ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಈ ಸಾಮಾನ್ಯ ಆಟಗಾರರಿಗೆ ಕೋಟಿ ಏಕೆ? ಎಲ್ಲಾ ಫ್ರಾಂಚೈಸಿಯಲ್ಲೂ ಓರ್ವ ಕಳಪೆ ಆಟಗಾರ!

IPL Auction 2022: Team wise worst buys from the mega auction

ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಖರೀದಿಸಲಿವೆ ಎಂದು ಹಲವಾರು ತಿಂಗಳುಗಳಿಂದ ಕುತೂಹಲದೊಂದಿಗೆ ಯೋಚಿಸುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಕರಿಗೆ ಕಳೆದ ಫೆಬ್ರವರಿ 12 ಮತ್ತು 13ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆ ಉತ್ತರಗಳನ್ನು ನೀಡಿದೆ. ಹೌದು, ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ಭಾರತ vs ವೆಸ್ಟ್ ಇಂಡೀಸ್: ಭರ್ಜರಿ ಅರ್ಧ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿಭಾರತ vs ವೆಸ್ಟ್ ಇಂಡೀಸ್: ಭರ್ಜರಿ ಅರ್ಧ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ

ಹೀಗೆ ವಿವಿಧ ದೇಶಗಳ ಹಲವಾರು ಆಟಗಾರರಲ್ಲಿ ತಮಗೆ ಬೇಕಾದ ಆಟಗಾರರನ್ನು ಎಲ್ಲಾ 10 ಫ್ರಾಂಚೈಸಿಗಳು ಜಿದ್ದಾಜಿದ್ದಿನ ಹರಾಜು ನಡೆಸಿ ಖರೀದಿ ಮಾಡಿದವು. ಇಶಾನ್ ಕಿಶನ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ನಡೆಸಿದ ಹರಾಜು ಎಲ್ಲರ ಗಮನವನ್ನೂ ಸೆಳೆದಿತ್ತು. ಶತಾಯಗತಾಯ ಇಶಾನ್ ಕಿಶನ್ ಅವರನ್ನು ಖರೀದಿಸಲೇಬೇಕು ಎಂದು ನಿರ್ಧಾರ ಮಾಡಿದ್ದ ಮುಂಬೈ ಇಂಡಿಯನ್ಸ್ 15.25 ಕೋಟಿ ವೆಚ್ಚ ಮಾಡುವ ಮೂಲಕ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತವನ್ನು ಆಟಗಾರನ ಮೇಲೆ ಹೂಡಿದ ಫ್ರಾಂಚೈಸಿ ಎನಿಸಿಕೊಂಡಿತು. ಅಷ್ಟೇ ಅಲ್ಲದೆ ಇನ್ನೂ ಹಲವಾರು ಯುವ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳು ಕೋಟಿಕೋಟಿ ಸುರಿದಿದ್ದು, ಕೆಲ ಆಟಗಾರರಿಗೆ ಹೆಚ್ಚು ಮೊತ್ತವನ್ನು ನೀಡಿದ್ದು ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಕೆಲವರ ಮೇಲೆ ಇಷ್ಟು ಪ್ರಮಾಣದ ಹಣವನ್ನು ಹೂಡುವ ಅಗತ್ಯವೇ ಇರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹುಟ್ಟಿದ ದಿನಾಂಕ ಮುಚ್ಚಿಟ್ಟಿ ಆಡಿದ್ರಾ CSK ಪ್ಲೇಯರ್‌? ವೇಗಿ ರಾಜವರ್ಧನ್ ಹಂಗರ್ಗೇಕರ್ ಮೇಲೆ ಗಂಭೀರ ಆರೋಪ!ಹುಟ್ಟಿದ ದಿನಾಂಕ ಮುಚ್ಚಿಟ್ಟಿ ಆಡಿದ್ರಾ CSK ಪ್ಲೇಯರ್‌? ವೇಗಿ ರಾಜವರ್ಧನ್ ಹಂಗರ್ಗೇಕರ್ ಮೇಲೆ ಗಂಭೀರ ಆರೋಪ!

