RCB ಗೆಲ್ಲಬೇಕಾದ್ರೆ ಡೆತ್ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್

ಐಪಿಎಲ್ 13ನೇ ಆವೃತ್ತಿಯಲ್ಲಾದ್ರೂ ಕಪ್ ಗೆಲ್ಲಬೇಕು ಎಂದು ದುಬೈನಲ್ಲಿ ತೊಡೆತಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮತ್ತದೆ ಹಳೆಯ ಡೆತ್ ಓವರ್ ಬೌಲಿಂಗ್ ಸಮಸ್ಯೆ ಕಾಡ್ತಿದೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಬೌಲರ್ ಇರ್ಫಾನ್ ಪಠಾಣ್ ಆರ್‌ಸಿಬಿ ಡೆತ್ ಓವರ್ಸ್‌ಗೆ ಸಲಹೆಯೊಂದನ್ನು ನೀಡಿದ್ದಾರೆ.
ಆರ್‌ಸಿಬಿ ತಂಡದಲ್ಲಿರುವ ಆಲ್‌ರೌಂಡರ್ ಶಿವಂ ದುಬೆಗೆ ಯಾವುದೇ ಕಾರಣಕ್ಕೂ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡಿಸಬಾರದುರು ಎಂದು ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ ಜಯ ದಾಖಲಿಸಿದರೂ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 97 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಶಿವಂ ದುಬೇ 20ನೇ ಓವರ್ ಬೌಲಿಂಗ್ ಮಾಡಿ ಮೂರು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು.
ಹೀಗಾಗಿ ಆರ್‌ಸಿಬಿ ಪರ ಡೆತ್ ಓವರ್‌ನಲ್ಲಿ ಸ್ಟ್ರೈಕ್ ಬೌಲರ್ ನವದೀಪ್ ಸೈನಿ ಕನಿಷ್ಠ 2 ಓವರ್‌ಗಳನ್ನು ಬೌಲ್ ಮಾಡಬೇಕು ಎಂದಿದ್ದಾರೆ. "ಡೆತ್ ಓವರ್ ಬೌಲಿಂಗ್‌ನಲ್ಲಿ ಯಾರ್ಕರ್ ಎಸೆತಗಳನ್ನು ಯಶಸ್ವಿಯಾಗಿ ತರಲು ನವದೀಪ್ ಸೈನಿಯೇ ಉತ್ತಮ ಆಯ್ಕೆ. ಬ್ಯಾಟ್ಸ್‌ಮನ್‌ಗಳಿಗೆ ಅಚ್ಚರಿ ನೀಡಬಲ್ಲ ಬೌಲರ್ ಅವರು ಅದ್ಭುತ ಬೌನ್ಸರ್ ಕೂಡ ಹೊಂದಿದ್ದಾರೆ. ಹೀಗಾಗಿ ಇನಿಂಗ್ಸ್ ಅಂತ್ಯದಲ್ಲಿ ಕನಿಷ್ಠ 2 ಓವರ್‌ಗಳನ್ನಾದರೂ ಅವರು ಬೌಲ್ ಮಾಡಬೇಕು," ಎಂದಿದ್ದಾರೆ.
"ಈ ಬಾರಿ ಚಾಲೆಂಜರ್ಸ್ ಉತ್ತಮ ತಂಡವನ್ನು ಹೊಂದಿದೆ. ಉಳಿದೆಲ್ಲಾ ತಂಡಗಳಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ರನ್ ಗಳಿಸಲು ವಿರಾಟ್ ಕೊಹ್ಲಿ ಮತ್ತು ಎಬಿ ಡಿ'ವಿಲಿಯರ್ಸ್ ಮೇಲೆ ಅವಲಂಬಿತವಾಗಿಲ್ಲ. ಆರೊನ್ ಫಿಂಚ್ ಇದ್ದಾರೆ, ದೇವದತ್ ಪಡಿಕ್ಕಲ್ ಅವರ ಉದಯವಾಗಿದೆ," ಎಂದು ಇರ್ಫಾನ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications