IPL 2023 Auction: ಇಂಗ್ಲೆಂಡ್ ಸ್ಟಾರ್ ಬೌಲರ್ ರೀಸ್ ಟೋಪ್ಲೆ ಖರೀದಿಸಿದ ಆರ್‌ಸಿಬಿ

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆಗೆ ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಗ್ಲೆಂಡ್‌ನ ಸ್ಟಾರ್ ಬೌಲರ್ ರೀಸ್ ಟೋಪ್ಲೆರನ್ನು ಖರೀದಿ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2023ರ ಐಪಿಎಲ್ ಹರಾಜಿನಲ್ಲಿ ತನ್ನ ಖಾತೆಯನ್ನು ರೀಸ್ ಟೋಪ್ಲೆ ಅವರನ್ನು 1.90 ಕೋಟಿ ರೂಪಾಯಿಗೆ ಪಡೆದುಕೊಳ್ಳುವ ಮೂಲಕ ತೆರೆಯಿತು.

IPL 2023 Auction: ಐಪಿಎಲ್ ಇತಿಹಾಸದಲ್ಲಿಯೇ ದಾಖಲೆ ಬೆಲೆಗೆ ಮಾರಾಟವಾದ ಸ್ಯಾಮ್ ಕರ್ರಾನ್IPL 2023 Auction: ಐಪಿಎಲ್ ಇತಿಹಾಸದಲ್ಲಿಯೇ ದಾಖಲೆ ಬೆಲೆಗೆ ಮಾರಾಟವಾದ ಸ್ಯಾಮ್ ಕರ್ರಾನ್

ಮುಂಬೈ ಇಂಡಿಯನ್ಸ್ ತಂಡವು ರೀಸ್ ಟೋಪ್ಲೆಯ ಮೂಲ ಬೆಲೆ 75 ಲಕ್ಷ ರೂ.ಗೆ ಬಿಡ್ಡಿಂಗ್ ತೆರೆಯಿತು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಪೈಪೋಟಿ ನಡೆಸಿತು. ನಂತರ ಬಿಡ್ಡಿಂಗ್ ಪೈಪೋಟಿ ಪ್ರವೇಶಿಸಿದ ಆರ್‌ಸಿಬಿ ತಂಡ ಅಂತಿಮವಾಗಿ ಅವರನ್ನು 1.90 ಕೋಟಿ ರೂ.ಗೆ ಬುಟ್ಟಿಗೆ ಹಾಕಿಕೊಂಡಿತು.

IPL 2023 Auction: ದೊಡ್ಡ ಮೊತ್ತಕ್ಕೆ ಸ್ಟಾರ್ ಅಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಖರೀದಿಸಿದ ಮುಂಬೈ ಇಂಡಿಯನ್ಸ್IPL 2023 Auction: ದೊಡ್ಡ ಮೊತ್ತಕ್ಕೆ ಸ್ಟಾರ್ ಅಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಖರೀದಿಸಿದ ಮುಂಬೈ ಇಂಡಿಯನ್ಸ್

ಇಂಗ್ಲೆಂಡ್‌ನ ಎತ್ತರದ ಎಡಗೈ ವೇಗಿ ರೀಸ್ ಟೋಪ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಇತ್ತೀಚಿನ ಪ್ರದರ್ಶನಗಳಿಂದ ಹೆಚ್ಚಿನ ಸದ್ದು ಮಾಡುತ್ತಿದ್ದಾರೆ. ದುರದೃಷ್ಟಕರವೆಂದರೆ, ಅವರು ಪಾದದ ಗಾಯದಿಂದಾಗಿ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನವನ್ನು ಕಳೆದುಕೊಂಡಿದ್ದರು.

6 ಅಡಿ 7 ಇಂಚಿನ ವೇಗದ ಬೌಲರ್ ರೀಸ್ ಟೋಪ್ಲೆ ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡಬಲ್ಲರು. ಇನ್ನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತರಬಲ್ಲ ಬೌಲರ್ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಅವರ ಪ್ರದರ್ಶನಗಳು ಅವರು ಉನ್ನತ ಮಟ್ಟದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, December 23, 2022, 17:00 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X