ಹೀಗೆ ಫ್ರಾಂಚೈಸಿಗಳು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸಾಮಾನ್ಯ ಆಟಗಾರರಿಗೆ ಅನಗತ್ಯವಾಗಿ ಕೋಟಿ ಕೋಟಿ ಸುರಿದಿದ್ದಾರೆ. ಅಂತಹ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭಾರತದ ಆಲ್ ರೌಂಡರ್ ಶಿವಂ ದುಬೆಗೆ 4 ಕೋಟಿ ನೀಡಿ ಖರೀದಿ ಮಾಡಿದೆ. ಆದರೆ ಶಿವಂ ದುಬೆ ಐಪಿಎಲ್ ಪ್ರದರ್ಶನಗಳನ್ನು ಗಮನಿಸಿದರೆ ಈ ಮೊತ್ತ ಹೆಚ್ಚಾಯಿತು ಎಂದೆನಿಸದೇ ಇರಲಾರದು. ಇದುವರೆಗೂ ಒಟ್ಟು 24 ಐಪಿಎಲ್ ಪಂದ್ಯಗಳನ್ನಾಡಿರುವ ಶಿವಂ ದುಬೆ 399 ರನ್ ಗಳಿಸಿದ್ದು, ಕೇವಲ ಒಂದೇ ಒಂದು ಅರ್ಧ ಶತಕವನ್ನು ಬಾರಿಸಿದ್ದಾರೆ. ಇಂತಹ ಸಾಮಾನ್ಯ ಅಂಕಿ ಅಂಶವನ್ನು ಹೊಂದಿರುವ ಆಟಗಾರನಿಗೆ ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿ ನೀಡಿದ್ದು ದುಂದುವೆಚ್ಚ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನಗತ್ಯವಾಗಿ ಕೋಟಿ ಸುರಿದದ್ದು ಬೌಲರ್ ಖಲೀಲ್ ಅಹ್ಮದ್ ಮೇಲೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದುವರೆಗೂ ಒಟ್ಟು 24 ಐಪಿಎಲ್ ಪಂದ್ಯಗಳನ್ನಾಡಿರುವ ಖಲೀಲ್ ಅಹ್ಮದ್ 32 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದಾರೆ. ಇಂಥ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 5.5 ಕೋಟಿ ನೀಡಿ ಖರೀದಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗುತ್ತಿವೆ.

ಗುಜರಾತ್ ಟೈಟಾನ್ಸ್

ಗುಜರಾತ್ ಟೈಟಾನ್ಸ್

ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಸದಾ ಟೀಕೆಗಳಿಗೆ ಸಿಲುಕುವ ಆಟಗಾರ ವಿಜಯ್ ಶಂಕರ್ ಅವರನ್ನು 1.4 ಕೋಟಿಗೆ ಖರೀದಿಸಿದೆ. ಇದುವರೆಗೂ ಒಟ್ಟು 47 ಐಪಿಎಲ್ ಪಂದ್ಯಗಳನ್ನು ಆಡಿರುವ ಈ ಆಲ್ ರೌಂಡರ್ 712 ರನ್ ಬಾರಿಸಿದ್ದು, 9 ವಿಕೆಟ್ ಪಡೆದಿದ್ದಾರೆ. ಹೀಗೆ ಹೆಚ್ಚು ಪಂದ್ಯಗಳನ್ನು ಆಡಿದ್ದರೂ ಸಹ ಹೇಳಿಕೊಳ್ಳುವಂತಹ ಅಂಕಿಅಂಶಗಳನ್ನು ಹೊಂದಿಲ್ಲದ ವಿಜಯ್ ಶಂಕರ್ ಮೇಲೆ ಗುಜರಾತ್ ಟೈಟಾನ್ಸ್ ಕೋಟಿ ಸುರಿದದ್ದು ತಪ್ಪಾದ ನಡೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೋಲ್ಕತ್ತ ನೈಟ್ ರೈಡರ್ಸ್

