ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023 : 2.40 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ ಮನೀಶ್ ಪಾಂಡೆ

IPL Auction 2023 : Manish Pandey Sold To Delhi Capitals at Rs. 2.40 Crore

ಐಪಿಎಲ್ ಮಿನಿ ಹರಾಜಿನಲ್ಲಿ ಕನ್ನಡಿಗ ಮನೀಶ್ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 2.40 ಕೋಟಿ ರುಪಾಯಿ ನೀಡಿ ಮನೀಶ್ ಪಾಂಡೆಯವರನ್ನು ಖರೀದಿ ಮಾಡಿದೆ.

ಕನ್ನಡಿಗ ಮನೀಶ್ ಪಾಂಡೆಯವರನ್ನು ಖರೀದಿ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಭಾರಿ ಪೈಪೋಟಿ ನಡೆಯಿತು. ಆದರೆ, ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 2.40 ಕೋಟಿ ರುಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.

ಕಳೆದ ಸೀಸನ್‌ನಲ್ಲಿ ಮನೀಶ್ ಪಾಂಡೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡಿದ್ದರು. 2022ರ ಮೆಗಾ ಹರಾಜಿನಲ್ಲಿ ಅವರನ್ನು 4.6 ಕೋಟಿಗೆ ಖರೀದಿ ಮಾಡಿತ್ತು. ಆದರೆ, ಕಳೆದ ಸೀಸನ್‌ನಲ್ಲಿ ಮನೀಶ್ ಪಾಂಡೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು.

IPL Auction 2023 : ಜಮ್ಮು ಆಟಗಾರನಿಗೆ ಒಲಿದ ಅದೃಷ್ಟ! 2.60 ಕೋಟಿ ರುಪಾಯಿ ಪಡೆದ ವಿವ್ರಾಂತ್ ಶರ್ಮಾIPL Auction 2023 : ಜಮ್ಮು ಆಟಗಾರನಿಗೆ ಒಲಿದ ಅದೃಷ್ಟ! 2.60 ಕೋಟಿ ರುಪಾಯಿ ಪಡೆದ ವಿವ್ರಾಂತ್ ಶರ್ಮಾ

ಮಧ್ಯಮ ಕ್ರಮಾಂಕದ ಬ್ಯಾಟರ್ ಗಾಗಿ ಆರ್ ಸಿಬಿ ತಂಡ ಪೈಪೋಟಿ ನಡೆಸಿದರು, ಪರ್ಸ್‌ನಲ್ಲಿ ಕಡಿಮೆ ಹಣ ಇದ್ದ ಕಾರಣ ಹೆಚ್ಚಿನ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.

IPL Auction 2023 : Manish Pandey Sold To Delhi Capitals at Rs. 2.40 Crore

ಐಪಿಎಲ್‌ನಲ್ಲಿ ಮನೀಶ್ ಪಾಂಡೆ

ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಬಹಳ ಅನುಭವಿ ಆಟಗಾರ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2014ರಲ್ಲಿ ಕಪ್‌ ಗೆದ್ದಾಗ ಪ್ರಮುಖ ಪಾತ್ರ ವಹಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 50 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಗೆಲುವಿಗೆ ಮುಖ್ಯ ಕಾರಣವಾಗಿದ್ದರು.

ಐಪಿಎಲ್‌ನಲ್ಲಿ ಅವರು ಇದುವರೆಗೂ 160 ಪಂದ್ಯಗಳನ್ನಾಡಿದ್ದಾರೆ. 149 ಇನ್ನಿಂಗ್ಸ್‌ಗಳಲ್ಲಿ 3648 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 21 ಅರ್ಧಶತಕಗಳು ಸೇರಿವೆ. 2021ರ ಆವೃತ್ತಿಯಲ್ಲಿ ಮನೀಶ್ ಪಾಂಡೆ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಆಡುವ ಮನೀಶ್ ಪಾಂಡೆ ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ, ಒಮ್ಮೆ ಆಟಕ್ಕೆ ಹೊಂದಿಕೊಂಡ ನಂತರ ಬೌಂಡರಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ.

Story first published: Friday, December 23, 2022, 18:17 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X