IPL 2022 ಹರಾಜು: 2 ಕೋಟಿ ಮೂಲ ಬೆಲೆ ಹೊಂದಿರುವ ಭಾರತದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಫ್ರಾಂಚೈಸಿಗಳು ಆಟಗಾರರನ್ನ ರೀಟೈನ್ ಮಾಡಿಕೊಂಡಿದ್ದಾಗಿದ್ದು, ಇತ್ತೀಚೆಗೆ ಹೊಸ ಎರಡು ತಂಡಗಳು ತಲಾ ಮೂವರು ಆಟಗಾರರನ್ನ ದೊಡ್ಡ ಮೊತ್ತ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಲಕ್ನೋ ಫ್ರಾಂಚೈಸಿ 17 ಕೋಟಿ ರೂಪಾಯಿ ನೀಡಿ ಕೆ.ಎಲ್ ರಾಹುಲ್‌ರನ್ನ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದರ ಜೊತೆಗೆ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ 9.2 ಕೋಟಿ ರೂಪಾಯಿ ಲಕ್ನೋ ಫ್ರಾಂಚೈಸಿ ಪರ ವಾಲಿದ್ದಾರೆ. ಅನ್‌ಕ್ಯಾಪ್ಡ್‌ ಪ್ಲೇಯರ್‌ ರವಿ ಬಿಷ್ಣೋಯಿ 4 ಕೋಟಿ ರೂಪಾಯಿಗೆ ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಪರ ಆಡಲಿದ್ದಾರೆ.

KL ರಾಹುಲ್‌ಗೆ 17 ಕೋಟಿ ನೀಡಿ ಖರೀದಿಸಿದ ಲಕ್ನೋ ಫ್ರಾಂಚೈಸಿ: ಐಪಿಎಲ್‌ನಲ್ಲೇ ಗರಿಷ್ಠ ಮೊತ್ತKL ರಾಹುಲ್‌ಗೆ 17 ಕೋಟಿ ನೀಡಿ ಖರೀದಿಸಿದ ಲಕ್ನೋ ಫ್ರಾಂಚೈಸಿ: ಐಪಿಎಲ್‌ನಲ್ಲೇ ಗರಿಷ್ಠ ಮೊತ್ತ

ಇನ್ನು ಮತ್ತೊಂದು ಹೊಸ ಫ್ರಾಂಚೈಸಿಯಾದ ಅಹಮದಾಬಾದ್ ಫ್ರಾಂಚೈಸ್, ಹಾರ್ದಿಕ್ ಪಾಂಡ್ಯ (15 ಕೋಟಿ ರೂಪಾಯಿ), ರಶೀದ್ ಖಾನ್ (15 ಕೋಟಿ ರೂಪಾಯಿ) ಮತ್ತು ಶುಬ್ಮನ್ ಗಿಲ್ (8 ಕೋಟಿ ರೂಪಾಯಿ) ನೀಡುವ ಮೂಲಕ ಅಹಮದಾಬಾದ್ ತಂಡಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 52 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಹರಾಜಿಗೆ ತೆರಳಲಿದೆ.

ಹೀಗೆ ಎರಡು ಹೊಸ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಸೆಣಸಾಟ ನಡೆಸಲಿದ್ದು, ಹತ್ತು ಫ್ರಾಂಚೈಸಿಗಳು ಫೆಬ್ರವರಿ 12, 13ಕ್ಕೆ ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಬಿಡ್ ನಡೆಸಲಿವೆ.

ಪ್ರತಿ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆದಾಗಲೆಲ್ಲಾ ಫ್ರಾಂಚೈಸಿಗಳು ತಮ್ಮದೇ ಆದ ಸ್ಟ್ರಾಟರ್ಜಿಯನ್ನ ರೆಡಿಮಾಡಿಕೊಂಡು ಹರಾಜಿನಲ್ಲಿ ಕಣಕ್ಕಿಳಿಯುತ್ತವೆ. ಮೊದಲ ಯೋಜಿಸಿದ್ದ ಆಟಗಾರರನ್ನ ಪಡೆಯಲು ಸಾಕಷ್ಟು ಬಿಡ್ ಕೂಡ ನಡೆಸುತ್ತವೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ 1000ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ.

ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಆಟಗಾರರನ್ನು ಒಳಗೊಂಡಿದೆ. ಅಮೆರಿಕದ 14 ಆಟಗಾರರು ಕೂಡ ಇದ್ದಾರೆ.

ಹೀಗೆ ಈ ಪಟ್ಟಿಯಲ್ಲಿರುವ ಪ್ರಮುಖ ಭಾರತೀಯ ಆಟಗಾರರಲ್ಲಿ ಯಾವೆಲ್ಲಾ ಆಟಗಾರರು ಮೂಲ ಬೆಲೆ 2 ಕೋಟಿ ರೂಪಾಯಿ ಮೊತ್ತವನ್ನ ಹೊಂದಿದ್ದಾರೆ ಎಂಬುದನ್ನ ಈ ಕೆಳಗೆ ನೋಡಬಹುದು.

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ CM ಅಭ್ಯರ್ಥಿ ನಾನಲ್ಲ ಎಂದಿದ್ದು ಯಾಕೆ | Oneindia Kannada

ರವಿಚಂದ್ರನ್ ಅಶ್ವಿನ್
ಯುಜವೇಂದ್ರ ಚಹಾಲ್
ದೀಪಕ್ ಚಹಾರ್
ಶಿಖರ್ ಧವನ್
ಶ್ರೇಯಸ್ ಅಯ್ಯರ್
ದಿನೇಶ್ ಕಾರ್ತಿಕ್
ಇಶಾನ್ ಕಿಶನ್
ಭುವನೇಶ್ವರ್ ಕುಮಾರ್
ದೇವದತ್ ಪಡಿಕ್ಕಲ್
ಕೃನಾಲ್ ಪಾಂಡ್ಯ
ಹರ್ಷಲ್ ಪಟೇಲ್
ಸುರೇಶ್ ರೈನಾ
ಅಂಬಟಿ ರಾಯುಡು
ಮೊಹಮ್ಮದ್ ಶಮಿ
ಶಾರ್ದೂಲ್ ಠಾಕೂರ್
ರಾಬಿನ್ ಉತ್ತಪ್ಪ
ಉಮೇಶ್ ಯಾದವ್

For Quick Alerts
ALLOW NOTIFICATIONS
For Daily Alerts
Story first published: Saturday, January 22, 2022, 11:58 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X