ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 ಕ್ವಾಲಿಫೈಯರ್ 1: ಸೌರವ್ ಗಂಗೂಲಿ ತವರು ಗ್ರೌಂಡ್‌ನಲ್ಲಿ RRನ 'ಬೇಬಿ ಗಂಗೂಲಿ'; ವಿಡಿಯೋ

IPL 2022 Qualifier 1: RRs Baby Ganguly Practice at Sourav Gangulys Home Ground; Video

ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಮಹತ್ವದ ಪಂದ್ಯವನ್ನು ಆಡಲು ಸಜ್ಜಾಗಿದೆ. ಕ್ವಾಲಿಫೈಯರ್ 1ರ ವಿಜೇತರು ಐಪಿಎಲ್ 2022ರ ಫೈನಲ್‌ಗೆ ನೇರ ಪ್ರವೇಶ ಪಡೆಯುತ್ತಾರೆ ಮತ್ತು ಸೋತವರು ಕ್ವಾಲಿಫೈಯರ್ 2 ಅನ್ನು ಆಡುತ್ತಾರೆ.

ಈ ಮೆಗಾ ಕದನಕ್ಕೆ ಮುಂಚಿತವಾಗಿ, ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿದರು. ಯಶಸ್ವಿ ಜೈಸ್ವಾಲ್ ನೆಟ್ಸ್ ಅಭ್ಯಾಸದಲ್ಲಿ ದೊಡ್ಡ ಹೊಡೆತಗಳನ್ನು ಅಭ್ಯಾಸ ಮಾಡುತ್ತಿದ್ದರು. ಎಡಗೈ ಆಟಗಾರನು ಈಡನ್ ಗಾರ್ಡನ್ಸ್‌ನ ಪಾರ್ಕ್‌ನಾದ್ಯಂತ ಚೆಂಡನ್ನು ಹೊಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಮಾಜಿ ನಾಯಕ, ಕೋಲ್ಕತ್ತಾದ ದಾದಾ ಸೌರವ್ ಗಂಗೂಲಿಯನ್ನು ನೆನಪಿಸಿತು.

ಸೌರವ್ ಗಂಗೂಲಿಯೊಂದಿಗೆ ಜೈಸ್ವಾಲ್ ಬ್ಯಾಟಿಂಗ್ ಹೋಲಿಕೆ

ರಾಜಸ್ಥಾನ ರಾಯಲ್ಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಯಶಸ್ವಿ ಜೈಸ್ವಾಲ್ ಅವರನ್ನು ಸೌರವ್ ಗಂಗೂಲಿಯೊಂದಿಗೆ ಹೋಲಿಸಿದೆ. ವಿಡಿಯೋವನ್ನು ಹಂಚಿಕೊಂಡು, "ಬೇಬಿ ಗಂಗೂಲಿ ಈಡನ್ ಗಾರ್ಡನ್ಸ್‌ನಲ್ಲಿ ಫುಲ್ ಫಾರ್ಮ್‌ನಲ್ಲಿದ್ದಾರೆ" ಎಂದು ಬರೆದಿದ್ದಾರೆ. ದಾದಾ ಸೌರವ್ ಗಂಗೂಲಿ ಧರಿಸುತ್ತಿದ್ದ ಅದೇ ರೀತಿಯ ಪ್ಯಾಡ್‌ಗಳನ್ನು ಜೈಸ್ವಾಲ್ ಧರಿಸಿದ್ದಾರೆ ಎಂದು ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಗಮನಸೆಳೆದಿದ್ದಾರೆ.

ಗಮನಾರ್ಹ ಅಂಶವೆಂದರೆ ಯಶಸ್ವಿ ಜೈಸ್ವಾಲ್ ಪ್ಲೇಆಫ್‌ಗೆ ಬರುತ್ತಿರುವ ವೇಳೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಋತುವಿನ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು 40 ಪ್ಲಸ್ ಸ್ಕೋರ್‌ಗಳನ್ನು ಹೊಡೆದಿದ್ದಾರೆ. ಜೈಸ್ವಾಲ್ ಐಪಿಎಲ್ 2022ರಲ್ಲಿ ಆಡಿದ ಏಳು ಪಂದ್ಯಗಳಲ್ಲಿ, ಅವರು 30ರ ಸರಾಸರಿಯಲ್ಲಿ ಮತ್ತು 135.03 ಸ್ಟ್ರೈಕ್ ರೇಟ್‌ನಲ್ಲಿ 212 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಅವರು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರ ಫಾರ್ಮ್ ರಾಜಸ್ಥಾನಕ್ಕೆ ಬಹಳ ನಿರ್ಣಾಯಕ

