ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್‌ಗೆ ಮತ್ತೆ ಸ್ಥಾನ ನೀಡಬೇಕು: ಸುನಿಲ್ ಗವಾಸ್ಕರ್

Dinesh Karthik

ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್‌, ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆರ್‌ಸಿಬಿ ಪರ ಫಿನಿಷರ್ ಆಗಿ ಮಿಂಚುತ್ತಿರುವ ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ.

ದಿನೇಶ್ ಕಾರ್ತಿಕ್‌ರ ಈ ಪ್ರದರ್ಶನ ಕುರಿತು ಮಾತನಾಡಿರುವ ಲಿಟ್ಲ್‌ ಮಾಸ್ಟರ್ ಸುನಿಲ್ ಗವಾಸ್ಕರ್, ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ರೆ ಕೆಳಕ್ರಮಾಂಕದಲ್ಲಿ ಉತ್ತಮ ಜವಾಬ್ದಾರಿ ನಿಭಾಯಿಸಬಲ್ಲರು ಎಂದಿದ್ದಾರೆ.

ಆರ್‌ಸಿಬಿ ಅದ್ಭುತ ಆಟವಾಡುತ್ತಿರುವ ದಿನೇಶ್ ಕಾರ್ತಿಕ್ ಆರು ಪಂದ್ಯಗಳಲ್ಲಿ 209.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಒಂದು ಅರ್ಧಶತಕ ಸಹ ಗಳಿಸಿದ್ದಾರೆ. ಅದ್ರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಜೇಯ 66ರನ್‌ಗಳ ನೆರವಿನಿಂದ ಡೆಲ್ಲಿ ತಂಡದ ವಿರುದ್ಧ ಆರ್‌ಸಿಬಿ ಗೆಲುವು ಕಂಡಿತು. ಒಟ್ಟಾರೆ ಆರು ಪಂದ್ಯಗಳಲ್ಲಿ ಕಾರ್ತಿಕ್ 18 ಬೌಂಡರಿ ಹಾಗೂ 14 ಸಿಕ್ಸರ್ ಸಹಿತ 197 ರನ್ ಕಲೆಹಾಕಿದ್ದಾರೆ.

ಆರ್‌ಸಿಬಿ ಪರ ಫಿನಿಷರ್ ಆಗಿ ಕಾಣಿಸಿಕೊಳ್ಳುತ್ತಿರುವ ದಿನೇಶ್ ಕಾರ್ತಿಕ್ ಎಬಿ ಡಿವಿಲಿಯರ್ಸ್ ಸ್ಥಾನ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಮಂಗಳವಾರ(ಏ. 19) ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟವಾಡುತ್ತಿದ್ದು, ಡಿಕೆ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ.

ಭಾರತ ತಂಡದಲ್ಲಿ ಸ್ಥಾನ ನೀಡಬೇಕು: ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ ಅವರು ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ತಮ್ಮ ಬ್ಯಾಟಿಂಗ್ ಮೂಲಕ ಆಟದ ದಿಕ್ಕನ್ನ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಹೇಳಿದ್ದಾರೆ. ಇದು ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ಭಾರತ ತಂಡಕ್ಕೆ ಮರುಸೇರ್ಪಡೆಗೆ ಅವಕಾಶವಿದೆ ಎಂದಿದ್ದಾರೆ.

"ಖಂಡಿತವಾಗಿಯೂ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಆತನ ಆಟವನ್ನ ನೋಡಬೇಕಾಗುತ್ತದೆ. ಅವರು ತಮ್ಮ ಪ್ರದರ್ಶನದಿಂದ ಎದುರಾಳಿಯನ್ನ ಕೆಣಕುತ್ತಿದ್ದಾರೆ. ತನ್ನ ತಂಡ ಆರ್‌ಸಿಬಿಗಾಗಿ ಎಲ್ಲಾ ಮಾಡುತ್ತಿದ್ದಾನೆ. ಅವರು ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಭಾಗವಾಗಲು ಬಯಸುತ್ತಾರೆ'' ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೆಂಚುರಿ ಬಾರಿಸುವುದಕ್ಕೆ ಎದುರಾದ ಸಮಸ್ಯೆಯನ್ನು ಬಿಚ್ಚಿಟ್ಟ Faf Du Plessis | Oneindia Kannada

ದಿನೇಶ್ ಕಾರ್ತಿಕ್ ಕೊನೆಯ ಬಾರಿಗೆ 2019ರ ಐಸಿಸಿ ವಿಶ್ವಕಪ್‌ನ್ಲಿ ಭಾರತ ಪರ ಆಡಿದ್ದರು. 37 ವರ್ಷದ ದಿನೇಶ್ ಕಾರ್ತಿಕ್‌ ಆ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಆದ್ರೆ ಗವಾಸ್ಕರ್ ಪ್ರಕಾರ ಡಿಕೆಗೆ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ನೀಡಬೇಕಿದೆ.

Story first published: Wednesday, April 20, 2022, 10:07 [IST]
Other articles published on Apr 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X