ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs PBKS: 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಜಾನಿ ಬೈಸ್ಟ್ರೋವ್

Jonny Bairstow

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದು, ಪಂಜಾಬ್ ಓಪನರ್ ಜಾನಿ ಬೈಸ್ಟ್ರೋವ್‌ ವೇಗವಾಗಿ ಅರ್ಧಶತಕ ದಾಖಲಿಸಿದ್ದಾರೆ.

ಟಾಸ್ ಸೋತು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಪಂಜಾಬ್ ಕಿಂಗ್ಸ್‌ಗೆ ಬ್ಯಾಟಿಂಗ್ ಆಹ್ವಾನಿಸಿತು. ಪಂಜಾಬ್ ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದು, ಜಾನಿ ಬೈಸ್ಟ್ರೋವ್ ಮತ್ತು ಶಿಖರ್ ಧವನ್ ಜೋಡಿ ಕೇವಲ 4 ಓವರ್‌ಗೆ ಅರ್ಧಶತಕದ ಗಡಿ ಮುಟ್ಟಿತು.

ಭಾರತ ತಂಡವನ್ನು ಪ್ರತಿನಿಧಿಸಲು ಆತ ಇನ್ನೂ ಸಿದ್ಧವಾಗಿಲ್ಲ: ಗವಾಸ್ಕರ್ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ ಚೋಪ್ರಭಾರತ ತಂಡವನ್ನು ಪ್ರತಿನಿಧಿಸಲು ಆತ ಇನ್ನೂ ಸಿದ್ಧವಾಗಿಲ್ಲ: ಗವಾಸ್ಕರ್ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ ಚೋಪ್ರ

ಶಿಖರ್ ಧವನ್ 15 ಎಸೆತಗಳಲ್ಲಿ 21ರನ್ ಕಲೆಹಾಕಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಆದ್ರೆ ಜಾನಿ ಬೈಸ್ಟ್ರೋವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದಾರೆ. ಪವರ್‌ಪ್ಲೇ ಓವರ್‌ಗಳೊಳಗೆ ಅರ್ಧಶತಕ ಸಿಡಿಸಿರುವ ಬೈಸ್ಟ್ರೊವ್ 7 ಭರ್ಜರಿ ಸಿಕ್ಸರ್ ಜೊತೆಗೆ ಮೂರು ಬೌಂಡರಿ ಕಲೆಹಾಕಿದ್ದರು.

ಪವರ್ ಪ್ಲೇ ಓವರ್‌ಗಳ ಬಳಿಕ ವಹಿಂದು ಹಸರಂಗ ಬೌಲಿಂಗ್‌ನಲ್ಲಿ ರಾಜಪಕ್ಷೆ ಕೇವಲ 1ರನ್‌ಗೆ ಔಟಾಗುವ ಮೂಲಕ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. 8 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 2 ವಿಕೆಟ್ ನಷ್ಟಕ್ಕೆ 95ರನ್ ಕಲೆಹಾಕಿದೆ. ಅದ್ರಲ್ಲೂ ಪವರ್ ಪ್ಲೇ ಓವರ್‌ನಲ್ಲಿಯೇ 83 ರನ್ ಕಲೆಹಾಕಿದೆ.

ಆರ್‌ಸಿಬಿ ಪ್ರಸಕ್ತ ಐಪಿಎಲ್‌ ಸೀಸನ್‌ನಲ್ಲಿ ಏಳು ಬಾರಿ ಎದುರಾಳಿ ತಂಡಗಳಿಗೆ ಆರಂಭಿಕ ಅರ್ಧಶತಕ ಜೊತೆಯಾಟವನ್ನ ನೀಡಿದೆ.

ಆರ್‌ಸಿಬಿ ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ತಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಜೋಶ್ ಹೆಜಲ್‌ವುಡ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

RCB vs PBKS ಪಂದ್ಯದಲ್ಲಿ ನಾವು ಮಾಡಿದ ಕೆಟ್ಟ ದಾಖಲೆ ಇದು | Oneindia Kannada

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಜಾನಿ ಬೇರ್‌ಸ್ಟೋವ್, ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕಾ ರಾಜಪಕ್ಸೆ(ವಿಕೆಟ್ ಕೀಪರ್), ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್, ಕಗಿಸೋ ರಬಾಡ, ರಾಹುಲ್ ಚಹರ್, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್

Story first published: Saturday, May 14, 2022, 9:12 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X