ಈ ಪಟ್ಟಿಯಲ್ಲಿ ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಅಗ್ರ ಸ್ಥಾನದಲ್ಲಿದ್ದು 14,261 ರನ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್</a><a class=" title="ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್" />ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ಇನ್ನು ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟಿ20 ನಾಯಕತ್ವ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದರು. ಟಿ20 ವಿಶ್ವಕಪ್‌ನ ಬಳಿಕ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ಹಾಗೂ ಈ ಬಾರಿಯ ಐಪಿಎಲ್‌ನ ನಂತರ ಆರ್‌ಸಿಬಿ ತಂಡದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಆದರೆ ಆರ್‌ಸಿಬಿ ತಂಡದ ಆಟಗಾರನಾಗಿ ತಾನು ಮುಂದುವರಿಯಲಿದ್ದೇನೆ ಎಂದು ಕೊಹ್ಲಿ ಇದೇ ಸಂದರ್ಭದಲ್ಲಿ ಘೋಷಿಸಿದ್ದರು.

ವಿರಾಟ್ ಕೊಹ್ಲಿ ಈವರೆಗೆ 313 ಟಿ20 ಪಂದ್ಯಗಳನ್ನು ಆಡಿದ್ದಾರೆ. 133.95 ಸ್ಟ್ರೈಕ್‌ರೇಟ್‌ನಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದು 2007ರಿಂದ 2021ರ ಅವಧಿಯಲ್ಲಿ ಅವರು 5 ಶತಕ ಮತ್ತು 72 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

ಇನ್ನು ಆರ್‌ಸಿಬಿ ಈ ಬಾರಿಯ ಐಪಿಎಲ್‌ನ ಮೊದಲ ಚರಣದ ಪಂದ್ಯಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡಿತ್ತು. ಆದರೆ ದುಬೈನಲ್ಲಿ ನಡೆಯುತ್ತಿರುವ ಈ ಬಾರಿಯ ಆವೃತ್ತಿಯ ಎರಡನೇ ಚರಣದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಪಡೆ ಸೋಲು ಕಂಡಿದ್ದು ಮುಂಬೈ ವಿರುದ್ಧ ಗೆದ್ದು ಮತ್ತೆ ಗೆಲವುಇನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

ಬೆಂಚ್: ಟಿಮ್ ಡೇವಿಡ್, ನವದೀಪ್ ಸೈನಿ, ವಾನಿಂದು ಹಸರಂಗ, ದುಷ್ಮಂತ ಚಮೀರಾ, ಸಚಿನ್ ಬೇಬಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಸುಯಾಶ್ ಪ್ರಭುದೇಸಾಯಿ, ಆಕಾಶ್ ದೀಪ್

ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಬೆಂಚ್: ಹರ್ಭಜನ್ ಸಿಂಗ್, ಶಕೀಬ್ ಅಲ್ ಹಸನ್, ಟಿಮ್ ಸೌಥಿ, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವೈಭವ್ ಅರೋರಾ

For Quick Alerts
ALLOW NOTIFICATIONS
For Daily Alerts
Story first published: Sunday, September 26, 2021, 20:46 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X