ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ ಭಾಗವಹಿಸದಂತೆ ಬಹುಬೇಡಿಕೆಯ ಆಟಗಾರನಿಗೆ ಪರೋಕ್ಷ ಸೂಚನೆ ನೀಡಿದರಾ ಪ್ಯಾಟ್ ಕಮ್ಮಿನ್ಸ್!

IPL 2023: We Cannot Stop Cameron Green From Playing In IPL Says Australia Captain Pat Cummins

2022ರ ಟಿ20 ವಿಶ್ವಕಪ್ ತವರಿನಲ್ಲಿಯೇ ನಡೆದರೂ ಸೆಮಿಫೈನಲ್ ಪ್ರವೇಶಿಸಲೂ ವಿಫಲವಾದ ಆಸ್ಟ್ರೇಲಿಯಾ ತಂಡ, ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿಯೇ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ತಂಡವನ್ನು ಸೋಲಿಸಿದೆ.

ಇನ್ನು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಐಪಿಎಲ್ 2023ರ ಲೀಗ್‌ನಲ್ಲಿ ಆಡುವುದರಿಂದ ಹಿಂದೆ ಸರಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಕಮ್ಮಿನ್ಸ್ ಆಡದಿರುವುದು ಕೆಕೆಆರ್‌ಗೆ ಹಿನ್ನಡೆಯನ್ನುಂಟು ಮಾಡಿದೆ.

IND vs NZ: ಈತ ಕಣ್ಣಿಗೆ ಕಾಣಲಿಲ್ಲವೇ..?; ಭಾರತ ತಂಡದ ಆಯ್ಕೆ ಬಗ್ಗೆ ಆಕಾಶ್ ಚೋಪ್ರಾ ಕಿಡಿ

ಇದೇ ವೇಳೆ ಆಸ್ಟ್ರೇಲಿಯಾ ತಂಡದ ಯುವ ಬ್ಯಾಟ್ಸ್‌ಮನ್ ಕ್ಯಾಮರೂನ್ ಗ್ರೀನ್ ಅವರು ರಾಷ್ಟ್ರೀಯ ತಂಡದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು ಎಂದು ಬಯಸಿದ್ದರೂ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಟ್ಟುಬಿಡುವಂತೆ ಮ್ಯಾಮರೂನ್ ಗ್ರೀನ್‌ಗೆ ಹೇಳುವುದಿಲ್ಲ ಎಂದು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

ವಾರ್ನರ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆದ ಕ್ಯಾಮರೂನ್ ಗ್ರೀನ್

ವಾರ್ನರ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆದ ಕ್ಯಾಮರೂನ್ ಗ್ರೀನ್

ಆಸ್ಟ್ರೇಲಿಯಾ ತಂಡದ ಭವಿಷ್ಯ ಸ್ಟಾರ್ ಆಟಗಾರ ಎಂದೇ ಪರಿಗಣಿಸಲ್ಪಟ್ಟ 23 ವರ್ಷದ ಕ್ಯಾಮರೂನ್ ಗ್ರೀನ್, ಭಾರತ ಪ್ರವಾಸದ ಸಮಯದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಅನುಭವಿ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆದ ಕ್ಯಾಮರೂನ್ ಗ್ರೀನ್ ಎರಡು ಬಿರುಸಿನ ಅರ್ಧಶತಕ ಗಳಿಸಿದ್ದರು. ಸರಣಿಯಲ್ಲಿ 39.22ರ ಸರಾಸರಿ ಮತ್ತು 214.54ರ ಸ್ಟ್ರೈಕ್ ರೇಟ್‌ನೊಂದಿಗೆ ಪ್ರಭಾವಿ ಬ್ಯಾಟ್ ಬೀಸಿದರು.

