ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೇ 12ರಂದು ಹೈದರಾಬಾದ್‌ನಲ್ಲಿ 2019ರ ಐಪಿಎಲ್‌ ಫೈನಲ್‌

ಐಪಿಎಲ್ ಫೈನಲ್ ಆಟದಲ್ಲಿ ಬದಲಾವಣೆ: IPL Cricket 2019
IPL final in Hyderabad on May 12

ಮಹಿಳಾ ಐಪಿಎಲ್‌ ಪಂದ್ಯಗಳು ಜೈಪುರದಲ್ಲಿ ನಡೆಯಲಿವೆ

ಹೊಸದಿಲ್ಲಿ, ಏಪ್ರಿಲ್‌ 22: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ 12ನೇ ಆವೃತ್ತಿ ಫೈನಲ್‌ ಪಂದ್ಯ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಮೇ 12 ರಂದು ನಡೆಯಲಿದ್ದು, ಕ್ವಾಲಿಫೈರ್‌ 1 ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಗೂ ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ 2 ಪಂದ್ಯಗಳು ವೈಜಾಗ್‌ನಲ್ಲಿ ನಡೆಯಲಿವೆ.

ಸಾಮಾನ್ಯವಾಗಿ ಐಪಿಎಲ್‌ ಚಾಂಪಿಯನ್ಸ್‌ ಅಥವಾ ರನ್ನರ್ಸ್‌ಅಪ್‌ ತಂಡಗಳಿಗೆ ಫೈನಲ್‌ ಪಂದ್ಯದ ಆತಿಥ್ಯ ನೀಡಲಾಗುತ್ತದೆ. ಆದರೆ, ಚೆಪಾಕ್‌ನ ಕ್ರೀಡಾಂಗಣದಲ್ಲಿ ಐ, ಜೆ ಮತ್ತು ಕೆ ಸ್ಟ್ಯಾಂಡ್‌ಗಳನ್ನು ತೆರೆಯಲು ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಅನುಮತಿಸದ ಕಾರಣ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಫೈನಲ್‌ ಪಂದ್ಯದ ಆತಿಥ್ಯ ನೀಡಲಾಗಿದೆ. ಆದರೂ, ಮೊದಲ ಕ್ವಾಲಿಫೈರ್‌ ಪಂದ್ಯ ಮೇ 7ರಂದು ಚೆನ್ನೈನಲ್ಲಿ ನಡೆಯಲಿದೆ.

ಇನ್ನು ಹೈದರಾಬಾದ್‌ನಲ್ಲಿ ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ 2 ಪಂದ್ಯಗಳು ನಡೆಯುವ ಸಾಧ್ಯತೆ ಇತ್ತು. ಇದೀಗ ಬದಲಾವಣೆ ಆಗಿರುವ ಕಾರಣ ಎಲಿಮಿನೇಟರ್‌ ಪಂದ್ಯಗಳು ವೈಜಾಗ್‌ಗೆ ವರ್ಗಾವಣೆಯಾಗಿದೆ. ಮೇ 8ರಂದು ಎಲಿಮಿನೇಟರ್‌ ಮತ್ತು ಮೇ 10ರಂದು ಕ್ವಾಲಿಫೈಯರ್‌ 2 ಪಂದ್ಯಗಳು ನಡೆಯಲಿದೆ.

ಮಹಿಳಾ ಐಪಿಎಲ್‌ ಟಿ20 ಪಂದ್ಯ

ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳಾ ಟಿ20 ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಪ್ರದರ್ಶನ ಸಲುವಾಗಿ ನಡೆಸಲಾಗುತ್ತಿರುವ ಈ ಪಂದ್ಯಗಳಲ್ಲಿಸೂಪರ್‌ನೋವಾಸ್‌, ಟ್ರೇಲ್‌ಬ್ಲೇಜರ್ಸ್‌ ಮತ್ತು ವೆಲಾಸಿಟಿ ತಂಡಗಳು ಪೈಪೋಟಿ ನಡೆಸಲಿವೆ. ಎಲ್ಲಾ ಪಂದ್ಯಗಳಿಗೆ ಜೈಪುರ ಆತಿಥ್ಯ ವಹಿಸಲಿದೆ.

Story first published: Monday, April 22, 2019, 18:18 [IST]
Other articles published on Apr 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X