ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್ ಆರ್‌ಸಿಬಿ ತೆಕ್ಕೆಗೆ? : ವಾರ್ನರ್ ಪ್ರತಿಕ್ರಿಯೆಯಿಂದ ಹೆಚ್ಚಾಯ್ತು ಅಭಿಮಾನಿಗಳ ಕುತೂಹಲ

IPL 2022: David Warner interesting reply to fan about to join RCB

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ. ಮಹಾ ಹರಾಜಿಗೂ ಮುನ್ನ ನಡೆದ ರೀಟೈಬ್ ಪ್ರಕ್ರಿಯೆಯಲ್ಲಿ ಸನ್‌ರೈರರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್ ಹಾಗೂ ಉಮ್ರಾನ್ ಅಲಿಕ್ ಅವರನ್ನು ತಂಡದಲ್ಲಿ ಉಳಿದುಕೊಳ್ಳುವ ಮೂಲಕ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್‌ನಿಂದ ಹೊರಗುಳಿಯುವುದು ಖಚಿತವಾಯಿತು.

ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಈ ಸ್ಪೋಟಕ ಆರಂಭಿಕ ಆಟಗಾರ ಮುಂದಿನ ಐಪಿಎಲ್‌ನಲ್ಲಿ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಕೆಲ ತಂಡಗಳ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಸೇರಿಕೊಳ್ಳಲಿ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಡೇವಿಡ್ ವಾರ್ನರ್ ನೀಡಿದ ಪ್ರತಿಕ್ರಿಯೆ ಈಗ ಆರ್‌ಸಿಬಿ ಅಭಿಮಾನಿಗಳ ಕುತೂಹಲ ಹೆಚ್ಚುವಂತೆ ಮಾಡಿದೆ. ಆಸ್ಟ್ರೇಲಿಯಾದ ಈ ಪ್ರಮುಖ ಆಟಗಾರ ಆರ್‌ಸಿಬಿ ಪರವಾಗಿ ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಕುತೂಹಲ ಹೆಚ್ಚಿಸಿದೆ.

2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ

2021ರ ಐಪಿಎಲ್ ಆವೃತ್ತಿ ವಾರ್ನರ್ ಪಾಲಿಗೆ ಕಹಿ ನೆನಪು

2021ರ ಐಪಿಎಲ್ ಆವೃತ್ತಿ ವಾರ್ನರ್ ಪಾಲಿಗೆ ಕಹಿ ನೆನಪು

ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಪ್ರತಿ ಆವೃತ್ತಿಯಲ್ಲಿಯೂ ಅಬ್ಬರಿಸುತ್ತಾ ಮುನ್ನುಗ್ಗಿದ ಆಟಗಾರ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಕೆಲ ಆವೃತ್ತಿಗಳಲ್ಲಿ ಮುನ್ನಡೆಸಿದ ವಾರ್ನರ್ ತಂಡವನ್ನು ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರುವಂತೆ ಮಾಡಿದ್ದರು. ಪ್ರತಿ ಆವೃತ್ತಿಯಲ್ಲಿಯೂ ರನ್ ಮಳೆ ಹರಿಸುತ್ತಿದ್ದ ವಾರ್ನರ್ ಅನೇಕ ಐಪಿಎಲ್ ದಾಖಲೆಗಳನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್‌ನ ಅಪಾಯಕಾರಿ ತಂಡಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ಕೂಡ ಒಂದು ಎನ್ನಲು ವಾರ್ನರ್ ಪ್ರಮುಖ ಕಾರಣ. ಆದರೆ ಕಳೆದ ಬಾರಿ ವಾರ್ನರ್ ಕಳಪೆ ಫಾರ್ಮ್ ಪ್ರದರ್ಶಿಸಿದರು. ಆರಂಭದಿಮದಲೇ ವಾರ್ನರ್ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಮೊದಲಿಗೆ ನಾಯಕತ್ವದಿಂದ ಕೆಳಗಿಸಿಳಿಸಿದ ಎಸ್‌ಆರ್‌ಹೆಚ್ ಫ್ರಾಂಚೈಸಿ ನಂತರ ಆಡುವ ಬಳಗದಿಂದಲೂ ಹೊರಗಿಟ್ಟಿತ್ತು. ಈ ಬೆಳವಣಿಗೆಯಿಂದ ಎಸ್‌ಆರ್‌ಹೆಚ್ ಫ್ರಾಂಚೈಸಿ ಹಾಗೂ ವಾರ್ನರ್ ಮಧ್ಯೆ ಬಿರುಕಿಗೆ ಕಾರಣವಾಯಿತು.

