ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ಹಣಕಾಸು, ವಾಣಿಜ್ಯ ವ್ಯವಹಾರ ಸಮಿತಿಯ ಮುಖ್ಯಸ್ಥರಾಗಿ ಜಯ್ ಶಾ ನೇಮಕ

Jay Shah Appointed As Chief Of ICCs Finance And Commercial Affairs Committee

ಕಳೆದ ಅಕ್ಟೋಬರ್‌ನಲ್ಲಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿ ಮರು ಆಯ್ಕೆಗೊಂಡ ಜಯ್ ಶಾ ಹೆಗಲಿಗೆ ಇದೀಗ ಮತ್ತೊಂದು ದೊಡ್ಡ ಹುದ್ದೆ ಒಲಿದುಬಂದಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಮುಖ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಲಿದ್ದಾರೆ. ಇಷ್ಟೇ ಅಲ್ಲದೇ ಅವರು ಏಷ್ಯಾ ಕ್ರಿಕೆಟ್ ಲೀಗ್ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಏಕಕಾಲದಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.

'ಸಚಿನ್ ಬುದ್ಧಿವಂತ, ಸೆಹ್ವಾಗ್ ಹುಚ್ಚ'; ಮಾಜಿ ಆರಂಭಿಕ ಜೋಡಿಗಳ ಬಗ್ಗೆ ಗಂಗೂಲಿ ಹೀಗಂದಿದ್ದೇಕೆ?'ಸಚಿನ್ ಬುದ್ಧಿವಂತ, ಸೆಹ್ವಾಗ್ ಹುಚ್ಚ'; ಮಾಜಿ ಆರಂಭಿಕ ಜೋಡಿಗಳ ಬಗ್ಗೆ ಗಂಗೂಲಿ ಹೀಗಂದಿದ್ದೇಕೆ?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯು ಐಸಿಸಿ ಟೂರ್ನಿಗಳಿಗೆ ಬಜೆಟ್ ಹಂಚಿಕೆ ಮಾಡುತ್ತದೆ ಮತ್ತು ಒಟ್ಟಾರೆ ಆದಾಯದ ವಿಭಾಗದಿಂದ ತನ್ನ ಸದಸ್ಯ ರಾಷ್ಟ್ರಗಳಿಗೆ ಹಣಕಾಸು ವಿತರಣೆಯ ಜವಾಬ್ದಾರಿ ನೋಡಿಕೊಳ್ಳುತ್ತದೆ.

ಸೌರವ್ ಗಂಗೂಲಿ ಸ್ಥಾನವನ್ನು ಪಡೆದುಕೊಂಡ ಜಯ್ ಶಾ

ಸೌರವ್ ಗಂಗೂಲಿ ಸ್ಥಾನವನ್ನು ಪಡೆದುಕೊಂಡ ಜಯ್ ಶಾ

ಮೆಲ್ಬೋರ್ನ್‌ನಲ್ಲಿ ಈ ವಾರಾಂತ್ಯದ ಐಸಿಸಿ ಬೋರ್ಡ್ ಸಭೆಗಳಿಗೆ ಒಂದು ವಾರಕ್ಕೂ ಮೊದಲು, ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ನೇತೃತ್ವದ ಬಿಸಿಸಿಐ ನಿಯೋಗವು ಆಸ್ಟ್ರೇಲಿಯಾಕ್ಕೆ ಆಗಮಿಸಿದೆ. ಐಸಿಸಿ ಬೋರ್ಡ್‌ನಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ 2019ರಿಂದ ಅಕ್ಟೋಬರ್‌ವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನವನ್ನು ಜಯ್ ಶಾ ಪಡೆದುಕೊಂಡಿದ್ದಾರೆ.

ಅರುಣ್ ಧುಮಾಲ್ ಅವರು ಮುಖ್ಯ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ಜಯ್ ಶಾ ಅವರ ನೇತೃತ್ವದ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸದಸ್ಯರೂ ಆಗಿದ್ದಾರೆ.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಉಲ್ಲೇಖಿಸಿರುವ ಪ್ರಕಾರ, ಮಾರ್ಚ್ 2023ರಲ್ಲಿ ಅದರ ಮುಂದಿನ ಸಭೆಯಲ್ಲಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಶೀಘ್ರದಲ್ಲೇ ನಿವೃತ್ತರಾಗಲಿರುವ ಕ್ರಿಕೆಟ್ ಐರ್ಲೆಂಡ್‌ನ ಮಾಜಿ ಅಧ್ಯಕ್ಷ ರಾಸ್ ಮೆಕೊಲಮ್ ಅವರ ಉತ್ತರಾಧಿಕಾರಿಯಾಗಲು ಜಯ್ ಶಾ ಸಿದ್ಧರಾಗಿದ್ದಾರೆ.

 ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವಿರೋಧ ಆಯ್ಕೆ

ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವಿರೋಧ ಆಯ್ಕೆ

ಐಸಿಸಿ ಮಂಡಳಿಯು ಶನಿವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಳಿತ ಮಂಡಳಿಯು ಘೋಷಿಸಿದಂತೆ ಎರಡು ವರ್ಷಗಳ ಅವಧಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವರನ್ನು ಅವಿರೋಧವಾಗಿ ಮರು ಆಯ್ಕೆ ಮಾಡಿದೆ.

ತಾವೆಂಗ್ವಾ ಮುಕುಹ್ಲಾನಿ ಅವರು ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ ಗ್ರೆಗ್ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾದರು. ಐಸಿಸಿ ಮಂಡಳಿಯು ಇನ್ನೂ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಸಲು ತನ್ನ ಸಂಪೂರ್ಣ ಬೆಂಬಲವನ್ನು ನೀಡಿತು.

ಬಿಸಿಸಿಐನ 91ನೇ ವಾರ್ಷಿಕ ಸಾಮಾನ್ಯ ಸಭೆಯ ನಂತರ, ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಸೌರವ್ ಗಂಗೂಲಿ ಬದಲಿಯಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ 36ನೇ ಅಧ್ಯಕ್ಷರಾಗಿ ಅಕ್ಟೋಬರ್‌ನಲ್ಲಿ ಆಯ್ಕೆಯಾದರು.

ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಬಾರಿ ಆಯ್ಕೆ

ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಬಾರಿ ಆಯ್ಕೆ

ಪ್ರಮುಖ ವಿಷಯವೆಂದರೆ, ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು. ಮೂರು ವರ್ಷಗಳ ನಂತರ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರವಧಿಯನ್ನು ಕೊನೆಗೊಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರನೂ ಆಗಿರುವ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಬಾರಿ ಆಯ್ಕೆಯಾದರು. ಆಶಿಶ್ ಶೆಲಾರ್ ಅವರನ್ನು ಬಿಸಿಸಿಐ ಖಜಾಂಚಿಯಾಗಿ ನೇಮಿಸಲಾಗಿದೆ. ರಾಜೀವ್ ಶುಕ್ಲಾರನ್ನು ಬಿಸಿಸಿಐ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ದೇವಜಿತ್ ಸೈಕಿಯಾ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರ್ ಅರುಣ್ ಧುಮಾಲ್ ಅವರನ್ನು ಐಪಿಎಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Story first published: Saturday, November 12, 2022, 16:30 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X