ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್ ಸೆಣೆಸಾಟ: ಯಾರು ಗೆದ್ದರೂ ಆರ್‌ಸಿಬಿಗೆ ಹಿನ್ನಡೆ!

IPL 2022: Delhi Capitals and Punjab Kings face off in a do-or-die match

ಈ ಬಾರಿಯ ಐಪಿಎಲ್‌ನ ಲೀಗ್ ಹಂತ ನಿರ್ಣಾಯಕ ಹಂತಕ್ಕೆ ಕಾಲಿಟ್ಟಿದ್ದು ಇಂದು ಮತ್ತೊಂದು ಮಹತ್ವದ ಪಂದ್ಯ ನಡೆಯಲಿದೆ. ಪ್ಲೇ ಆಫ್ ಹಂತಕ್ಕೆ ಕಾಲಿಡಲು ಕಾಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಆರ್‌ಸಿಬಿ ತಂಡಕ್ಕೆ ಹಿನ್ನಡೆಯಾಗಲಿದೆ ಎಂಬುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೇಸರದ ಸಂಗತಿ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಸ್ತುತ ತಲಾ 12 ಪಂದ್ಯಗಳು ಆಡಿದ್ದು ಆರು ಗೆಲುವು ಹಾಗೂ ಆರು ಸೋಲು ಅನುಭವಿಸಿದೆ. ಹೀಗಾಗಿ ಎರಡೂ ತಂಡಗಳ ಖಾತೆಯಲ್ಲೀಗ ತಲಾ 12 ಅಂಕಗಳಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದ ತಂಡದ ಅಂಕ 14ಕ್ಕೇರಲಿದ್ದು ಇಷ್ಟೇ ಅಂಕವನ್ನು ಹೊಂದಿರುವ ಆರ್‌ಸಿಬಿಯನ್ನು ಹಿಂದಿಕ್ಕಲಿದೆ. ಆರ್‌ಸಿಬಿ ತಂಡದ ನೆಟ್‌ರನ್‌ರೇಟ್ ಈ ಎರಡೂ ತಂಡಗಳಿಗಿಂತ ಭಾರೀ ಹಿಂದಿರುವುದು ಈ ಹಿನ್ನಡೆಗೆ ಕಾರಣವಾಗಲಿದೆ.

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಇಂದು ಗೆದ್ದ ತಂಡಕ್ಕೆ ಪ್ಲೇಆಫ್ ಅವಕಾಶ ಹೆಚ್ಚು: ಇನ್ನು ಇಂದಿನ ಪಂದ್ಯ ಯಾಕೆ ಬಹಳ ಮಹತ್ವ ಪಡೆದುಕೊಂಡಿದೆಯೆಂದರೆ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇಆಫ್ ಅವಕಾಶ ಹೆಚ್ಚಾಗಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಇಂದು ಗೆದ್ದ ತಂಡ ಪಡೆಯಲಿದ್ದು ಅಂತಿಮ ಪಂದ್ಯವನ್ನು ಕೂಡ ಗೆದ್ದುಕೊಂಡರೆ ಪ್ಲೇಆಫ್ ಟಿಕೆಟ್ ಖಚಿತವಾಗಲಿದೆ. ಹೀಗಾಗಿ ಈ ಪಂದ್ಯ ಈ ಎರಡು ತಂಗಳಿಗೂ ಮಹತ್ವದ್ದಾಗಿದೆ.

ಇನ್ನು ಈ ಎರಡು ತಂಡಗಳ ನಡುವಿನ ಹೆಡ್ ಟು ಹೆಡ್ ಮುಖಾಮುಖಿಯನ್ನು ಗಮನಿಸಿದಾಗಲೂ ಈ ಎರಡು ತಂಡಗಳ ನಡುವೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವುದು ಸಾಬೀತುಪಡಿಸುತ್ತದೆ. ಮುಖಾಮುಖಿಯಾಗಿರುವ 29 ಪಂದ್ಯಗಳ ಪೈಕಿ ಪಂಜಾಬ್ 14 ಪಂದ್ಯಗಳಲ್ಲಿ ಗೆಲಿವು ಸಾಧಿಸಿದ್ದರೆ ಡೆಲ್ಲಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಣ್ಣ ಅಂತರದ ಮೇಲುಗೈ ಸಾಧಿಸಿದೆ.

IPL 2022: Delhi Capitals and Punjab Kings face off in a do-or-die match

ಪಂಜಾಬ್ ಕಿಂಗ್ಸ್ ಸ್ಕ್ವಾಡ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್(ಸಿ), ಜಿತೇಶ್ ಶರ್ಮಾ(ಡಬ್ಲ್ಯೂ), ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್, ಸಂದೀಪ್ ಶರ್ಮಾ, ಶಾರುಖ್ ಖಾನ್, ಪ್ರಭ್‌ಸಿಮ್ರಾನ್ ಸಿಂಗ್, ಓಡಿಯನ್ ಸ್ಮಿತ್, ಬೆನ್ನಿ ಹೋವೆಲ್, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಪ್ರೇರಕ್ ಮಂಕಡ್, ಇಶಾನ್ ಪೊರೆಲ್, ಅಥರ್ವ ಟೈಡೆ, ನಾಥನ್ ಎಲ್ಲಿಸ್, ವೈಭವ್ ಅರೋರಾ, ಅಂಶ್ ಪಟೇಲ್, ರಾಜ್ ಬಾವಾ

Thomas Cup: ಕ್ರಿಕೆಟ್ನಲ್ಲಿ ವಿಶ್ವಕಪ್ ನಷ್ಟೇ ಸ್ಪೆಷಲ್ ಈ ಥಾಮಸ್ ಕಪ್:ಯಾಕೆ ಗೊತ್ತಾ? | Oneindia Kannada

ದೆಹಲಿ ಕ್ಯಾಪಿಟಲ್ಸ್ ತಂಡ: ಶ್ರೀಕರ್ ಭರತ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (w/c), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಅನ್ರಿಚ್ ನಾರ್ಟ್ಜೆ, ಮನ್ದೀಪ್ ಸಿಂಗ್, ಸರ್ಫರಾಜ್ ಖಾನ್, ಟಿಮ್ ಸೀಫರ್ಟ್ , ಲುಂಗಿ ಎನ್‌ಗಿಡಿ, ರಿಪಾಲ್ ಪಟೇಲ್, ಯಶ್ ಧುಲ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ವಿಕ್ಕಿ ಓಸ್ತ್ವಾಲ್

Story first published: Monday, May 16, 2022, 11:09 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X