ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬುಮ್ರಾ ದೇಶದ ಆಸ್ತಿ, ನೋಡಿಕೊಂಡು ಆಡಿಸಿ ಎಂದ ಆಕಾಶ್ ಚೋಪ್ರಾ

Jasprit Bumrah

ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಏಸ್ ಬೌಲರ್ ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ಶ್ರೀಲಂಕಾ ಅಕ್ಷರಶಃ ದಿಕ್ಕೆ ತೋಚದಂತೆ ವಿಕೆಟ್ ಒಪ್ಪಿಸಿತು. ಸ್ಪಿನರ್‌ಗಳಿಗೆ ಸ್ವರ್ಗದಂತೆ ಭಾಸವಾಗಿದ್ದ ಪಿಚ್‌ನಲ್ಲಿ ಜಸ್ಪ್ರೀತ್ ಬುಮ್ರಾ ಐದು ವಿಕೆಟ್‌ಗಳ ಗೊಂಚಲು ಸೇರಿದಂತೆ 8 ವಿಕೆಟ್‌ಗಳನ್ನ ಪಡೆಯುವಲ್ಲಿ ಯಶಸ್ವಿಯಾದ್ರು.

ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 24 ರನ್‌ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡವು 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ದಿಮುತ್ ಕರುಣರತ್ನೆ ಶತಕ ಸಿಡಿಸಿದರೂ ಸಹ ಪಂದ್ಯವನ್ನ 238ರನ್‌ಗಳಿಂದ ಸೋಲನ್ನಪ್ಪಿತು.

ಲಂಕಾ ಪಡೆಯನ್ನ ಧೂಳೀಪಟ ಮಾಡಿದ ಜಸ್ಪ್ರೀತ್ ಬುಮ್ರಾ

ಲಂಕಾ ಪಡೆಯನ್ನ ಧೂಳೀಪಟ ಮಾಡಿದ ಜಸ್ಪ್ರೀತ್ ಬುಮ್ರಾ

ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಕಾರ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯಲ್ಲಿ ಬಹುತೇಕ ಎಸೆತಗಳನ್ನ ಆಡಲು ಸಾಧ್ಯವಾಗದ ಮಟ್ಟಿಗೆ ಕಂಡಿದ್ದವು. ಅದ್ರಲ್ಲೂ ಲೈಟ್ಸ್‌ ಅಡಿಯಲ್ಲಿ ಬುಮ್ರಾ ಸ್ವಿಂಗ್ ಮಾಡುತ್ತಿದ್ದ ರೀತಿಯು ಲಂಕನ್ನರ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

''ಜಸ್ಪ್ರೀತ್ ಬುಮ್ರಾ ಸ್ವದೇಶದಲ್ಲಿ ಕೆಲವೇ ಕೆಲವು ಪಂದ್ಯಗಳನ್ನ ಆಡಿದ್ದಾರೆ. ಆದ್ರೆ ಅವರು ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನ ಆಡಿದ ಆತ ವಿಭಿನ್ನವಾಗಿ ಬೌಲ್ ಮಾಡಬಲ್ಲ. ಏನು ಬೇರೆಯವರಿಂದ ಆಗಲ್ಲ ಎಂಬ ವಿಷಯಗಳನ್ನೇ ಆತ ಮಾಡುತ್ತಾನೆ. ಆಟವನ್ನೇ ಬದಲಾಯಿಸಬಲ್ಲ ಆತ ಶೋಸ್ಟಾಪರ್ ಆಗಿದ್ದಾನೆ'' ಎಂದು ಬುಮ್ರಾ ಕುರಿತು ಚೋಪ್ರಾ ಹೇಳಿದರು.