ಯಶಸ್ವಿ ಜೈಸ್ವಾಲ್ ಅವರ ಫಾರ್ಮ್ ರಾಜಸ್ಥಾನಕ್ಕೆ ಬಹಳ ನಿರ್ಣಾಯಕ

ಯಶಸ್ವಿ ಜೈಸ್ವಾಲ್ ಅವರ ಫಾರ್ಮ್ ರಾಜಸ್ಥಾನಕ್ಕೆ ಬಹಳ ನಿರ್ಣಾಯಕವಾಗಿದೆ. ಏಕೆಂದರೆ ಅವರ ಇತರ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕಳೆದ ಕೆಲವು ಪಂದ್ಯಗಳಲ್ಲಿ ತನ್ನ ಆರ್ಭಟವನ್ನು ನಿಲ್ಲಿಸಿದ್ದಾರೆ. ಐಪಿಎಲ್ 2022ರ ಮೊದಲಾರ್ಧದಲ್ಲಿ, ಜೋಸ್ ಬಟ್ಲರ್ 81ರ ಸರಾಸರಿ ಮತ್ತು 161ರ ಸ್ಟ್ರೈಕ್ ರೇಟ್‌ನೊಂದಿಗೆ 491 ರನ್ ಗಳಿಸಿದರು. ಆನಂತರ ಮುಂದಿನ ಏಳು ಪಂದ್ಯಗಳಲ್ಲಿ ಅವರು ಸರಾಸರಿ 19 ಮತ್ತು ಸ್ಟ್ರೈಕ್ ರೇಟ್ 111ರೊಂದಿಗೆ 138 ರನ್ ಗಳಿಸುವಲ್ಲಿ ಯಶಸ್ವಿಯಾದ ಕಾರಣ ಅವರ ಫಾರ್ಮ್ ಕೆಳಕ್ಕೆ ಹೋಗಿದೆ.

ಎರಡು ತಂಡಗಳ ಭವಿಷ್ಯ ನಿರ್ಧರಿಸಲಿರುವ ಸೂಪರ್ ಓವರ್

ಎರಡು ತಂಡಗಳ ಭವಿಷ್ಯ ನಿರ್ಧರಿಸಲಿರುವ ಸೂಪರ್ ಓವರ್

AccuWeather ವೆಬ್‌ಸೈಟ್ ಪ್ರಕಾರ, ಇಂದು ಮಧ್ಯಾಹ್ನ ಸುಮಾರು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದರೆ ದಿನ ಕಳೆದಂತೆ, ಹವಾಮಾನವು ಸ್ವಲ್ಪ ಸಮಯದವರೆಗೆ ಸ್ಪಷ್ಟವಾಗುವ ನಿರೀಕ್ಷೆಯಿದೆ. ಆದಾಗ್ಯೂ, ರಾತ್ರಿ 8 ಗಂಟೆಗೆ (IST) ಗುಡುಗು ಸಹಿತ ಮೋಡ ಕವಿದ ವಾತಾವರಣ ಇರಲಿದೆ ಎಂದು ವೆಬ್‌ಸೈಟ್ ಹೇಳಿದೆ.

ಕಳೆದ ದೊಂದು ವಾರದಿಂದ ಕೋಲ್ಕತ್ತಾದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ ಮತ್ತು ನಿಗದಿತ ಸಮಯದಲ್ಲಿ ಯಾವುದೇ ಆಟ ಸಾಧ್ಯವಿಲ್ಲ. ನಂತರ ಸೂಪರ್ ಓವರ್ ಆಟ ಎರಡು ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

ಐಪಿಎಲ್ ಪ್ಲೇಆಫ್ ಮಾರ್ಗಸೂಚಿಗಳೆನು?

ಐಪಿಎಲ್ ಪ್ಲೇಆಫ್ ಮಾರ್ಗಸೂಚಿಗಳೆನು?

ಒಂದು ವೇಳೆ ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದಲ್ಲಿ, ಲೀಗ್ ಹಂತವು ಆದ್ಯತೆ ಪಡೆಯುತ್ತದೆ ಮತ್ತು ವಿಜೇತರನ್ನು ನಿರ್ಧರಿಸುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಐಪಿಎಲ್ ಬ್ರೀಫಿಂಗ್ ಟಿಪ್ಪಣಿಯನ್ನು ಉಲ್ಲೇಖಿಸಿ ಸೋಮವಾರ ವರದಿ ಮಾಡಿದೆ.

"ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇಆಫ್ ಪಂದ್ಯಗಳಿಗೆ, ಮೂಲ ದಿನದ ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ ಐದು-ಓವರ್‌ಗಳ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ತಂಡಗಳು ಮತ್ತು ಪರಿಸ್ಥಿತಿಗಳು ಅನುಮತಿಸಿದರೆ ಸೂಪರ್ ಓವರ್ ಆಡುತ್ತವೆ.

Story first published: Tuesday, May 24, 2022, 16:54 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X