ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Final, GT vs RR: ಈ ಮೈಲಿಗಲ್ಲುಗಳ ಮೇಲೆ ಬಟ್ಲರ್, ಚಹಾಲ್, ಹಾರ್ದಿಕ್ ಪಾಂಡ್ಯಾ ಕಣ್ಣು

IPL 2022 Final, GT vs RR: Players records and approaching milestones in Kannada

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಹುನಿರೀಕ್ಷಿತ ಫೈನಲ್ ಹಣಾಹಣಿ ನಾಳೆ ( ಮೇ 29 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೂರ್ನಿಗೆ ತೆರೆಬೀಳಲಿದೆ.

ಕ್ವಾಲಿಫೈಯರ್‌ನಲ್ಲಿ ಸೋಲು: ಟ್ರೋಲ್ ಆದ RCB ಕಟ್ಟಾ ಅಭಿಮಾನಿಗಳುಕ್ವಾಲಿಫೈಯರ್‌ನಲ್ಲಿ ಸೋಲು: ಟ್ರೋಲ್ ಆದ RCB ಕಟ್ಟಾ ಅಭಿಮಾನಿಗಳು

2 ತಿಂಗಳುಗಳ ಕಾಲ ನಡೆದ 10 ತಂಡಗಳ ಮಹಾ ಕಾಳಗದಲ್ಲಿ ಯಾವ ತಂಡ ಚಾಂಪಿಯನ್ ಎಂಬುದು ನಾಳೆ ಹೊರಬೀಳಲಿದೆ. ಪಂದ್ಯದಲ್ಲಿ 2 ಬಲಿಷ್ಠ ತಂಡಗಳಾದ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವತ್ತ ಚಿತ್ತ ನೆಟ್ಟಿದ್ದರೆ, ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಕಣ್ಣಿಟ್ಟಿದೆ.

ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಉತ್ತಮ ನಾಯಕನನ್ನು ಹೆಸರಿಸಿದ ಸಂಜಯ್ ಮಂಜ್ರೇಕರ್!ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಉತ್ತಮ ನಾಯಕನನ್ನು ಹೆಸರಿಸಿದ ಸಂಜಯ್ ಮಂಜ್ರೇಕರ್!

ಇನ್ನು ಇತ್ತಂಡಗಳು ಈ ಬಾರಿಯ ಆವೃತ್ತಿಯಲ್ಲಿ ಮುಖಾಮುಖಿಯಾಗಲಿರುವ ಮೂರನೇ ಪಂದ್ಯ ಇದಾಗಿದ್ದು, ಲೀಗ್ ಹಂತದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾಗೂ ಪ್ಲೇಆಫ್ ಸುತ್ತಿನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎರಡರಲ್ಲಿಯೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗುಜರಾತ್ ಟೈಟನ್ಸ್ ಸೋಲನ್ನು ಉಣಿಸಿತ್ತು. ಹೀಗೆ ಗುಜರಾತ್ ಟೈಟನ್ಸ್ ವಿರುದ್ಧ ಸಂಪೂರ್ಣವಾಗಿ ಮಂಕಾಗಿರುವ ರಾಜಸ್ಥಾನ್ ರಾಯಲ್ಸ್ ಫೈನಲ್ ಪಂದ್ಯದಲ್ಲಿ ಗೆಲ್ಲುತ್ತಾ ಅಥವಾ ಆ ಪಂದ್ಯದಲ್ಲಿಯೂ ಸೋಲುಪ್ಪುವುದರ ಮೂಲಕ ಈ ಬಾರಿ ನೂತನ ಚಾಂಪಿಯನ್ ಹೊರಹೊಮ್ಮುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಎರಡೂ ತಂಡಗಳೂ ಸಹ ಬಲಿಷ್ಠ ಆಟಗಾರರನ್ನು ಹೊಂದಿದ್ದು, ಪಂದ್ಯದಲ್ಲಿ ವಿವಿಧ ಮೈಲಿಗಲ್ಲುಗಳನ್ನು ಮುಟ್ಟುವತ್ತ ಕಣ್ಣಿಟ್ಟಿದ್ದಾರೆ. ಹೀಗೆ ಈ ಪಂದ್ಯದಲ್ಲಿ ನಿರ್ಮಾಣವಾಗಬಹುದಾದ ಮೈಲಿಗಲ್ಲುಗಳ ಪಟ್ಟಿ ಈ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳ ಮೇಲೆ ಬಟ್ಲರ್ ಕಣ್ಣು