ಕ್ಯಾಮರೂನ್ ಗ್ರೀನ್‌ ಅವರ ಪವರ್ ಹಿಟ್ಟಿಂಗ್ ಸಾಮರ್ಥ್ಯ ಮತ್ತು ಚೆಂಡಿನೊಂದಿಗೆ ವೇಗದ ಬೌಲಿಂಗ್ ಪ್ರದರ್ಶನ ಅವರ ಧನಾತ್ಮಕ ಅಂಶಗಳಾಗಿವೆ. ಒಂದು ಮುಂದಿನ ತಿಂಗಳು ನಡೆತಯವ ಐಪಿಎಲ್ ಹರಾಜಿಗೆ ಪ್ರವೇಶಿಸಲು ನಿರ್ಧರಿಸಿದರೆ, ಅವರಿಗೆ ದೊಡ್ಡ ಮೊತ್ತದ ಬಿಡ್ ಹೂಡಲು ತಂಡಗಳು ನಿರ್ಧರಿಸಿವೆ.

ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸುತ್ತಾರೆ

ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸುತ್ತಾರೆ

"ಸಂಭಾವ್ಯವಾಗಿ ಕ್ಯಾಮರೂನ್ ಗ್ರೀನ್ ಅವರು ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸುತ್ತಾರೆ. ನಾವು ಕಾಯುತ್ತೇವೆ ಮತ್ತು ನೋಡುತ್ತೇವೆ, ಹರಾಜು ಸ್ವಲ್ಪ ದೂರದಲ್ಲಿದೆ ಎಂದು ನಾನು ಭಾವಿಸುತ್ತೇನೆ," ಎಂದು ಪ್ಯಾಟ್ ಕಮ್ಮಿನ್ಸ್ SEN ರೇಡಿಯೊಗೆ ತಿಳಿಸಿದರು.

"ಆಸ್ಟ್ರೇಲಿಯಾ ತಂಡದ ನಾಯಕನಾಗಿ ಸ್ವಾರ್ಥದಿಂದ ರಾಷ್ಟ್ರೀಯ ತಂಡಕ್ಕಾಗಿ ತನ್ನ ಎಲ್ಲಾ ಶಕ್ತಿಯನ್ನು ಉಳಿಸಲು ನಾನು ಇಷ್ಟಪಡುತ್ತೇನೆ. ಆದರೆ ಐಪಿಎಲ್ ಅವಕಾಶವನ್ನು ಬೇಡವೆಂದು ಹೇಳಲು ಸಾಧ್ಯವಿಲ್ಲ," ಎಂದು ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ತಿಳಿಸಿದರು.

ಲಾಭದಾಯಕ ಲೀಗ್‌ನಿಂದ ಹೊರಬರಲು ನಿರ್ಧರಿಸಿದ ಕಮ್ಮಿನ್ಸ್

ಲಾಭದಾಯಕ ಲೀಗ್‌ನಿಂದ ಹೊರಬರಲು ನಿರ್ಧರಿಸಿದ ಕಮ್ಮಿನ್ಸ್

ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ತಂಡವನ್ನು ಮುನ್ನಡೆಸುತ್ತಿರುವ ಪ್ಯಾಟ್ ಕಮ್ಮಿನ್ಸ್, ವಿಪರೀತ ಅಂತಾರಾಷ್ಟ್ರೀಯ ಸರಣಿಗಳಿಂದಾಗಿ ಲಾಭದಾಯಕ ಲೀಗ್‌ನಿಂದ ಹೊರಬರಲು ನಿರ್ಧರಿಸಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಮುಂದಿನ ವರ್ಷ ಬಿಡುವಿಲ್ಲದ ಟೆಸ್ಟ್ ಕ್ರಿಕೆಟ್ ವೇಳಾಪಟ್ಟಿ ಇದೆ. ಭಾರತದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ (ಫೆಬ್ರವರಿ-ಮಾರ್ಚ್) ಮತ್ತು ಇಂಗ್ಲೆಂಡ್‌ನಲ್ಲಿ ಜೂನ್ 16ರಿಂದ ಜುಲೈ 31ರವರೆಗೆ ಆಶಸ್ ಸರಣಿಯನ್ನು ಒಳಗೊಂಡಿರುತ್ತದೆ. ಅನಂತರ 50 ಓವರ್‌ಗಳ ವಿಶ್ವಕಪ್ ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ.

ಇನ್ನು 2023ರ ಲೀಗ್‌ಗಾಗಿ ಐಪಿಎಲ್ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ.

Story first published: Friday, November 18, 2022, 18:07 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X