ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: SRHಗೆ ಬಿಗ್ ಶಾಕ್, ವಾಷಿಂಗ್ಟನ್‌ ಸುಂದರ್‌ಗೆ ಗಾಯ, 2 ಪಂದ್ಯ ಮಿಸ್‌

IPL 2022: Washington likely to miss at least 2 IPL matches due to hand injury

ಸತತ ಎರಡು ಗೆಲುವು ಸಾಧಿಸಿದ ಸನ್‌ರೈಸರ್ಸ್ ಹೈದ್ರಾಬಾದ್‌ ತಂಡದಲ್ಲಿ ಆತಂಕ ಮನೆ ಮಾಡಿದ್ದು, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಾಗೊಂಡಿದ್ದು, ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ವಾಷಿಂಗ್ಟನ್ ಸುಂದರ್ ಅವರ ಮೊಣಕೈ ಗಾಯಗೊಂಡಿರುವ ಹಿನ್ನಲೆಯಲ್ಲಿ ಕನಿಷ್ಠ ಮುಂದಿನ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯಬೇಕಾಗಿದೆ. ಈ ಕುರಿತು ಎಸ್‌ಆರ್‌ಎಚ್‌ ತಂಡದ ಕೋಚ್ ಟಾಮ್ ಮೂಡಿ ಮಾಹಿತಿ ನೀಡಿದ್ದು, ತಂಡದ ಪ್ರಮುಖ ಸ್ಪಿನ್ನರ್ ಅಲಭ್ಯತೆ ಕುರಿತು ಮಾಹಿತಿ ನೀಡಿದ್ದಾರೆ.

''ತಂಡದಲ್ಲಿದ್ದ ಉತ್ತಮ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಗಾಯದ ಹಿನ್ನಲೆಯಲ್ಲಿ ವಿಶ್ರಾಂತಿ ಪಡೆಯಬೇಕಿದೆ, ಇದರಿಂದ ತಂಡದ ಪ್ರದರ್ಶನದ ಮೇಲೆ ಕೊಂಚ ಪರಿಣಾಮ ಬೀರಲಿದೆ'' ಎಂದು ಹೇಳಿದ್ದಾರೆ.

ಆರೆಂಜ್ ಆರ್ಮಿ ಈವರೆಗೂ ನಾಲ್ಕು ಪಂದ್ಯಗಳನ್ನು ಆಡಿದ್ದು ಅದರಲ್ಲಿ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ಬಳಿಕ, ಉಳಿದ ಎರಡು ಪಂದ್ಯಗಳಲ್ಲಿ ಜಯಶಾಲಿಯಾಗಿದೆ. ಆದ್ರೀಗ ಈ ಗೆಲುವಿನ ಓಟವನ್ನ ಮುಂದುವರಿಸಬೇಕು ಎನ್ನುವಷ್ಠರಲ್ಲಿ ತಂಡದ ಎಡಗೈ ಆಲ್ ರೌಂಡರ್ ನ ಅಲಭ್ಯತೆಯ ಕೊರತೆ ಕಾಡುವಂತಾಗಿದೆ.

ಈ ಆವೃತ್ತಿಯಲ್ಲಿ ವಾಷಿಂಗ್ಟನ್ ಎಸ್‌ಆರ್‌ಎಚ್‌ ತಂಡಕ್ಕೆ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದರೂ, ವಾಷಿಂಗ್ಟನ್ ಮೂರು ಓವರ್್ಗೆ 47 ರನ್ ನೀಡಿ ಯಾವುದೇ ವಿಕೆಟ್ ಪೆಡಯಲು ಸಾಧ್ಯವಾಗಲಿಲ್ಲ.

ನಂತರದ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್್ನಲ್ಲೂ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿರುವ ಸುಂದರ್ 58ರನ್ ಗಳಿಸಿದ್ದಾರೆ. ಪ್ರಸ್ತುತದಲ್ಲಿ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೊರತೆ ತಂಡದ ಮೇಲೆ ಯಾವ ರೀತಿಯ ಪರಿಣಾಮ ಬಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಏ.11ರಂದು ನಡೆದ ಗುಜರಾತ್ ಟೈಟನ್ ವಿರುದ್ದದ ಪಂದ್ಯದಲ್ಲಿ ಗಾಯಗೊಂಡ ಕಾರಣದಿಂದ ಸುಂದರ್‌ಗೆ ತಮ್ಮ ಬೌಲಿಂಗ್ ಕೋಟಾದ ಓವರ್ ಪೂರ್ಣಗೊಳಿಸಲು ಸಹ ಸಾಧ್ಯವಾಗಲಿಲ್ಲ. ಮೂರು ಓವರ್ ಗಳಲ್ಲಿ ಕೇವಲ 14 ರನ್ ನೀಡಿ ಯಾವುದೇ ವಿಕೆಟ್ ಪಡೆಯದಿದ್ದರೂ, ಗುಜರಾತ್ ಟೈಟನ್ಸ್‌ ತಂಡವನ್ನು 162ರನ್ ಗಳಲ್ಲಿ ಕಟ್ಟಿಹಾಕಲು ಯಶಸ್ವಿಯಾದರು.

Dube ಹಾಗು Uthappa CSK ಗೆಲುವಿಗೆ ಮುಖ್ಯ ಕಾರಣ | Oneindia Kannada

ನಂತರದಲ್ಲಿ ಬ್ಯಾಟ್‌ ಮಾಡಿದ ಎಸ್‌ಆರ್‌ಎಚ್‌ 8 ವಿಕೆಟ್‌ಗಳಿಂದ ಜಯಗಳಿಸಿತು. ರಾಹುಲ್ ತ್ರಿಪಾಟಿ ಸಹ ಗಾಯಗೊಂಡಿದ್ದು, ಯಾವುದೇ ಹೆಚ್ಚಿನ ತೊಂದರೆಗಳಾಗಿಲ್ಲ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ 44 ಗಳಿಸಿರುವ ತ್ರಿಪಾಟಿ ಅವರ ಅವಶ್ಯಕತೆ ತಂಡಕ್ಕೆ ಇದೆ ಎಂದು ಕೋಚ್ ಟಾಮ್ ಮೂಡಿ ಹೇಳಿದ್ದಾರೆ.

Story first published: Tuesday, April 12, 2022, 13:03 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X