ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಅಹಂ ಪಕ್ಕಕ್ಕಿಟ್ಟು ಆಡಬೇಕಿದೆ: ಡೆಲ್ಲಿ ನಾಯಕನಿಗೆ ಮಾಜಿ ಕ್ರಿಕೆಟಿಗನಿಂದ ಖಡಕ್ ಸಲಹೆ!

IPL 2022: Aakash Chopra said Rishabh Pant needs to keep his ego aside ahead of MI vs DC match

ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಶನಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು ಪ್ಲೇಆಫ್‌ಗೆ ಉಳಿದಿರುವ ಒಂದು ಸ್ಥಾನಕ್ಕೆ ಎರಡು ತಂಡಗಳು ತೀವ್ರ ಪೈಪೋಟಿಯನ್ನು ನಡೆಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಒಂದು ಸ್ಥಾನಕ್ಕಾಗಿ ಕಣ್ಣಿಟ್ಟಿದೆ. ಆದರೆ ಆರ್‌ಸಿಬಿ ತಂಡದ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಗಿದಿದ್ದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಫಲಿತಾಂಶವೇ ಆರ್‌ಸಿಬಿ ತಮಡದ ಪ್ಲೇಆಫ್ ಭವಿಷ್ಯವನ್ನು ಕೂಡ ನಿರ್ಧರಿಸಲಿದೆ.

ಈ ನಿರ್ಣಾಯಕ ಪಂದ್ಯದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ವಿಚಾರವಾಗಿ ಮಾತನಾಡಿದ್ದಾರೆ. ರಿಷಭ್ ಪಂತ್ ನಾಯಕನಾಗಿ ಅಂತಿಮ ಪಂದ್ಯದಲ್ಲಿ ಯಾವ ರೀತಿ ತಂಡವನ್ನು ಮುನ್ನಡೆಸಬೇಕು ಎಂಬ ಬಗ್ಗೆ ಚೋಪ್ರ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಅಂತಿಮ ಗುರಿ: ನಿಖತ್ ಜರೀನ್ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಅಂತಿಮ ಗುರಿ: ನಿಖತ್ ಜರೀನ್

ಹಾಗಾದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಆಕಾಶ್ ಚೋಪ್ರ ಹೇಳಿದ್ದೇನು? ಮುಂದೆ ಓದಿ..

ತನ್ನ ಅಹಂ ಬದಿಗಿಟ್ಟು ಆಡಲಿಳಿಯಲಿ

ತನ್ನ ಅಹಂ ಬದಿಗಿಟ್ಟು ಆಡಲಿಳಿಯಲಿ

ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದ ಹಿನ್ನೆಲೆಯಲ್ಲಿ ಆಕಾಶ್ ಚೋಪ್ರ ರಿಷಭ್ ಪಂತ್‌ಗೆ ತನ್ನ ಅಹಂ ಬದಿಗಿಟ್ಟು ಕಣಕ್ಕಿಳಿಯಲಿ ಎಂದು ಸಲಹೆಯನ್ನು ನೀಡಿದ್ದಾರೆ. "ರಿಷಭ್ ಪಂತ್ ತನ್ನ ಅಹಂ ಅನ್ನು ಬದಿಗಿಟ್ಟು ಆಡುವ ಅವಶ್ಯಕತೆಯಿದೆ. ಮತ್ತು ದೊಡ್ಡ ಆಯಾಮದಿಂದ ಈ ಪಂದ್ಯವನ್ನು ನೀಡಬೇಕಿದೆ. ಅವರು ಈವರೆಗೆ ನೀಡಿರುವ ಪ್ರದರ್ಶನಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಆಟಗಾರನಾಗಿದ್ದಾರೆ. ಡೆಲ್ಲಿ ತಂಡ ಗೆದ್ದ ಪಂದ್ಯಗಳಲ್ಲಿಯೂ ಅವರ ಸರಾಸರಿ ಉತ್ತಮವಾಗಿಲ್ಲ. ಅವರಿಂದ ಮ್ಯಾಚ್ ವಿನ್ನಿಂಗ್ ಕೊಡುಗೆ ಬರಲೇಯಿಲ್ಲ" ಎಂದು ಪಂತ್ ಪ್ರದರ್ಶನದ ಬಗ್ಗೆ ಆಕಾಶ್ ಚೋಪ್ರ ಮಾತನಾಡಿದ್ದಾರೆ.

ಸರ್ಫರಾಜ್‌ಗೆ ನ್ಯಾಯ ಒದಗಿಸಿಲ್ಲ

ಸರ್ಫರಾಜ್‌ಗೆ ನ್ಯಾಯ ಒದಗಿಸಿಲ್ಲ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ ಸರ್ಫರಾಜ್ ಖಾನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದಿದ್ದಾರೆ. ಸರ್ಫರಾಜ್‌ಗೆ ಮತ್ತಷ್ಟು ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಬಹುದಾಗಿತ್ತು. ತಂಡದಲ್ಲಿ ಸ್ಥರವಾಗಿ ಅವಕಾಶವನ್ನು ಮ್ಯಾನೇಜ್‌ಮೆಂಟ್ ನಿಡದ ಕಾರಣ ಆತನ ಆತ್ಮವಿಶ್ವಾಸ ಕಡಿಮೆಯಾಯೊತು. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಸ್ಪೋಟಕ ಪ್ರದರ್ಶನ ನಿಡುವ ಮೂಲಕ ಭರವಸೆ ಮುಡಿಸಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.

ಪ್ಲೇಆಪ್‌ಗೇರುವ ಕೊನೆಯ ತಂಡ ಯಾವುದು?

ಪ್ಲೇಆಪ್‌ಗೇರುವ ಕೊನೆಯ ತಂಡ ಯಾವುದು?

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಮೊದಲ ತಂಡವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದ್ದು ಅಗ್ರ ತಂಡವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅಂತಿಮ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡ ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಿದ್ದು ಈ ಎರಡು ತಂಡಗಳು ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದ್ದು ಪ್ಲೇಆಫ್‌ಗೇರುವ ಅಂತಿಮ ಅವಕಾಶ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡಗಳಿಗೆ ಉಳಿಸುಕೊಂಡಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದರೆ ಆರ್‌ಸಿಬಿ ಲೀಗ್ ಹಂತದಿಂದಲೇ ಹೊರಬೀಳಲಿದೆ.

ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಸರ್ಫರಾಜ್ ಖಾನ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (WK), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (WK), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಜಯದೇವ್ ಉನದ್ಕತ್/ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್

Story first published: Saturday, May 21, 2022, 16:23 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X