ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಪಂತ್‌ಗೆ ಈತ ಹೆಚ್ಚು ಸೂಕ್ತ ಬದಲಿ ಆಟಗಾರ; ಸಬಾ ಕರೀಮ್

ಭಾರತ ಟೆಸ್ಟ್ ತಂಡದ ಕಾಯಂ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ರಿಷಭ್ ಪಂತ್ ಚೇತರಿಸಿಕೊಳ್ಳದಿದ್ದಲ್ಲಿ ಆತನ ಬದಲಿಗೆ ಇಶಾನ್ ಕಿಶನ್ ಅವರನ್ನು ಭಾರತ ಆಯ್ಕೆ ಮಾಡಬೇಕು ಎಂದು ಮಾಜಿ ಆಯ್ಕೆಗಾರ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಫೆಬ್ರವರಿ 9ರಿಂದ ಮಾರ್ಚ್ 13ರವರೆಗೆ ತವರಿನಲ್ಲಿ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆತಿಥೇಯ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಈ ಪಂದ್ಯಗಳು ಬಹಳ ಮಹತ್ವದ್ದಾಗಿರುತ್ತವೆ.

IND vs SL: ಮೊದಲು ವಿಶ್ರಾಂತಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ; ಕೊಹ್ಲಿ, ರೋಹಿತ್‌ಗೆ ಗಂಭೀರ್ ಸಲಹೆIND vs SL: ಮೊದಲು ವಿಶ್ರಾಂತಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ; ಕೊಹ್ಲಿ, ರೋಹಿತ್‌ಗೆ ಗಂಭೀರ್ ಸಲಹೆ

ರಿಷಭ್ ಪಂತ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮತ್ತು ನಂತರದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡುವುದು ಬಹುತೇಕ ವಿರಳವೆನಿಸಿದೆ.

ರಿಷಭ್ ಪಂತ್ ಅವರ ಬ್ಯಾಕ್‌ಅಪ್ ಆಗಿ ಕೆಎಸ್ ಭರತ್ ಇತ್ತೀಚೆಗೆ ಭಾರತೀಯ ಟೆಸ್ಟ್ ತಂಡದಲ್ಲಿದ್ದರೆ, ರಿಷಭ್ ಪಂತ್ ಅಲಭ್ಯತೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆಮಾಡಲು ಭಾರತ ತಂಡ ನೋಡಬೇಕೆಂದು ಕರೀಮ್ ಸಲಹೆ ನೀಡಿದರು.ಇಶಾನ್ ಕಿಶನ್ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಋತುವಿನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೇರಳ ವಿರುದ್ಧದ ಪಂದ್ಯದಲ್ಲಿ ಅವರು ಅದ್ಭುತ 132 ರನ್ ಗಳಿಸಿದರು. ಒಟ್ಟಾರೆಯಾಗಿ 24 ವರ್ಷ ವಯಸ್ಸಿನವರು 48 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 38.76ರ ಸರಾಸರಿಯಲ್ಲಿ 2985 ರನ್ ಗಳಿಸಿದ್ದಾರೆ.

ಭರತ್, ಕಿಶನ್, ಸ್ಯಾಮ್ಸನ್ ಉತ್ತಮ ಅಯ್ಕೆಗಳಿವೆ; ರಾಜ್‌ಕುಮಾರ್ ಶರ್ಮಾ

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಚರ್ಚೆಯಲ್ಲಿ ಸಬಾ ಕರೀಮ್ ಅಭಿಪ್ರಾಯಗಳೊಂದಿಗೆ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರು ರಿಷಭ್ ಪಂತ್ ಬದಲಿಗೆ ಕೆಎಸ್ ಭರತ್ ಅವರನ್ನು ಮೊದಲ ಆಯ್ಕೆಯಾಗಿ ಆಯ್ಕೆ ಮಾಡಿದರು. ಇದೇ ವೇಳೆ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಕೂಡ ಚಾಲ್ತಿಯಲ್ಲಿದ್ದಾರೆ ಎಂದು ರಾಜ್‌ಕುಮಾರ್ ಶರ್ಮಾ ತಿಳಿಸಿದರು.

ರಿಷಭ್ ಪಂತ್ ಭಾರತದ ಟೆಸ್ಟ್ ಸರಣಿಗಳಲ್ಲಿ ಅದೃಷ್ಟದ ಪಾತ್ರ ವಹಿಸಿದ್ದಾರೆ. 25 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್ 33 ಪಂದ್ಯಗಳಲ್ಲಿ ಐದು ಶತಕಗಳು ಮತ್ತು 11 ಅರ್ಧಶತಕಗಳೊಂದಿಗೆ 43.67 ಸರಾಸರಿಯಲ್ಲಿ 2271 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, January 1, 2023, 2:25 [IST]
Other articles published on Jan 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X