ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಕೆಕೆಆರ್‌ಗೆ ದೊಡ್ಡ ಹೊಡೆತ, ಬೌಲರ್ ಪ್ಯಾಟ್ ಕಮಿನ್ಸ್‌ ಟೂರ್ನಿಯಿಂದ ಔಟ್

Pat cummins

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನಲ್ಲ ಒಬ್ಬರ ಹಿಂದೆ ಮತ್ತೊಬ್ಬರಂತೆ ಗಾಯಾಳು ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಪ್ಲೇ ಆಫ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಟಗಾರರು ನಾನಾ ಕಾರಣಗಳಿಂದಾಗಿ ಹೊರಗುಳಿಯುತ್ತಿದ್ದಾರೆ. ಗಾಯಾಳುವಾಗಿ ಅಷ್ಟೇ ಅಲ್ಲದೆ ಖಾಸಗಿ ಕಾರಣದಿಂದಲೂ ಆಟಗಾರರು ತಂಡಗಳಿಗೆ ಅಲಭ್ಯರಾಗಿದ್ದಾರೆ.

ಪಂಜಾಬ್‌ ವಿರುದ್ಧ ಅಬ್ಬರಿಸಲು ಪಣತೊಟ್ಟ ವಿರಾಟ್‌: ಜಿಮ್‌ನಲ್ಲಿ ಭರ್ಜರಿ ವರ್ಕೌಟ್‌ಪಂಜಾಬ್‌ ವಿರುದ್ಧ ಅಬ್ಬರಿಸಲು ಪಣತೊಟ್ಟ ವಿರಾಟ್‌: ಜಿಮ್‌ನಲ್ಲಿ ಭರ್ಜರಿ ವರ್ಕೌಟ್‌

ಈ ಪಟ್ಟಿಗೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪೇಸರ್ ಪ್ಯಾಟ್ ಕಮಿನ್ಸ್ ಕೂಡ ಸೇರಿದ್ದಾರೆ. ಈ ಮೂಲಕ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. 12 ಪಂದ್ಯಗಳಲ್ಲಿ 5 ಪಂದ್ಯ ಸೋತು 7 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕೊಲ್ಕತ್ತಾ ನೈಟ್‌ ರೈಡರ್ಸ್‌ ಪ್ಲೇ ಆಫ್ ತಲುಪುವುದು ಬಹಳ ಕಷ್ಟಸಾಧ್ಯವಾಗಿದ್ದರೂ ಸಹ, ಅದೃಷ್ಟ ಪರೀಕ್ಷೆಗೆ ಇಳಿಯಲು ಉಳಿದ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಿದೆ.

ಆದ್ರೀಗ ಪ್ರಮುಖ ಬೌಲರ್ ಪ್ಯಾಟ್ ಕಮಿನ್ಸ್ ಬಯೋ ಬಬಲ್‌ನಿಂದ ಹೊರಗುಳಿದಿದ್ದು, ಸೊಂಟದ ನೋವಿನ ಕಾರಣದಿಂದಾಗಿ ಐಪಿಎಲ್‌ನಿಂದ ಹೊರಬಂದಿದ್ದಾರೆ. ಗಾಯವು ಗಂಭೀರವಾಗಿಲ್ಲ ಎಂದು ತಿಳಿದುಬಂದಿದ್ದು, ಅವರ ಅಭಿಮಾನಿಗಳಿಗೆ ಸಮಾಧಾನ ತರಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಅವರು ಪೂರ್ಣ ಪ್ರಮಾಣದ ಫಿಟ್ನೆಸ್‌ ಕಂಡುಕೊಳ್ಳಲಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಗೂ ಬ್ರೇಕ್
ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಗುಣಮುಖಗೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ವೇಗದ ಬೌಲರ್‌ಗೆ ವಿಶ್ರಾಂತಿ ನೀಡಲಾಗುವುದು. ಆದ್ರೆ ಅವರ ಫಿಟ್‌ನೆಸ್ ಸಮಸ್ಯೆಗಳು ರಾಷ್ಟ್ರೀಯ ತಂಡದ ಯೋಜನೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.

ಟಿ20 ನಂತರದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟೆಸ್ಟ್ ಪ್ರವಾಸಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಅವರು ಹೊರನಡೆದ ಪರಿಣಾಮ ಕೆಕೆಆರ್‌ನ ಪ್ಲೇಆಫ್‌ಗಳ ಮೂಲಕ ಹೋಗುವ ಅವಕಾಶಗಳಿಗೆ ಅಡ್ಡಿಯಾಗಬಹುದು. ಕೆಲವು ಪಂದ್ಯಗಳಿಗೆ ಬೆಂಚ್‌ ಕಾದಿದ್ದ ಕಮಿನ್ಸ್‌, ನಂತರ ಇತ್ತೀಚೆಗೆ ಕೆಕೆಆರ್ ಪರ ಪಂದ್ಯ ವಿಜೇತ ಮೂರು ವಿಕೆಟ್‌ಗಳನ್ನು ಗಳಿಸಿದರು. ಅದ್ರಲ್ಲೂ ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಆದ್ರೆ ಕೊಲ್ಕತ್ತಾ ನೈಟ್ ರೈಡರ್ಸ್‌ ಈ ಆಸೀಸ್ ಆಟಗಾರರನ್ನ ಸರಿಯಾಗಿ ಬಳಿಸಕೊಳ್ಳಲಿಲ್ಲ ಎಂಬ ಟೀಕೆ ಕೇಳಿಬಂದಿದೆ. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಕೆಕೆಆರ್ 12 ಪಂದ್ಯಗಳನ್ನ ಆಡಿದ್ದು, ಉಳಿದ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಿದೆ.

ಮೇ. 14ರಂದು ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೆಕೆಆರ್‌ ಆಡಲಿದ್ದು, ಅಂತಿಮ ಲೀಗ್ ಪಂದ್ಯವು ಮೇ 18ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದೆ.

Story first published: Friday, May 13, 2022, 18:33 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X