ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾಗುವ 3 ಸಂಭಾವ್ಯ ಭಾರತೀಯ ಆಟಗಾರರು

IPL 2023: 3 Indian Players Likely To Be Costliest Buys In Mini Auction

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ನಡೆಯುವ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ಮತ್ತು ನಿರೀಕ್ಷೆ ನಿರಂತರವಾಗಿ ಹೆಚ್ಚುತ್ತಿದೆ. ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರ ಶುಕ್ರವಾರದಂದು ಕೊಚ್ಚಿಯಲ್ಲಿ ನಡೆಯಲಿದೆ.

ಕೆಲವು ದಿನಗಳ ಹಿಂದೆ ಐಪಿಎಲ್ ಟಿ20 ಲೀಗ್ ಆಯೋಜಕರು ಅಂತಿಮ ಆಟಗಾರರ ಹರಾಜು ಪಟ್ಟಿಯನ್ನು ಖಚಿತಪಡಿಸಿದರು. 10 ಫ್ರಾಂಚೈಸಿಗಳಿಂದ 405 ಕ್ರಿಕೆಟಿಗರನ್ನು ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಪಟ್ಟಿಯಲ್ಲಿ 273 ಭಾರತೀಯ ಕ್ರಿಕೆಟಿಗರು ಮತ್ತು 132 ವಿದೇಶಿ ಆಟಗಾರರು ಸೇರಿದ್ದಾರೆ, ಅಲ್ಲದೆ ನಾಲ್ವರು ಸಹವರ್ತಿ ರಾಷ್ಟ್ರಗಳ ಆಟಗಾರರಿದ್ದಾರೆ.

IND-W vs AUS-W: ಭಾರತ vs ಆಸ್ಟ್ರೇಲಿಯಾ 5ನೇ ಟಿ20 ಪಂದ್ಯದ ವಿವರ, ಆಡುವ 11ರ ಬಳಗIND-W vs AUS-W: ಭಾರತ vs ಆಸ್ಟ್ರೇಲಿಯಾ 5ನೇ ಟಿ20 ಪಂದ್ಯದ ವಿವರ, ಆಡುವ 11ರ ಬಳಗ

ಅಂತಿಮ ಆಟಗಾರರ ಹರಾಜು ಪಟ್ಟಿಯಲ್ಲಿ 119 ಕ್ಯಾಪ್ಡ್ ಆಟಗಾರರು ಮತ್ತು 282 ಅನ್‌ಕ್ಯಾಪ್ಡ್ ಆಟಗಾರರು, ಉಳಿದ ನಾಲ್ವರು ಅಸೋಸಿಯೇಟ್-ರಾಷ್ಟ್ರ ಕ್ರಿಕೆಟಿಗರಾಗಿದ್ದಾರೆ. ಅಧಿಕೃತ ಐಪಿಎಲ್ ಬಿಡುಗಡೆಯ ಪ್ರಕಾರ, 2023ರ ಹರಾಜಿನಲ್ಲಿ ಗರಿಷ್ಠ 87 ಸ್ಲಾಟ್‌ಗಳನ್ನು ಭರ್ತಿ ಮಾಡಬಹುದು ಎಂದು ದೃಢಪಡಿಸಿದ್ದು, ಅವುಗಳಲ್ಲಿ 30 ವಿದೇಶಿ ಆಟಗಾರರಿಗೆ ಮೀಸಲಿವೆ.

ಐಪಿಎಲ್ 2023ರ ಹರಾಜಿಗೆ ಆಯ್ಕೆಯಾಗಿರುವ 273 ಭಾರತೀಯ ಕ್ರಿಕೆಟಿಗರ ಪೈಕಿ ಕೆಲವೇ ಕೆಲವರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿಯಾಗಿ ಖರೀದಿಯಾಗುವ ಮೂರು ಸಂಭಾವ್ಯ ಭಾರತೀಯ ಆಟಗಾರರು ಇಲ್ಲಿದ್ದಾರೆ.

ಮಯಾಂಕ್ ಅಗರ್ವಾಲ್ (ಈ ಹಿಂದೆ ಪಂಜಾಬ್ ಕಿಂಗ್ಸ್)

ಮಯಾಂಕ್ ಅಗರ್ವಾಲ್ (ಈ ಹಿಂದೆ ಪಂಜಾಬ್ ಕಿಂಗ್ಸ್)

ಕೆಎಲ್ ರಾಹುಲ್ ಅವರು ಐಪಿಎಲ್ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕನಾಗಿ ತೆರಳಿದ ನಂತರ ಮಯಾಂಕ್ ಅಗರ್ವಾಲ್‌ರನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಿಸಲಾಯಿತು. ಆದರೆ 31 ವರ್ಷ ವಯಸ್ಸಿನ ಮಯಾಂಕ್ ಅತ್ಯಂತ ಕಳಪೆ ಋತುವನ್ನು ಹೊಂದಿದ್ದರು. 13 ಪಂದ್ಯಗಳಲ್ಲಿ 16.33ರ ಸರಾಸರಿಯಲ್ಲಿ ಮತ್ತು 122.50ರ ಸ್ಟ್ರೈಕ್‌ರೇಟ್‌ನಲ್ಲಿ 196 ರನ್‌ ಮಾತ್ರ ಗಳಿಸಿದರು.