ಅಭಿಮಾನಿ ಪ್ರಶ್ನೆಗೆ ವಾರ್ನರ್ ಉತ್ತರ

ಅಭಿಮಾನಿ ಪ್ರಶ್ನೆಗೆ ವಾರ್ನರ್ ಉತ್ತರ

ಇನ್ನು ಡೇವಿಡ್ ವಾರ್ನರ್ ಸನ್‌ರೈಡರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದ ನಂತರ ಅಭಿಮಾನಿಗಳು ನಿರಂತರವಾಗಿ ವಾರ್ನರ್ ಬಳಿ ಪ್ರಶ್ನೆಗಳನನ್ಉ ಕೇಲುತ್ತಲೇ ಇದ್ದಾರೆ. ಆಸ್ಟ್ರೇಲಯಾ ಕ್ರಿಕೆಟರ್ ಕೂಡ ಇದಕ್ಕೆ ಉತ್ತರಿಸುತ್ತಿದ್ದಾರೆ. ಹೀಗೆ ಆರ್‌ಸಿಬಿ ಅಭಿಮಾನಿಯೊಬ್ಬರು ಕೂಡ ಆರ್‌ಸಿಬಿ ತಂಡ ನಿಮ್ಮನ್ನು ಬಯಸುತ್ತಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. ಇದಕ್ಕೆ ಡೇವಿಡ್ ವಾರ್ನರ್ ಕೂಡ ಪ್ರತಿಕ್ರಿಯೆ ನೀಡಿದ್ದು ತಾನು ಕೂಡ ಆರ್‌ಸಿಬಿ ತಂಡದ ಪರವಾಗಿ ಆಡಲು ಬಯಸುತ್ತಿದ್ದೇನೆ" ಎಂದಿದ್ದಾರೆ. ಡೇವಿಡ್ ವಾರ್ನರ್ ಅವರ ಈ ಮಾತುಗಳು ಆರ್‌ಸಿಬಿ ತಂಡದ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಕೊಹ್ಲಿ, ಮ್ಯಾಕ್ಸಿಗೆ ಸಾಥ್ ನೀಡುತ್ತಾರಾ ವಾರ್ನರ್

ಕೊಹ್ಲಿ, ಮ್ಯಾಕ್ಸಿಗೆ ಸಾಥ್ ನೀಡುತ್ತಾರಾ ವಾರ್ನರ್

ಈ ಬಾರಿಯ ಐಪಿಎಲ್ ಮಹಾ ಹರಾಜಿಗೆ ಮುನ್ನ ಆರ್‌ಸಿಬಿ ನಾಯಕ ವಿರಾಟ್ ಕೊಹಲಿ ಜೊತೆಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಎರಡನೇ ಆಯ್ಕೆಯ ಆಟಗಾರನಾಗಿ ರೀಟೈನ್ ಮಾಡಿಕೊಂಡಿದೆ. ಈಗ ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳಿಗೆ ಡೇವಿಡ್ ವಾರ್ನರ್ ಕೂಡ ಸಾಥ್ ನೀಡಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ. ಮೊಹಮ್ಮದ್ ಸಿರಾಜ್ ಆರ್‌ಸಿಬಿ ರೀಟೈನ್ ಮಾಡಿಕೊಂಡಿರುವ ಮತ್ತೋರ್ವ ಆಟಗಾರನಾಗಿದ್ದಾರೆ.

South Africa ವಿರುದ್ಧದ ಸರಣಿಗೆ ಈ ಆಟಗಾರರು ಅನುಮಾನ | Oneindia Kannada
ಹೊಸ ತಂಡಕ್ಕೆ ಸೇರ್ಪಡೆಯಾಗುತ್ತಾರಾ ವಾರ್ನರ್

ಹೊಸ ತಂಡಕ್ಕೆ ಸೇರ್ಪಡೆಯಾಗುತ್ತಾರಾ ವಾರ್ನರ್

ಇನ್ನು ಮುಂದಿನ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ. ಈಗಾಗಲೇ ಇರುವ ತಂಡಗಳಿಗೆ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿದಂತೆಯೇ ಈ ಎರಡು ಹೊಸ ತಂಡಗಳಿಗೂ ಹರಾಜು ಪ್ರಕ್ರಿಯೆಗೆ ಮುನ್ನ ಗರಿಷ್ಠ ಮೂವರು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಅವಕಾಶ ನೀಡಲಾಗಿದೆ. ಈಗಾಗಲೇ ಹರಾಜು ಪಟ್ಟಿಗೆ ಬಿಡುಗಡೆಯಾಗಿರುವ ಆಟಗಾರರ ಪೈಕಿ ಮೂವರು ಆಟಗಾರರನ್ನು ಈ ಎರಡು ಫ್ರಾಂಚೈಸಿಗಳು ತಂಡಕ್ಕೆ ಸೇರ್ಪಡೆಗೊಳಿಸಬಹುದಾಗಿದೆ. ಈ ಎರಡು ತಂಡಗಳ ಪೈಕಿ ಯಾವುದಾದರೂ ಒಂದು ಹೊಸ ತಂಡ ಡೇವಿಡ್ ವಾರ್ನರ್ ಅವರನ್ನು ತೆಕ್ಕೆಗೆ ಹಾಕಿಕೊಂಡರೆ ಅಚ್ಚರಿಯಿಲ್ಲ.

Story first published: Wednesday, December 8, 2021, 13:18 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X