IPL 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್‌ಗೆ ಗಾಳ ಹಾಕಲಿದೆ ಈ ಫ್ರಾಂಚೈಸಿ; ಅನಿಲ್ ಕುಂಬ್ಳೆ

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಶುಕ್ರವಾರ ಕೊಚ್ಚಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಇದೇ ವೇಳೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ 2022ರ ಋತುವಿನಲ್ಲಿ ಕಳಪೆ ಅಭಿಯಾನದ ನಂತರ ಸ್ಟಾರ್ ಆಟಗಾರರ ಹುಡುಕಾಟದಲ್ಲಿದೆ. ಏಕೆಂದರೆ ಈ ಬಾರಿ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಹರಾಜು ಪೂಲ್‌ಗೆ ಸೇರ್ಪಡೆಗೊಂಡಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಎದುರು ನೋಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IPL 2023 Auction: ಈ ಆಲ್‌ರೌಂಡರ್‌ನನ್ನು ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ; ರಾಬಿನ್ ಉತ್ತಪ್ಪIPL 2023 Auction: ಈ ಆಲ್‌ರೌಂಡರ್‌ನನ್ನು ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ; ರಾಬಿನ್ ಉತ್ತಪ್ಪ

ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಇತ್ತೀಚೆಗೆ 2022ರಲ್ಲಿ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಬಾರಿಗೆ ಆಡಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದು, ತನ್ನ ತಂಡಕ್ಕಾಗಿ ಇನ್ನಿಂಗ್ಸ್ ತೆರೆಯುವ ಸಾಮರ್ಥ್ಯ ಹೊಂದಿದ್ದಾನೆ. ಕೇವಲ 23 ವರ್ಷ ವಯಸ್ಸಿನ ಈ ಆಟಗಾರನಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂದು ನಿರೀಕ್ಷಿಸಲಾಗಿದೆ.

"ಪಂಜಾಬ್ ಕಿಂಗ್ಸ್ ವಿದೇಶಿ ಆಲ್‌ರೌಂಡರ್ ಓಡಿಯನ್ ಸ್ಮಿತ್‌ನನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಅವರು ಖಂಡಿತವಾಗಿಯೂ ಸಾಗರೋತ್ತರ ಆಲ್‌ರೌಂಡರ್‌ಗಾಗಿ ಹುಡುಕುತ್ತಾರೆ. ಹಾಗಾಗಿ ಅವರ ಗುರಿಯಲ್ಲಿ ಕ್ಯಾಮೆರಾನ್ ಗ್ರೀನ್, ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರಾನ್ ಇದ್ದಾರೆ. ನನ್ನ ದೃಷ್ಟಿಯಲ್ಲಿ ಅವರು ಕ್ಯಾಮರೂನ್‌ ಗ್ರೀನ್ ಕಡೆ ನೋಡುತ್ತಾರೆ," ಎಂದು ಅನಿಲ್ ಕುಂಬ್ಳೆ ಹೇಳಿದರು.

IPL 2023: ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಖರೀದಿಯಾಗುವ 3 ಸಂಭಾವ್ಯ ಭಾರತೀಯ ಆಟಗಾರರುIPL 2023: ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಖರೀದಿಯಾಗುವ 3 ಸಂಭಾವ್ಯ ಭಾರತೀಯ ಆಟಗಾರರು

"ಕ್ಯಾಮೆರಾನ್ ಗ್ರೀನ್ ವೇಗದ ಬೌಲಿಂಗ್‌ ಮಾಡುತ್ತಾರೆ, ಅವರು ಎತ್ತರವಾಗಿದ್ದಾರೆ, ಬ್ಯಾಟ್ ಬಲವಾಗಿ ಬೀಸುತ್ತಾರೆ ಮತ್ತು ಅಗ್ರ ಮೂರರಲ್ಲಿ ಬ್ಯಾಟ್ ಮಾಡಬಹುದು. ಹಾಗಾಗಿ ಪಂಜಾಬ್ ಅವರನ್ನು ಖರೀದಿಸಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪಂಜಾಬ್‌ಗೆ ಖಂಡಿತವಾಗಿಯೂ ಸಾಗರೋತ್ತರ ಆಲ್‌ರೌಂಡರ್ ಅಗತ್ಯವಿದೆ," ಎಂದು ಅನಿಲ್ ಕುಂಬ್ಳೆ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಂಜಾಬ್ ತಂಡದ ನಾಯಕತ್ವ ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಮುಂದಿನ ಆವೃತ್ತಿಯ ಪಂದ್ಯಾವಳಿಗೆ ಬದಲಾಯಿಸಲಾಗಿದೆ. 2022ರ ಆವೃತ್ತಿಯ ಟೂರ್ನಿಯಲ್ಲಿ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಡಲಾಗಿದೆ.

"ಪಂಜಾಬ್ ಕಿಂಗ್ಸ್ ಹೊಂದಿರುವ ಇತರ ಎರಡು ಸ್ಲಾಟ್‌ಗಳು ಸಾಗರೋತ್ತರ ಆಯ್ಕೆಗಳನ್ನು ಹೊಂದಿವೆ. ಅವರಿಗೆ ಸಾಕಷ್ಟು ಆಯ್ಕೆಗಳಿದ್ದು, ಅವರಿಗೆ ಖರ್ಚು ಮಾಡಲು ಸಾಕಷ್ಟು ಹಣವಿದೆ. ಹಾಗಾಗಿ ಪಂಜಾಬ್ ಬಹುಶಃ ಸಾಗರೋತ್ತರ ಸ್ಪಿನ್ನಿಂಗ್ ಆಲ್‌ರೌಂಡರ್ ಮತ್ತು ಬ್ಯಾಟರ್‌ನೊಂದಿಗೆ ತುಂಬುತ್ತಾರೆ ಎಂದು ನಾನು ಭಾವಿಸುತ್ತೇನೆ," ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

For Quick Alerts
ALLOW NOTIFICATIONS
For Daily Alerts
Story first published: Tuesday, December 20, 2022, 20:11 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X