ಕೋಲ್ಕತ್ತ ನೈಟ್ ರೈಡರ್ಸ್

ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ ಮೇಲೆ 1 ಕೋಟಿ ಹೂಡಿಕೆ ಮಾಡಿದೆ. ಉದ್ಘಾಟನಾ ಆವೃತ್ತಿಯಿಂದ ಐಪಿಎಲ್ ಆಡಿರುವ ಅನುಭವವನ್ನು ಹೊಂದಿರುವ ಆಟಗಾರನಾಗಿದ್ದರೂ ಸಹ ಅಜಿಂಕ್ಯ ರಹಾನೆ ಕಳೆದ 3 ಆವೃತ್ತಿಗಳಲ್ಲಿ ಕಣಕ್ಕಿಳಿಯುವ ಅವಕಾಶಗಳನ್ನು ತೀರಾ ಕಡಿಮೆ ಮಟ್ಟದಲ್ಲಿ ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಅಜಿಂಕ್ಯಾ ರಹಾನೆ ಫಾರ್ಮ್ ಕಳೆದುಕೊಂಡಿದ್ದಾರೆ. ಇನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ನೆಲಕಚ್ಚಿರುವ ಅಜಿಂಕ್ಯ ರಹಾನೆಗೆ 1 ಕೋಟಿ ನೀಡಿದ್ದು ಅಷ್ಟೇನೂ ಸರಿಯಲ್ಲ ಎಂದು ಅಭಿಪ್ರಾಯಗಳು ಬರುತ್ತಿವೆ. ಆದರೆ ಸದ್ಯ ರಣಜಿ ಟ್ರೋಫಿಯ ಮೊದಲನೇ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ಅಜಿಂಕ್ಯ ರಹಾನೆ ಶತಕ ಬಾರಿಸಿದ್ದು ಕಮ್ ಬ್ಯಾಕ್ ಮಾಡಿದ್ದಾರೆ. ಆದರೆ ಇದೇ ರೀತಿಯ ಪ್ರದರ್ಶನವನ್ನು ಟೂರ್ನಿಯುದ್ದಕ್ಕೂ ನೀಡುತ್ತಾರಾ ಅಥವಾ ಮತ್ತೆ ಕಳಪೆ ಪ್ರದರ್ಶನವನ್ನು ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್

ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಮೇಲೆ 7.5 ಕೋಟಿ ಸುರಿದಿದೆ. ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಸಾಮರ್ಥ್ಯವಿರುವ ಮಾರ್ಕ್ ವುಡ್ ಟಿ ಟ್ವೆಂಟಿ ಕ್ರಿಕೆಟ್ ಅಂಕಿ ಅಂಶಗಳು ಅಷ್ಟೇನೂ ಉತ್ತಮವಾಗಿಲ್ಲ. ಇನ್ನು 2018ರ ಐಪಿಎಲ್ ಟೂರ್ನಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿದ ಅನುಭವವನ್ನು ಹೊಂದಿರುವ ಮಾರ್ಕ್ ವುಡ್ ಆ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 49 ರನ್ ನೀಡಿದ್ದರು. ಹೀಗೆ ಆಡಿರುವ ಕೇವಲ ಒಂದೇ ಒಂದು ಪಂದ್ಯದಲ್ಲಿಯೂ ಈ ರೀತಿ ರನ್ ಬಿಟ್ಟುಕೊಟ್ಟಿರುವುದು ಮಾರ್ಕ್ ವುಡ್ ಖರೀದಿಗೆ ಇಷ್ಟು ಮೊತ್ತ ಬೇಕಾಗಿರಲಿಲ್ಲ ಎಂಬುದನ್ನು ತಿಳಿಸುತ್ತಿದೆ.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ವೇಗಿ ರಿಲೆ ಮೆರೆಡಿತ್ ಅವರನ್ನು 1 ಕೋಟಿಗೆ ಖರೀದಿ ಮಾಡಿದೆ. ವೇಗವಾಗಿ ಚೆಂಡನ್ನು ಎಸೆಯಬಲ್ಲ ಸಾಮರ್ಥ್ಯವಿರುವ ರಿಲೆ ಮೆರೆಡಿತ್ ಅದೇ ರೀತಿ ರನ್ ಬಿಟ್ಟು ಕೊಡುವ ಕಳಪೆ ಲಕ್ಷಣವನ್ನು ಕೂಡ ಹೊಂದಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ 5 ಪಂದ್ಯಗಳನ್ನಾಡಿದ್ದ ಈತ 9.94 ಎಕಾನಮಿಯೊಂದಿಗೆ 4 ವಿಕೆಟ್ ಪಡೆದಿದ್ದರು.

