ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈ 5 ತಂಡಗಳ ಆಟಗಾರರು ಒಮ್ಮೆಯೂ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಗೆದ್ದೇ ಇಲ್ಲ!

IPL 2022: These 5 teams players didnt won Player of the series award till now in 15 years of IPL

ಕಳೆದ ಮೇ 29ರ ಭಾನುವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ 2 ತಿಂಗಳ ಪಯಣಕ್ಕೆ ತೆರೆಬಿದ್ದಿದೆ.

IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!IPL 2022: ಅತಿಹೆಚ್ಚು ಡಾಟ್ ಬಾಲ್ ಎಸೆದ 5 ಬೌಲರ್‌ಗಳ ಪಟ್ಟಿ; 200 ಡಾಟ್ ಎಸೆದ ಏಕೈಕ ಬೌಲರ್ ಈತ!

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ತನ್ನ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 'ಪ್ಲೇಯರ್ ಆಫ್ ದಿ ಸಿರೀಸ್' ಅಥವಾ 'ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಬಾಚಿಕೊಂಡರು.

IPL 2022: ತಂಡದಲ್ಲಿದ್ದ ಈ ಐವರಿಗೆ ಸರಿಯಾದ ಅವಕಾಶ ನೀಡಿದ್ದರೆ ಮುಂಬೈ ಇಂಡಿಯನ್ಸ್ ಫ್ಲಾಪ್ ಆಗುತ್ತಿರಲಿಲ್ಲ!IPL 2022: ತಂಡದಲ್ಲಿದ್ದ ಈ ಐವರಿಗೆ ಸರಿಯಾದ ಅವಕಾಶ ನೀಡಿದ್ದರೆ ಮುಂಬೈ ಇಂಡಿಯನ್ಸ್ ಫ್ಲಾಪ್ ಆಗುತ್ತಿರಲಿಲ್ಲ!

ಟೂರ್ನಿಯಲ್ಲಿ 17 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ 4 ಶತಕ ಸಹಿತ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮುವುದರ ಜತೆಗೆ ಪ್ಲೇಯರ್ ಆಫ್ ದಿ ಸೀರೀಸ್ ಎನಿಸಿಕೊಂಡರು. ಇನ್ನು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, ಇಲ್ಲಿಯವರೆಗೂ ನಡೆದಿರುವ ವಿವಿಧ ಟೂರ್ನಿಗಳಲ್ಲಿ ವಿವಿಧ ತಂಡಗಳ ಆಟಗಾರರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈ ಕೆಳಕಂಡ 5 ತಂಡಗಳ ಆಟಗಾರರು ಮಾತ್ರ ಒಮ್ಮೆಯೂ 'ಪ್ಲೇಯರ್ ಆಫ್ ದಿ ಸೀರಿಸ್' ಪ್ರಶಸ್ತಿಯನ್ನು ಗೆದ್ದೇ ಇಲ್ಲ. ಈ ಕುರಿತಾದ ವಿವರ ಮುಂದೆ ಇದೆ ಓದಿ..

ಪ್ಲೇಯರ್ ಆಫ್ ದಿ ಸೀರೀಸ್ ಗೆಲ್ಲದೇ ಇರುವ ತಂಡಗಳು

ಪ್ಲೇಯರ್ ಆಫ್ ದಿ ಸೀರೀಸ್ ಗೆಲ್ಲದೇ ಇರುವ ತಂಡಗಳು

ಪ್ಲೇಯರ್ ಆಫ್ ದಿ ಸೀರೀಸ್ ಅಥವಾ ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೂ ಒಮ್ಮೆಯೂ ಗೆಲ್ಲಲಾಗಿಲ್ಲ. ಇನ್ನು ನೂತನ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಆಟಗಾರಾರೂ ಸಹ ತಮ್ಮ ಮೊದಲ ಆವೃತ್ತಿಯಲ್ಲಿ ಈ ಪ್ರಶಸ್ತಿಯನ್ನು ಗೆಲ್ಲಲಾಗಿಲ್ಲ. ಹೀಗಾಗಿ ಈ 5 ತಂಡಗಳ ಆಟಗಾರರು ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಗೆಲ್ಲುವುದು ಇನ್ನೂ ಬಾಕಿ ಇದೆ.