ಈ ಮೈಲಿಗಲ್ಲುಗಳ ಮೇಲೆ ಬಟ್ಲರ್ ಕಣ್ಣು

* ರಾಜಸ್ಥಾನ್ ರಾಯಲ್ಸ್‌ನ ಜೋಸ್ ಬಟ್ಲರ್ (824) ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಲು ಡೇವಿಡ್ ವಾರ್ನರ್ (848) ಅವರನ್ನು ಹಿಂದಿಕ್ಕಲು ಇನ್ನೂ 25 ರನ್ ಗಳಿಸಬೇಕಾಗಿದೆ. ವಿರಾಟ್ ಕೊಹ್ಲಿ 973 ರನ್ ಗಳಿಸಿ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.

* ಜೋಸ್ ಬಟ್ಲರ್ ಈ ಆವೃತ್ತಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಬಾರಿಸಿ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸರಿದೂಗಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಬಟ್ಲರ್ ಶತಕ ಬಾರಿಸಿದರೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.

ಈ ಮೈಲಿಗಲ್ಲುಗಳನ್ನು ಮುಟ್ಟುತ್ತಾರಾ ಚಹಾಲ್

ಈ ಮೈಲಿಗಲ್ಲುಗಳನ್ನು ಮುಟ್ಟುತ್ತಾರಾ ಚಹಾಲ್

* ರಾಜಸ್ಥಾನ್ ರಾಯಲ್ಸ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್ 2022ರಲ್ಲಿ 26 ವಿಕೆಟ್‌ಗಳನ್ನು ಹೊಂದಿದ್ದಾರೆ. ಅವರು ಇನ್ನೂ ಒಂದು ವಿಕೆಟ್ ಪಡೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿ ಈ ಐಪಿಎಲ್ ಋತುವಿನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡು ಪರ್ಪಲ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮಲಿದ್ದಾರೆ.

* ಆರ್‌ಆರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ಗೆ ಐಪಿಎಲ್‌ನಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಅವರನ್ನು ಹಿಂದಿಕ್ಕಲು ಇನ್ನೂ 2 ವಿಕೆಟ್‌ಗಳ ಅಗತ್ಯವಿದೆ. ಚಹಾಲ್ 165 ಮತ್ತು ಮಿಶ್ರಾ 166 ವಿಕೆಟ್ ಪಡೆದಿದ್ದಾರೆ.

ಇತರೆ ಆಟಗಾರರು ಮುಟ್ಟಬಹುದಾದ ಮೈಲಿಗಲ್ಲುಗಳು

ಇತರೆ ಆಟಗಾರರು ಮುಟ್ಟಬಹುದಾದ ಮೈಲಿಗಲ್ಲುಗಳು

* ಗುಜರಾತ್ ಟೈಟಾನ್ಸ್‌ನ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನೂ 3 ವಿಕೆಟ್‌ಗಳ ಅಗತ್ಯವಿದೆ.

* ಹಾರ್ದಿಕ್ ಪಾಂಡ್ಯ ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿ 100 ಇನ್ನಿಂಗ್ಸ್‌ಗಳನ್ನು ಪೂರೈಸಲು ಕೇವಲ ಒಂದು ಇನ್ನಿಂಗ್ಸ್‌ನಷ್ಟು ದೂರವಿದೆ. ಹಾರ್ದಿಕ್ ಈಗಾಗಲೇ 100 ಐಪಿಎಲ್ ಪಂದ್ಯಗಳನ್ನು ಪೂರ್ಣಗೊಳಿಸಿದ್ದಾರೆ.

* ಆರ್ ಆರ್ ಆರ್ ಅಶ್ವಿನ್ 20 ರನ್ ಗಳಿಸಿದರೆ ಅಪರೂಪದ ಬ್ಯಾಟಿಂಗ್ ಮೈಲುಗಲ್ಲು ಸಾಧಿಸಬಹುದು. ಅಶ್ವಿನ್ 1000 ಟಿ20 ರನ್ ತಲುಪಬಹುದು.

Story first published: Saturday, May 28, 2022, 20:19 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X