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್

ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಪಂದ್ಯವೊಂದನ್ನು ತನ್ನ ಉತ್ತಮ ಪ್ರದರ್ಶನದ ಮೂಲಕ ಬದಲಿಸಿದ್ದ ಹರ್ಪ್ರೀತ್ ಬ್ರಾರ್ 10 ಐಪಿಎಲ್ ಪಂದ್ಯಗಳನ್ನಾಡಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಹೀಗೆ ಈ ರೀತಿಯ ಸಾಮಾನ್ಯ ಅಂಕಿ ಅಂಶಗಳನ್ನು ಹೊಂದಿರುವ ಈತನ ಮೇಲೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 3.8 ಕೋಟಿ ಹೂಡಿದ್ದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತಿದೆ.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಈ ಬಾರಿಯ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಶಿಮ್ರಾನ್ ಹೆಟ್ಮಾಯೆರ್ ಮೇಲೆ 8.5 ಕೋಟಿ ಹೂಡಿಕೆ ಮಾಡಿದೆ. ಆದರೆ ಶಿಮ್ರಾನ್ ಹೆಟ್ಮಾಯೆರ್ ಐಪಿಎಲ್ ಅಂಕಿ ಅಂಶಗಳನ್ನು ಗಮನಿಸಿದರೆ ಈ ಮೊತ್ತ ಖಡಾಖಂಡಿತವಾಗಿ ಹೆಚ್ಚಾಯಿತು ಎಂದೆನಿಸದೇ ಇರಲಾರದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಹರಾಜಿನಲ್ಲಿ ಕರಣ್ ಶರ್ಮಾ ಅವರನ್ನು ಅಂತಿಮ ಹಂತದ ಖರೀದಿಸಿತು. ಆದರೆ ಕಳೆದ 4 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ ಆಡುತ್ತಿರುವ ಈ ಆಟಗಾರ ಕೇವಲ 10 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇನ್ನು ಒಟ್ಟಾರೆಯಾಗಿ 69 ಪಂದ್ಯಗಳನ್ನಾಡಿರುವ ಈ ಲೆಗ್ ಸ್ಪಿನ್ನರ್ 59 ವಿಕೆಟ್‍ಗಳನ್ನು ಪಡೆದಿದ್ದು, ತಂಡಕ್ಕೆ ಆಸರೆಯಾಗುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿರುವುದು ತೀರಾ ಕಡಿಮೆ.

ಬಾಲ್ ಒದ್ದು Bhubaneswar ಮೇಲೆ Rohit Sharma ಕೋಪ ತೋರಿಸಿದ ವಿಡಿಯೋ ವೈರಲ್ | Oneindia Kannada
ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಈ ಬಾರಿಯ ಮೆಗಾ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿಕೋಲಸ್ ಪೂರನ್ ಮೇಲೆ 10.75 ಕೋಟಿ ಹೂಡಿಕೆ ಮಾಡಿ ಸಾಕಷ್ಟು ದೊಡ್ಡ ಮಟ್ಟದ ಟ್ರೋಲ್ ಎದುರಿಸಿತ್ತು. ಸಾಲು ಸಾಲು ಪಂದ್ಯಗಳಲ್ಲಿ ಶೂನ್ಯ ಸುತ್ತುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದ ನಿಕೋಲಸ್ ಪೂರನ್ ಮೇಲೆ ಇಷ್ಟು ಮೊತ್ತವನ್ನು ಹಾಕಿರುವ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ನಿಜಕ್ಕೂ ಬುದ್ಧಿಯಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಈ ಹರಾಜು ಪ್ರಕ್ರಿಯೆ ಮುಗಿದ ನಂತರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ನಿಕೊಲಸ್ ಪೂರನ್ 41 ಎಸೆತಗಳಿಗೆ 62 ರನ್ ಬಾರಿಸಿದ್ದು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಈ ಆಯ್ಕೆಗೆ ತುಸು ನೆಮ್ಮದಿಯನ್ನು ತಂದಂತಾಗಿದೆ.

Story first published: Saturday, February 19, 2022, 16:08 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X