ಪ್ಲೇಯರ್ ಆಫ್ ದಿ ಸೀರಿಸ್ ಪ್ರಶಸ್ತಿ ಗೆದ್ದಿರುವ ಆಟಗಾರರು ಮತ್ತು ತಂಡಗಳ ವಿವರ

ಪ್ಲೇಯರ್ ಆಫ್ ದಿ ಸೀರಿಸ್ ಪ್ರಶಸ್ತಿ ಗೆದ್ದಿರುವ ಆಟಗಾರರು ಮತ್ತು ತಂಡಗಳ ವಿವರ

2008ರಿಂದ 2022ರ ಐಪಿಎಲ್ ಟೂರ್ನಿಯವರೆಗೆ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಗೆದ್ದಿರುವ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ.


2022 - ಜೋಸ್ ಬಟ್ಲರ್ - ರಾಜಸ್ಥಾನ್ ರಾಯಲ್ಸ್

2021 - ಹರ್ಷಲ್ ಪಟೇಲ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು

2020 - ಜೋಫ್ರಾ ಆರ್ಚರ್ - ರಾಜಸ್ಥಾನ್ ರಾಯಲ್ಸ್

2019 - ಆ್ಯಂಡ್ರೆ ರಸೆಲ್ - ಕೋಲ್ಕತ್ತ ನೈಟ್ ರೈಡರ್ಸ್

2018 - ಸುನಿಲ್ ನರೈನ್ - ಕೋಲ್ಕತ್ತ ನೈಟ್ ರೈಡರ್ಸ್

2017 - ಬೆನ್ ಸ್ಟೋಕ್ಸ್ - ರೈಸಿಂಗ್ ಪುಣೆ ಸೂಪರ್ ಜಯಂಟ್ಸ್

2016 - ವಿರಾಟ್ ಕೊಹ್ಲಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು

2015 - ಆ್ಯಂಡ್ರೆ ರಸೆಲ್ - ಕೋಲ್ಕತ್ತ ನೈಟ್ ರೈಡರ್ಸ್

2014 - ಗ್ಲೆನ್ ಮ್ಯಾಕ್ಸ್‌ವೆಲ್ - ಕಿಂಗ್ಸ್ ಇಲೆವೆನ್ ಪಂಜಾಬ್

2013 - ಶೇನ್ ವ್ಯಾಟ್ಸನ್ - ರಾಜಸ್ಥಾನ್ ರಾಯಲ್ಸ್

2012 - ಸುನಿಲ್ ನರೈನ್ - ಕೋಲ್ಕತ್ತ ನೈಟ್ ರೈಡರ್ಸ್

2011 - ಕ್ರಿಸ್ ಗೇಲ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು

2010 - ಸಚಿನ್ ತೆಂಡೂಲ್ಕರ್ - ಮುಂಬೈ ಇಂಡಿಯನ್ಸ್

2009 - ಆ್ಯಡಮ್ ಗಿಲ್ ಕ್ರಿಸ್ಟ್ - ಡೆಕ್ಕನ್ ಚಾರ್ಜರ್ಸ್

2008 - ಶೇನ್ ವ್ಯಾಟ್ಸನ್ - ರಾಜಸ್ಥಾನ್ ರಾಯಲ್ಸ್

Siraj ಐಪಿಎಲ್ ಬಳಿಕ Rohit Sharma ಬಗ್ಗೆ ಹೇಳಿದ್ದೇನು | Oneindia Kannada
ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಸೀರೀಸ್ ಗೆದ್ದಿರುವುದು ಈ ತಂಡಗಳ ಆಟಗಾರರು

ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಸೀರೀಸ್ ಗೆದ್ದಿರುವುದು ಈ ತಂಡಗಳ ಆಟಗಾರರು

ಈ ಪ್ಲೇಯರ್ ದಿ ಸೀರೀಸ್ ಪ್ರಶಸ್ತಿಯನ್ನು ಹೆಚ್ಚು ಬಾರಿ ಗೆದ್ದಿರುವುದು ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರು. ಎರಡೂ ತಂಡಗಳ ಆಟಗಾರರು ಸಹ ತಲಾ 4 ಬಾರಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Story first published: Friday, June 3, 2022, 21:57 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X