ಮಯಾಂಕ್ ಅಗರ್ವಾಲ್ ಬ್ಯಾಟ್‌ನೊಂದಿಗೆ ಏಕೈಕ ಅರ್ಧಶತಕವನ್ನು ಮಾತ್ರ ಗಳಿಸಿದ್ದರು. ಅಗ್ರ ಕ್ರಮಾಂಕದಲ್ಲಿ ಕಳಪೆಯಾದ ನಂತರ ತಮ್ಮ ಆರಂಭಿಕ ಸ್ಲಾಟ್ ಅನ್ನು ತ್ಯಾಗ ಮಾಡಿ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಮಾಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರಸ್ತುತ ನಡೆಯುತ್ತಿರುವ ದೇಶೀಯ ಋತುವಿನಲ್ಲಿ ಬಲಗೈ ಬ್ಯಾಟರ್ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ಪರ ಅಸ್ಥಿರ ಪ್ರದರ್ಶನ ನೀಡಿದ್ದಾರೆ. ಆದಾಗ್ಯೂ, ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನಾಗಿದ್ದಾರೆ. ಈ ಹಿಂದೆ ಕೆಲವು ಅದ್ಭುತ ಪ್ರದರ್ಶನಗಳನ್ನು ಆಡಿದ್ದಾರೆ. ಅವರು 2020ರಲ್ಲಿ 156.45 ಸ್ಟ್ರೈಕ್‌ರೇಟ್‌ನಲ್ಲಿ 424 ರನ್ ಗಳಿಸಿದರು ಮತ್ತು 2021ರಲ್ಲಿ 140.44 ಸ್ಟ್ರೈಕ್‌ರೇಟ್‌ನಲ್ಲಿ 441 ರನ್ ಗಳಿಸಿದ್ದರು.

ಮಯಾಂಕ್ ಅಗರ್ವಾಲ್ ತಮ್ಮ ಹೆಸರನ್ನು ಹರಾಜಿನಲ್ಲಿ 1 ಕೋಟಿ ರೂ. ಬೆಲೆಯಲ್ಲಿ ನೋಂದಾಯಿಸಿದ್ದಾರೆ. ಐಪಿಎಲ್ 2023ರ ಹರಾಜಿನಲ್ಲಿ ಅವರು ಅತ್ಯಂತ ದುಬಾರಿಯಾಗಿ ಖರೀದಿಯಾಗುವ ಭಾರತೀಯ ಆಟಗಾರನಾಗುವ ಸಾಧ್ಯತೆಯಿದೆ.

ನಾರಾಯಣ ಜಗದೀಸನ್ (ಈ ಹಿಂದೆ ಸಿಎಸ್‌ಕೆ)

ನಾರಾಯಣ ಜಗದೀಸನ್ (ಈ ಹಿಂದೆ ಸಿಎಸ್‌ಕೆ)

ತಮಿಳುನಾಡು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಾರಾಯಣ ಜಗದೀಸನ್ ಅವರನ್ನು ಐಪಿಎಲ್ 2022ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈಬಿಡಲಾಯಿತು. ಅದಕ್ಕೂ ಮುನ್ನ ಅವರು ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡರು ಮತ್ತು 108.11 ಸ್ಟ್ರೈಕ್‌ರೇಟ್‌ನಲ್ಲಿ 40 ರನ್ ಗಳಿಸಿದರು. ಐಪಿಎಲ್ 2023ರ ಹರಾಜಿನ ಮುನ್ನ ಸಿಎಸ್‌ಕೆ ತಮ್ಮ ರಿಟೇನ್ ಪಟ್ಟಿಯನ್ನು ಪ್ರಕಟಿಸಿದಾಗ 26 ವರ್ಷದ ಯುವ ಆಟಗಾರನನ್ನು ಕೈಬಿಟ್ಟರು.

ಇತ್ತೀಚೆಗೆ ನಡೆದ ದೇಶೀಯ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಐಪಿಎಲ್ ಫ್ರಾಂಚೈಸಿಗಳು ದೊಡ್ಡ ಮೊತ್ತಕ್ಕೆ ಖರೀದಿಸಲು ಉತ್ಸುಕರಾಗಿದ್ದಾರೆ. ಎನ್ ಜಗದೀಸನ್ ಅವರು ವಿಜಯ್ ಹಜಾರೆ ಟ್ರೋಫಿ 2022-23ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಆರು ಪಂದ್ಯಗಳಲ್ಲಿ 138.33 ಸರಾಸರಿಯಲ್ಲಿ 830 ರನ್ ಗಳಿಸಿದರು.

ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯ ದ್ವಿಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು. ಇನ್-ಫಾರ್ಮ್ ಬ್ಯಾಟರ್ ಸತತ ಐದು ಲಿಸ್ಟ್-ಎ ಶತಕಗಳನ್ನು ಬಾರಿಸಿದ ಮೊದಲ ಆಟಗಾರರಾದರು. ಅವರು ಕೇವಲ 141 ಎಸೆತಗಳಲ್ಲಿ 25 ಬೌಂಡರಿ ಮತ್ತು 15 ಸಿಕ್ಸರ್‌ಗಳ ನೆರವಿನಿಂದ 277 ರನ್ ಗಳಿಸಿದ್ದರು.

ಅನ್‌ಕ್ಯಾಪ್ಡ್ ಆಟಗಾರನಾಗಿರುವ ಎನ್ ಜಗದೀಶನ್ 20 ಲಕ್ಷ ರೂ. ಬೆಲೆ ಬ್ರಾಕೆಟ್‌ನಲ್ಲಿ ತಮ್ಮ ಹೆಸರನ್ನು ಪಟ್ಟಿ ಮಾಡಿದ್ದಾರೆ. ಅವರ ಪ್ರದರ್ಶನವು ಅವರನ್ನು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯಕ್ಕೆ ಹರಾಜಾಗುವ ನಿರೀಕ್ಷೆ ಇದೆ.

ಜಯದೇವ್ ಉನಾದ್ಕಟ್ (ಈ ಹಿಂದೆ ಮುಂಬೈ ಇಂಡಿಯನ್ಸ್)

ಜಯದೇವ್ ಉನಾದ್ಕಟ್ (ಈ ಹಿಂದೆ ಮುಂಬೈ ಇಂಡಿಯನ್ಸ್)

ಸೌರಾಷ್ಟ್ರದ ಅನುಭವಿ ಎಡಗೈ ಸೀಮರ್ ಜಯದೇವ್ ಉನಾದ್ಕಟ್ ಅವರು 2010ರ ನಂತರ ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ ನಂತರ ಹೆಚ್ಚು ಸುದ್ದಿಯಲ್ಲಿದ್ದಾರೆ. 31 ವರ್ಷ ವಯಸ್ಸಿನವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರ ಫಲವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 2022ರ ಹರಾಜಿನಲ್ಲಿ ಜಯದೇವ್ ಉನಾದ್ಕಟ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 1.3 ಕೋಟಿ ರೂ.ಗೆ ತೆಗೆದುಕೊಂಡಿತು. ವೇಗಿ ಐದು ಪಂದ್ಯಗಳನ್ನು ಆಡಿದರು 9.50ರ ಎಕಾನಮಿ ದರದಲ್ಲಿ ಆರು ವಿಕೆಟ್‌ಗಳನ್ನು ಪಡೆದರು.

ಜಯದೇವ್ ಉನಾದ್ಕಟ್ ಈ ಹಿಂದೆ 2018ರಿಂದ 2020ರವರೆಗೆ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಫ್ರಾಂಚೈಸಿಗಳು ಉನಾದ್ಕಟ್‌ಗೆ ಹೆಚ್ಚು ಖರ್ಚು ಮಾಡುವ ಬಗ್ಗೆ ಎಚ್ಚರದಿಂದಿರಬೇಕು ಎಂಬುದು ನಿಜವಾದರೂ, ಅವರ ಉತ್ತಮ ಪ್ರದರ್ಶನಗಳನ್ನು ನಿರ್ಲಕ್ಷಿಸಲು ಕಷ್ಟವಾಗುತ್ತದೆ.

ಜಯದೇವ್ ಉನಾದ್ಕಟ್ ವಿಜಯ್ ಹಜಾರೆ ಟ್ರೋಫಿ 2022-23ರಲ್ಲಿ ಹೆಚ್ಚಿನ ವಿಕೆಟ್-ಟೇಕರ್ ಆಗಿದ್ದಾರೆ. ಸೌರಾಷ್ಟ್ರದ ಪ್ರಶಸ್ತಿ ವಿಜೇತ ಪಂದ್ಯಾವಳಿಯಲ್ಲಿ 10 ಪಂದ್ಯಗಳಲ್ಲಿ 16.10ರ ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಯದೇವ್ ಉನಾದ್ಕಟ್ ಮಿನಿ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ನಿಗದಿಪಡಿಸಿದ್ದಾರೆ. ಅವರ ಪ್ರಚಂಡ ಫಾರ್ಮ್ ಅನ್ನು ಪರಿಗಣಿಸಿ ಐಪಿಎಲ್ ಫ್ರಾಂಚೈಸಿಗಳು ಮತ್ತೊಂದು ಅವಕಾಶವನ್ನು ನೀಡಲು ದೊಡ್ಡ ಮೊತ್ತಕ್ಕೆ ಖರೀದಿಸುವ ಸಾಧ್ಯತೆ ಇದೆ.

Story first published: Tuesday, December 20, 2022, 13:46 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X