ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Points Table : ಮುಂಬೈಗೆ 5ನೇ ಸೋಲು: ಪ್ಲೇಆಫ್‌ಗೆ ಇನ್ನೂ ಉಳಿದಿದೆಯಾ ದಾರಿ?

IPL 2022: Points table, orange cap and purple cap updated lists after MI vs PBKS game

ಐಪಿಎಲ್ 15ನೇ ಆವೃತ್ತಿಯ 23ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಬುಧವಾರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಐದು ಪಂದ್ಯಗಳಲ್ಲಿ ಮೂರನೇ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೆ ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದ್ದು ಇನ್ನೂ ಅಂಕವನ್ನೇ ತೆರದಿಲ್ಲ.

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ 12 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಸೋಲಿನ ಬಳಿಕ ಮುಂಬೈ ತಂಡ ಪ್ಲೇಆಫ್‌ಗೇರುವ ಅವಕಾಶ ಉಳಿದುಕೊಂಡಿದೆಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌

ಹಾಗಾದರೆ ಸತತ ಐದು ಪಂದ್ಯಗಳನ್ನು ಸೋತ ಬಳಿಕವೂ ಮುಂಬೈ ಫೈನಲ್‌ಗೇರುವ ಅವಕಾಶ ಎಷ್ಟಿದೆ? ಮುಂದೆ ಓದಿ..

ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆಯಾ ಮುಂಬೈ?

ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆಯಾ ಮುಂಬೈ?

ಎಲ್ಲಾ ತಂಡಗಳು ಕೂಡ 14 ಪಂದ್ಯಗಳನ್ನು ಆಡಲಿದ್ದು ಇದರಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ನಾಲ್ಕು ತಂಡಗಳು ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಅಂಕಗಳ ಜೊತೆಗೆ ತಂಡಗಳ ನೆಟ್‌ರನ್‌ರೇಟ್ ಕೂಡ ಪ್ಲೇಆಫ್‌ಗೇರಲು ಬಹಳ ಮುಖ್ಯವಾಗುತ್ತದೆ. ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ 5 ಪಂದ್ಯಗಳನ್ನು ಆಡಿ ಸೋತಿರುವುದರಿಂದ ಇನ್ನು 9 ಪಂದ್ಯಗಳು ಉಳಿದುಕೊಂಡಿದೆ. ಈ 9 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ಕನಿಷ್ಠ 8 ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಹಾಗಿದ್ದರೆ ಮಾತ್ರವೇ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್‌ಗೆ ಎರುವ ಅವಕಾಶವನ್ನು ಪಡೆದುಕೊಳ್ಳಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮುಂದಿನ ಹಾದಿ ಸುಲಭವಿಲ್ಲ ಎಂಬುದು ಸ್ಪಷ್ಟ.

ಫಾಯಿಂಟ್ಸ್ ಟೇಬಲ್

ಫಾಯಿಂಟ್ಸ್ ಟೇಬಲ್

ನಾಲ್ಕು ಪಂದ್ಯಗಳನ್ನು ಆಡಿ 6 ಅಂಕಗಳನ್ನು ಗಳಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇದ್ದರೆ ಪಂಜಾಬ್ ಕಿಂಗ್ಸ್ ತಂಡ ಮೂರನೇ ಸ್ಥಾನಕ್ಕೇರಿದೆ. ಅದಾದ ನಂತರದ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡವಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಸದ್ಯಕ್ಕೆ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹಯದರಾಬಾದ್ ತಂಡಗಳು 7 ಹಾಗೂ 8ನೇ ಸ್ಥಾನದಲ್ಲಿದೆ. 2 ಅಂಕಗಳನ್ನು ಗೆದ್ದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದ್ದು ಅಂತಿಮ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದೆ.

ಆರಂಜ್ ಕ್ಯಾಪ್

ಆರಂಜ್ ಕ್ಯಾಪ್

ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು ಪಡೆಯುವ ಆರೆಂಜ್ ಕ್ಯಾಪ್ ಜೋಸ್ ಬಟ್ಲರ್ ಅವರಲ್ಲಿಯೇ ಮುಂದುವರಿದಿದೆ. 218 ರನ್‌ಗಳಿಸಿರುವ ಬಟ್ಲರ್ ಅವರ ನಂತರ ಸಿಎಸ್‌ಕೆ ತಂಡದ ಶಿವಂ ದುಬೆ ಇದ್ದು 207 ರನ್‌ಗಳಿಸಿದ್ದಾರೆ. 197 ರನ್‌ಗಳಿಸಿರುವ ಶಿಖರ್ ಧವನ್ 3ನೇ ಸ್ಥಾನಕ್ಕೇರಿದ್ದಾರೆ. ಕನ್ನಡಿಗ ರಾಬಿನ್ ಉತ್ತಪ್ಪ 194 ರನ್‌ಗಳನೊಂದಿಗೆ ನಾಲ್ಕನೇ ಸ್ಥಾನ ಹಾಗೂ ಕ್ವಿಂಟನ್ ಡಿಕಾಕ್ 188 ರನ್‌ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್

ಪರ್ಪಲ್ ಕ್ಯಾಪ್

ಇನ್ನು ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಯುಜುವೇಂದ್ರ ಚಾಹಲ್ ಮುಂದಿದ್ದು ಟೂರ್ನಿಯಲ್ಲಿ ಈವರೆಗೆ ಚಾಹಲ್ 11 ವಿಕೆಟ್ ಸಂಪಾದಿಸಿದ್ದಾರೆ. 2 ಹಾಗೂ 3ನೇ ಸ್ಥಾನದಲ್ಲಿ 10 ವಿಕೆಟ್ ಪಡೆದಿರುವ ಕುಲ್‌ದೀಪ್ ಯಾದವ್ ಹಾಗೂ ಉಮೇಶ್ ಯಾದವ್ ಇದ್ದಾರೆ. 10 ವಿಕೆಟ್ ಪಡೆದಿರುವ ವನಿಂದು ಹಸರಂಗ 4ನೇ ಸ್ಥಾನದಲ್ಲಿದ್ದರೆ 8 ವಿಕೆಟ್ ಸಂಪಾದಿಸಿರುವ ಟಿ ನಟರಾಜನ್ 5ನೇ ಸ್ಥಾನದಲ್ಲಿದ್ದಾರೆ.

Story first published: Thursday, April 14, 2022, 13:27 [IST]
Other articles published on Apr 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X