ರಿಷಭ್ ಪಂತ್ ಬಯಸಿದ ರೀತಿಯಲ್ಲಿ ಬ್ಯಾಟಿಂಗ್‌ಗೆ ಅವಕಾಶ ನೀಡುತ್ತೇವೆ: ರೋಹಿತ್ ಶರ್ಮಾ

140 ಕಿ.ಮೀ ವೇಗದಲ್ಲಿ ಇನ್‌ಸ್ವಿಂಗ್, ಔಟ್‌ ಸ್ವಿಂಗ್, ಬೌನ್ಸರ್

140 ಕಿ.ಮೀ ವೇಗದಲ್ಲಿ ಇನ್‌ಸ್ವಿಂಗ್, ಔಟ್‌ ಸ್ವಿಂಗ್, ಬೌನ್ಸರ್

ಜಸ್ಪ್ರೀತ್ ಬುಮ್ರಾ ಕುರಿತು ಮತ್ತಷ್ಟು ಮಾತನಾಡಿರುವ ಆಕಾಶ್ ಚೋಪ್ರಾ, ಬುಮ್ರಾ ಅನೇಕ ಯುವ ಬೌಲರ್‌ಗಳಿಗೆ ಸ್ಪೂರ್ತಿಯಾಗಿದ್ದಾರೆ. ಅದ್ರಲ್ಲೂ ವೇಗಿಗಳಿಗೆ ಇನ್ನಷ್ಟು ಕಠಿಣ ಅಭ್ಯಾಸಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.

'' ಆತ 140 ಕಿ.ಮೀ ವೇಗದಲ್ಲಿ ಇನ್‌ಸ್ವಿಂಗ್, ಔಟ್‌ಸ್ವಿಂಗ್, ಬೌನ್ಸರ್ , ಯಾರ್ಕರ್, ಸ್ಲೋವರ್ ಒನ್‌ ಮೂಲಕ ಬೌಲಿಂಗ್ ಮಾಡಬಲ್ಲ ಕಂಪ್ಲೀಟ್ ಬೌಲರ್ ಆಗಿದ್ದಾನೆ'' ಎಂದು ಚೋಪ್ರಾ ಹೇಳಿದ್ದಾರೆ.

''ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳ ದೇಶ, ನಾವು ಬ್ಯಾಟ್ಸ್‌ಮನ್‌ಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತೇವೆ. ಆದ್ರೆ ಈತ ತನ್ನ ವೇಗದ ಮತ್ತು ಕೌಶಲ್ಯತೆಯ ಬೌಲಿಂಗ್ ಮೂಲಕ ಎಲ್ಲರನ್ನ ಆಕರ್ಷಿಸಿದ್ದಾನೆ. ಆತ ಎಲ್ಲರಿಗೆ ಸ್ಪೂರ್ತಿಯಾಗಿದ್ದಾನೆ'' ಎಂದು ಚೋಪ್ರಾ ನುಡಿದಿದ್ದಾರೆ.

ಜಸ್ಪ್ರೀತ್ ಬುಮ್ರಾ ದೇಶದ ಆಸ್ತಿ: ಆಕಾಶ್ ಚೋಪ್ರಾ

ಜಸ್ಪ್ರೀತ್ ಬುಮ್ರಾ ದೇಶದ ಆಸ್ತಿ: ಆಕಾಶ್ ಚೋಪ್ರಾ

ಆಕಾಶ್ ಚೋಪ್ರಾ ಅಭಿಪ್ರಾಯದಂತೆ ಜಸ್ಪ್ರೀತ್ ಬುಮ್ರಾ ಮೇಲಿನ ವರ್ಕ್‌ಲೋಡ್‌ ಕುರಿತು ಹೆಚ್ಚು ಗಮನಹರಿಸಬೇಕಿದೆ. ಏಕೆಂದರೆ ಬುಮ್ರಾ ದೇಶದ ಆಸ್ತಿಯಾಗಿದ್ದು, ದಕ್ಷಿಣ ಆಫ್ರಿಕಾ ನಂತರ ಇದೀಗ ಶ್ರೀಲಂಕಾ ವಿರುದ್ಧ ಒಂದರ ಹಿಂದೆ ಮತ್ತೊಂದು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದಾನೆ. ಆತನನ್ನ ತುಂಬಾ ಹುಷಾರಾಗಿ ಬಳಸಿಕೊಳ್ಳಬೇಕಿದೆ ಎಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಟೇಕರ್ ಆಗಿದ್ದು, 10 ವಿಕೆಟ್ ಉರುಳಿಸಿದ್ದಾರೆ.

ಬುಮ್ರಾ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ರೀಟೈನ್ ಆದ ನಾಲ್ವರು ಆಟಗಾರರಲ್ಲಿ ಒಬ್ಬರಾಗಿದ್ದು, ಮಾರ್ಚ್‌ 27ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಕಾದಾಟ ನಡೆಸಲಿದೆ.

Story first published: Tuesday, March 15, 2022, 15:23 [IST]
Other articles published on Mar 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X