ಆರ್‌ಸಿಬಿ ನಾಯಕತ್ವ ತ್ಯಜಿಸುವ ನಿರ್ಧಾರ ಮಾಡಿದ್ದೇಕೆ ಕೊಹ್ಲಿ: ಮೌನ ಮುರಿದ ಆರ್‌ಸಿಬಿ ನಾಯಕ

ಈ ಬಾರಿಯ ಐಪಿಎಲ್‌ನ ಯುಎಇ ಚರಣದ ಪಂದ್ಯಗಳ ಆರಂಭಕ್ಕೆ ಮುನ್ನವೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆರ್‌ಸಿಬಿ ತಂಡದ ನಾಯಕನಾಗಿ ಇದು ತನ್ನ ಕೊನೆಯ ಆವೃತ್ತಿ ಎಂದು ಕೊಹ್ಲಿ ಘೋಷಣೆ ಮಾಡಿದ್ದರು. ಅದಕ್ಕೂ ಮುನ್ನ ಟಿ20 ವಿಶ್ವಕಪ್‌ನ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು ಕೊಹ್ಲಿ. ಹೀಗಾಗಿ ಕೊಹ್ಲಿಯ ಈ ನಿರ್ಧಾರದ ಬಗ್ಗೆ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಚರ್ಚೆಯನ್ನು ನಡೆಸಿದ್ದಾರೆ.

ಈಗ ನಾಯಕತ್ವ್ ತ್ಯಜಿಸುವ ನಿರ್ಧಾರದ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಮತ್ತೊಮ್ಮೆ ಮಾತನಾಡಿದ್ದಾರೆ. ಆರ್‌ಸಿಬಿ ತಂಡ ಪ್ಲೇಆಫ್‌ನಲ್ಲಿ ಕೆಕೆಆರ್ ತಂಡವನ್ನು ಎದುರಿಸುವ ಮುನ್ನಾದಿನ ಈ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸುವ ತಮ್ಮ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ, ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಎಂಟ್ರಿಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ, ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಎಂಟ್ರಿ

ಹಾಗಾದರೆ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಲು ಕಾರಣವೇನು? ವಿರಾಟ್ ಕೊಹ್ಲಿ ನೀಡಿದ ಕಾರಣಗಳು ಏನು? ಮುಂದೆ ಓದಿ..

ಕೊಹ್ಲಿ ನೀಡಿದ ಕಾರಣವಿದು!

ಕೊಹ್ಲಿ ನೀಡಿದ ಕಾರಣವಿದು!

ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸಲು ಪ್ರಮುಖ ಕಾರಣ ಕೆಲಸದ ಹೊರೆ ಎಂಬುದಾಗಿ ವಿರಾಟ್ ಕೊಹ್ಲಿ ಹೇಳಿದ್ದಾರೆ. "ವರ್ಕ್‌ಲೋಡ್ ನಾಯಕತ್ವ ತ್ಯಜಿಸಲು ಇರುವ ಪ್ರಮುಖವಾದ ಕಾರಣ. ನೀಡಿದ ಜವಾಬ್ಧಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವುದಕ್ಕೆ ನಾನು ಬಯಸುತ್ತೇನೆ. ವಹಿಸಿಕೊಂಡಿರುವ ಜವಾಬ್ಧಾರಿಗೆ 120 ಶೇಕಡಾದಷ್ಟು ಶ್ರಮ ನೀಡಲು ಸಾಧ್ಯವಾಗದಿದ್ದರೆ ಆ ಸ್ಥಾನದಲ್ಲಿ ಮುಂದಿವರಿಯಲು ನಾನು ಬಯಸುವುದಿಲ್ಲ. ಈ ವಿಚಾರ ಯಾವಾಗಲೂ ನನ್ನ ತಲೆಯಲ್ಲಿತ್ತು" ಎಂದಿದ್ದಾರೆ ಆರ್‌ಸಿಬಿ ತಮಡದ ನಾಯಕ ವಿರಾಟ್ ಕೊಹ್ಲಿ. ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಈವರೆಗೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಕೊಹ್ಲಿ

ಈವರೆಗೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಕೊಹ್ಲಿ

ಆರ್‌ಸಿಬಿ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ವಿರಾಟ್ ಕೊಹ್ಲಿ ಜವಾಬ್ಧಾರಿ ವಹಿಸಿಕೊಂಡಿದ್ದು 2013ರಲ್ಲಿ. ಅದಾದ ಬಳಿಕ ಸತತವಾಗಿ ತಂಡವನ್ನು ಮುನ್ನಡೆಸಿಕೊಮಡು ಬರುತ್ತಿದ್ದಾರೆ. ಸಾಕಷ್ಟು ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಕೊಹ್ಲಿ ಪಡೆ ಈವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೊಹ್ಲಿ ನಾಯಕತ್ವದ ವಿಚಾರಬಾಗಿ ಸಾಕಷ್ಟು ಬಾರಿ ಪ್ರಶ್ನೆಗಳು ಎದುರಾಗಿತ್ತು.

ಅಂತಿಮ ಪಂದ್ಯದವರೆಗೂ ಆರ್‌ಸಿಬಿ ಆಟಗಾರನಾಗಿ ಮುಂದುವರಿಯುವೆ

ಅಂತಿಮ ಪಂದ್ಯದವರೆಗೂ ಆರ್‌ಸಿಬಿ ಆಟಗಾರನಾಗಿ ಮುಂದುವರಿಯುವೆ

ವಿರಾಟ್ ಕೊಹ್ಲಿ ಈ ಭಾರಿಯ ಐಪಿಎಲ್‌ನ ಬಳಿಕ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಂಡ ಸಂದರ್ಣದಲ್ಲಿ ತಮ್ಮ ಪ್ರಕಟಣೆಯಲ್ಲಿ ಅಭಿಮಾನಿಗಳಿಗೆ ಒಂದು ಭರವಸೆಯನ್ನು ನೀಡಿದ್ದಾರೆ. ತಾನು ಆರ್‌ಸಿಬಿ ತಂಡದ ನಾಯಕತ್ವವನ್ನು ಮಾತ್ರವೇ ತ್ಯಜಿಸುತ್ತಿದ್ದು ಆಟಗಾರನಾಗಿ ಮುಂದಿನ ಆವೃತ್ತಿಗಳಲ್ಲಿ ಮುಂದಿವರಿಯುತ್ತೇನೆ ಎಂದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡುವವರೆಗೂ ಆರ್‌ಸಿಬಿ ತಂಡದ ಆಟಗಾರನಾಗಿಯೇ ಮುಂದುವರಿಯಲು ನಾನು ಬಯಸುತ್ತೇನೆ ಎಂದಿದ್ದಾರೆ ವಿರಾಟ್ ಕೊಹ್ಲಿ.

ಕೆ. ಎಲ್ ರಾಹುಲ್ RCBಯ ನೆಕ್ಟ್ಸ್ ಕ್ಯಾಪ್ಟನ್ ಆಗೋದು ಕನ್ಫರ್ಮ್!! | Oneindia Kannada
ಕೆಕೆಆರ್ ವಿರುದ್ಧ ಸೆಣೆಸಲು ಆರ್‌ಸಿಬಿ ಸಜ್ಜು

ಕೆಕೆಆರ್ ವಿರುದ್ಧ ಸೆಣೆಸಲು ಆರ್‌ಸಿಬಿ ಸಜ್ಜು

ಈಗ ಪ್ಲೇಆಪ್‌ಗೆ ವಿರಾಟ್ ಕೊಹ್ಲಿ ಪಡೆ ಪ್ರವೇಶ ಪಡೆದುಕೊಂಡಿದ್ದು ಈ ಹಂತದಲ್ಲಿ ಆರ್‌ಸಿಬಿ ತಂಡಕ್ಕೆ ಇಯಾನ್ ಮಾರ್ಗನ್ ನೇತೃತ್ವದ ಕೊಲ್ಕತ್ತಾ ತಂಡ ಎದುರಾಳಿಯಾಗಿದೆ. ಇಂದು ನಡೆಯುವ ಈ ಪಂದ್ಯದಲ್ಲಿ ವಿರಾಟ್ ಪಡೆ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಇಲ್ಲಿ ಗೆದ್ದ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿ ಅಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 18 - October 26 2021, 03:30 PM
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
Predict Now

For Quick Alerts
ALLOW NOTIFICATIONS
For Daily Alerts
Story first published: Monday, October 11, 2021, 12:02 [IST]
Other articles published on Oct 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X