ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿನೇಶ್ ಕಾರ್ತಿಕ್‌ಗಾಗಿ ಈ ತ್ಯಾಗಕ್ಕೆ ಸಿದ್ಧವಾಗಿದ್ದ ನಾಯಕ: ಫಾಫ್ ಡು ಪ್ಲೆಸಿಸ್ ಕುತೂಹಲಕಾರಿ ಹೇಳಿಕೆ

IPL 2022: Faf du Plessis said he is considered retiring out for Dinesh Kartiks arrival
SRH ವಿರುದ್ಧದ ಪಂದ್ಯದಲ್ಲಿ ಫಾಫ್ ಎಂಥಾ ತ್ಯಾಗ ಮಾಡೋಕೆ ಹೊರಟಿದ್ರು ಗೊತ್ತಾ? | Oneindia Kannada

ಭಾನುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿಯೇ ಎಸ್‌ಆರ್‌ಹೆಚ್ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿಗೆ ಆರ್‌ಸಿಬಿ ಸೇಡು ತೀರಿಸಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ಅಂತಿಮ ಕ್ಷಣದವರೆಗೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನಿಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದರು. ಆದರೆ ಒಂದು ಹಂತದಲ್ಲಿ ತಾನು ದಿನೇಶ್ ಕಾರ್ತಿಕ್‌ಗಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳೂವ ಬಗ್ಗೆ ಯೋಚಿಸಿದ್ದೆ ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್. ಪಂದ್ಯದ ಮುಕ್ತಾಯದ ಬಳಿಕ ಫಾಫ್ ಈ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದರು.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಹಾಗಾದರೆ ಫಾಪ್ ಡು ಪ್ಲೆಸಿಸ್ ಎಸ್‌ಆರ್‌ಹೆಚ್ ವಿರುದ್ಧದ ಗೆಲುವಿನ ನಂತರ ಹೇಳಿದ್ದೇನು? ಮುಂದೆ ಓದಿ..

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡಿಕೆ

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡಿಕೆ

ಈ ಬಾರಿಯ ಆವೃತ್ತಿಯಲ್ಲಿ ಅಂತಿಮ ಹಂತದಲ್ಲಿ ಆರ್‌ಸಿಬಿ ತಂಡದ ಸ್ಕೋರ್ ಗತಿಯನ್ನು ಹೆಚ್ಚಿಸುವಲ್ಲಿ ದಿನೇಶ್ ಕಾರ್ತಿಕ್ ಬಹಳ ದೊಡ್ಡ ಪಾತ್ರವಹಿಸುತ್ತಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅನುಭವವನ್ನು ಅದ್ಭುತವಾಗಿ ಬಳಸಿಕೊಂಡು ಮಿಂಚಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಡಿಕೆ ಕೇವಲ 8 ಎಸೆತಗಳನ್ನು ಎದುರಿಸಿ ಭರ್ಜರಿ 30 ರನ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರಣದಿಂದಾಗಿ ಆರ್‌ಸಿಬಿ 193 ರನ್‌ಗಳ ಬೃಹತ್ ಗುರಿಯನ್ನು ನೀಡಲು ಸಾಧ್ಯವಾಗಿತ್ತು. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಲ್ಲದೆ ಕುತೂಹಲಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.

ಡಿಕೆಗಾಗಿ ವಿಕೆಟ್ ಒಪ್ಪಿಸಲು ಚಿಂತಿಸಿದ್ದ ಫಾಫ್

ಡಿಕೆಗಾಗಿ ವಿಕೆಟ್ ಒಪ್ಪಿಸಲು ಚಿಂತಿಸಿದ್ದ ಫಾಫ್

"ದಿನೇಶ್ ಕಾರ್ತಿಕ್ ಅದ್ಭುತವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ಅಂತಿಮ ಹಂತದಲ್ಲಿ ಅವರು ಕ್ರೀಸ್‌ಗೆ ಇಳಿಯುವುದನನ್ಉ ನಾವು ಬಯಸುತ್ತಿದ್ದೆವು. ಆತ ಕ್ರೀಸ್‌ಗೆ ಇಳಿದು ಸಾಧ್ಯವಾದಷ್ಟು ಹೆಚ್ಚು ಕಾಲ ಬ್ಯಾಟಿಂಗ್ ಮಾಡುವುದನ್ನು ಬಯಸಿದ್ದೆವು. ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಔಟ್ ಆಗಲು ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಇಳಿಯಬೇಕೆಂಬುದು ನನ್ನ ಆಲೋಚನೆಯಾಗಿತ್ತು. ಅಲ್ಲದೆ ನಾನು ರಿಟೈರ್ಡ್ ಔಟ್ ಆಗುವ ಬಗ್ಗೆಯೂ ಯೋಚಿಸಿದ್ದೆ. ಅಷ್ಟರಲ್ಲಿ ನಾವು ಒಂದು ವಿಕೆಟ್ ಕಳೆದುಕೊಂಡೆವು. ಡಿಕೆ ಅದ್ಭುಯವಾದ ಫಾರ್ಮ್‌ನಲ್ಲಿದ್ದಾರೆ. ಇದು ಕಠಿಣವಾದ ಪಿಚ್ ಆಗಿತ್ತು. ಸಾಕಷ್ಟು ಆಟಗಾರರು ಆರಂಭದಲ್ಲಿ ಚೆಂಡನ್ನು ಎದುರಿಸಲು ಪರದಾಡಿದ್ದರು" ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್.

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭರ್ಜರಿ ಫಾರ್ಮ್ ಪ್ರದರ್ಶಿಸಿ ಮಿಂಚಿದ್ದಾರೆ. ಆಂಭಿಕ ಆಟಗಾರನಾಗಿ ಇಳಿದು ಫಾಫ್ 50 ಎಸೆತಗಳನ್ನು ಎದುರಸಿ 73 ರನ್‌ಗಳನ್ನು ಕಲೆ ಹಾಕುವ ಮೂಲಕ ತಂಡದ ದೊಡ್ಡ ಮೊತ್ತದಲ್ಲಿ ದೊಡ್ಡ ಪಾತ್ರವಹಿಸಿದರು. ಎರಡನೇ ವಿಕೆಟ್‌ಗೆ ಯುವ ಆಟಗಾರ ರಜತ್ ಪಾಟೀದಾರ್ ಜೊತೆಗೆ ಫಾಫ್ ಶತಕದ ಜೊತೆಯಾಟವನ್ನು ಆಡಿದರು.

ಬೌಲಿಂಗ್‌ನಲ್ಲಿ ಹಸರಂಗ ಮ್ಯಾಜಿಕ್

ಬೌಲಿಂಗ್‌ನಲ್ಲಿ ಹಸರಂಗ ಮ್ಯಾಜಿಕ್

ಇನ್ನು ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ವನಿಂದು ಹಸರಂಗ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳಲ್ಲಿ ಶ್ರೀಲಂಕಾದ ಈ ಬೌಲರ್ ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಯಾವ ಹಂತದಲ್ಲಿಯೂ ಎಸ್‌ಆರ್‌ಹೆಚ್ ತಿರುಗಿ ಬೀಳಲು ಸಾಧ್ತವಾಗದಂತೆ ಮಾಡಿದರು. ಜೋಶ್ ಹೇಜಲ್‌ವುಡ್ ಕೂಡ ಈ ಪಂದ್ಯದಲ್ಲಿ 2 ವಿಕೆಟ್ ಸಂಪಾದಿಸಿದ್ದಾರೆ.

Story first published: Monday, May 9, 2022, 12:10 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X