ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI Probable 11 IPL 2023: ಆರ್ಚರ್, ಗ್ರೀನ್ ಉಪಸ್ಥಿತಿ; ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಡುವ 11ರ ಬಳಗ ಹೀಗಿರಲಿದೆ

IPL 2023: Presence of Archer, Green; The Strong Playing 11 Team Of Mumbai Indians Will Be Like This

ಐದು ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಶುಕ್ರವಾರ (ಡಿಸೆಂಬರ್ 23) ಕೊಚ್ಚಿಯಲ್ಲಿ ನಡೆದ 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಅತ್ಯುತ್ತಮ ಆಯ್ಕೆಗಳ ಮೂಲಕ ಪರಿಪೂರ್ಣ ತಂಡವನ್ನು ನಿರ್ಮಿಸಿಕೊಂಡಿದೆ.

ಕಳೆದ ಎರಡು ಐಪಿಎಲ್ ಋತುವಿನಲ್ಲಿ ಪ್ಲೇಆಫ್ ಹಂತವನ್ನು ಪ್ರವೇಶಿಸಲೂ ವಿಫಲವಾಗಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ, ಮತ್ತೊಮ್ಮೆ ತಮ್ಮ ಫಾರ್ಮ್ ಮರಳಿ ಪಡೆಯಲು ಮತ್ತು ಆರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಎದುರು ನೋಡುತ್ತಿದೆ.

IPL 2023 Auction: ಬೆನ್ ಸ್ಟೋಕ್ಸ್ ಖರೀದಿಸಿದ ಸಿಎಸ್‌ಕೆ ಬಗ್ಗೆ ಅಸಮಾಧಾನ ಹೊರಹಾಕಿದ ಆಕಾಶ್ ಚೋಪ್ರಾIPL 2023 Auction: ಬೆನ್ ಸ್ಟೋಕ್ಸ್ ಖರೀದಿಸಿದ ಸಿಎಸ್‌ಕೆ ಬಗ್ಗೆ ಅಸಮಾಧಾನ ಹೊರಹಾಕಿದ ಆಕಾಶ್ ಚೋಪ್ರಾ

ಈ ವರ್ಷದ ಆರಂಭದಲ್ಲಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ ಪ್ರಮುಖ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅವರ ಅನುಪಸ್ಥಿತಿಯಿಂದ ನಾಯಕ ರೋಹಿತ್ ಶರ್ಮಾ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಿತ್ತು. ಆದರೆ ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸುವ ಮೂಲಕ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಅತ್ಯುತ್ತಮ ಬದಲಿ ಆಟಗಾರನನ್ನು ಹುಡುಕಿದೆ.

ಕ್ಯಾಮರೂನ್ ಗ್ರೀನ್ ಎರಡನೇ ಅತ್ಯಂತ ದುಬಾರಿ ಖರೀದಿ

ಕ್ಯಾಮರೂನ್ ಗ್ರೀನ್ ಎರಡನೇ ಅತ್ಯಂತ ದುಬಾರಿ ಖರೀದಿ

ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಸ್ಯಾಮ್ ಕರ್ರಾನ್ ನಂತರ ಎರಡನೇ ಅತ್ಯಂತ ದುಬಾರಿ ಖರೀದಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ 17.5 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ. ಯುವ ಆಸ್ಟ್ರೇಲಿಯನ್ ಕ್ಯಾಮರೂನ್ ಗ್ರೀನ್ ಅವರು ಕೀರನ್ ಪೊಲಾರ್ಡ್‌ಗೆ ಉತ್ತಮ ಬದಲಿ ಆಟಗಾರನಾಗಿದ್ದಾನೆ.

ಮುಂಬೈ ಇಂಡಿಯನ್ಸ್ ತಂಡದ ಆಡುವ 11 ಬಳಗದಲ್ಲಿ ಸಹ ಆಸೀಸ್ ಕ್ರಿಕೆಟಿಗರಾದ ಟಿಮ್ ಡೇವಿಡ್ ಮತ್ತು ಝೈ ರಿಚರ್ಡ್‌ಸನ್ ಅಥವಾ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಸೇರಿಕೊಳ್ಳುಬ ಸಾಧ್ಯತೆ ಇದೆ.

ಐಪಿಎಲ್ 2023ರಲ್ಲಿ ಆಡಲು ಜೋಫ್ರಾ ಆರ್ಚರ್ ಫಿಟ್

ಐಪಿಎಲ್ 2023ರಲ್ಲಿ ಆಡಲು ಜೋಫ್ರಾ ಆರ್ಚರ್ ಫಿಟ್

ಕಳೆದ ಬಾರಿ ಗಾಯದ ಕಾರಣದಿಂದ ಐಪಿಎಲ್ ಪಂದ್ಯಾವಳಿ ತಪ್ಪಿಸಿಕೊಂಡಿದ್ದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರು ಐಪಿಎಲ್ 2023ರಲ್ಲಿ ಆಡಲು ಸಾಕಷ್ಟು ಫಿಟ್ ಆಗಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಜೋಫ್ರಾ ಆರ್ಚರ್ ಅವರು ಜಸ್ಪ್ರೀತ್ ಬುಮ್ರಾ ಅವರ ಜೊತೆ ಸೇರಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಆರಂಭಿಕ ಬ್ಯಾಟಿಂಗ್ ನೇತೃತ್ವದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಂತಹ ವಿಧ್ವಂಸಕ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದೆ. ತಿಲಕ್ ವರ್ಮಾ ವರ್ಮಾ ಮತ್ತು ಟಿಮ್ ಡೇವಿಡ್‌ನೊಂದಿಗೆ ಮಧ್ಯಮ ಕ್ರಮಾಂಕವು ಉತ್ತಮವಾಗಿದೆ. ಹೀಗಾಗಿ ಐಪಿಎಲ್ ಪಂದ್ಯಾವಳಿ ವೇಳೆ ಸಂಭಾವ್ಯ ಆಡುವ 11ರ ಬಳಗವನ್ನು ಇಲ್ಲಿ ನೋಡಬಹುದು.

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ 11ರ ಬಳಗ

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಝೈ ರಿಚರ್ಡ್‌ಸನ್/ ಜೇಸನ್ ಬೆಹ್ರೆಂಡಾರ್ಫ್.

ಐಪಿಎಲ್ 2023ರ ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ

ಐಪಿಎಲ್ 2023ರ ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ

ವಿಕೆಟ್‌ಕೀಪರ್‌ಗಳು: ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ವಿಷ್ಣು ವಿನೋದ್.

ಬ್ಯಾಟರ್‌ಗಳು: ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್.

ಆಲ್‌ರೌಂಡರ್‌ಗಳು: ನೆಹಾಲ್ ವಧೇರಾ, ಶಾಮ್ಸ್ ಮುಲಾನಿ, ಡುವಾನ್ ಜಾನ್ಸೆನ್, ಕ್ಯಾಮರೂನ್ ಗ್ರೀನ್.

ಬೌಲರ್‌ಗಳು: ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಷದ್ ಖಾನ್, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ರಾಘವ್ ಗೋಯಲ್, ಪಿಯೂಷ್ ಚಾವ್ಲಾ, ಝೈ ರಿಚರ್ಡ್‌ಸನ್.

Story first published: Monday, December 26, 2022, 13:40 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X