ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪಿಲ್ ಡೇವಿಲ್ಸ್ ವಿಶ್ವಕಪ್ ಎತ್ತಿಹಿಡಿದ ಆಹಾ! ಎಂಥಾ ಆ ಕ್ಷಣ!

By Mahesh

1983 ಜೂನ್ 25 ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣೀಯ ದಿನ. ಕ್ರಿಕೆಟ್ ಜಗತ್ತಿನ ದೈತ್ಯ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಪಡೆಯನ್ನು ಕಪಿಲ್ ಡೆವಿಲ್ಸ್ ತಂಡವು ಮಣಿಸಿ, ಇಡೀ ಕ್ರಿಕೆಟ್ ಅಭಿಮಾನಿಗಳು, ಭಾರತದತ್ತ ನೋಡುವಂತೆ ಮಾಡಿದ ದಿನ. ಭಾರತ ತಂಡವು ಏಕದಿನ ಅಂತಾರಾಷ್ಟ್ರೀಯ ಜಗತ್ತಿನಲ್ಲಿ ವಿಜೃಂಭಿಸಿದ ಆ ಕ್ಷಣ ಮೆಲುಕು ಇಲ್ಲಿದೆ.

ದಿ ಪ್ರುಡೆನ್ಶಿಯಲ್ ವಿಶ್ವಕಪ್ ಎಂದು ಕರೆಯಲ್ಪಟ್ಟ 1983ರ ವಿಶ್ವಕಪ್ ನಲ್ಲಿ 60 ಓವರ್ ಗಳ ಏಕದಿನ ಪಂದ್ಯವಾಡಲಾಗಿತ್ತು. ಯಾರ ಪಾಲಿಗೆ ಆ ದಿನ 'ಸೂಪರ್ ಸಾಟರ್ಡೇ' ಯಾಗಲಿದೆ ಎಂಬುದು ಕುತೂಹಲಕಾರಿಯಾಗಿತ್ತು. ನಿರೀಕ್ಷೆಯಂತೆ, ವಿಂಡೀಸ್ ಹ್ಯಾಟ್ರಿಕ್ ಸಾಧಿಸಬಹುದು. ಕ್ರಿಕೆಟ್ ಜಗತ್ತಿನ ಮೆಕ್ಕಾ, ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದ ಪ್ರಸಿದ್ಧ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸಬಹುದು ಎಂದೆಣಿಸಲಾಗಿತ್ತು. ಆದರೆ, ಭಾರತ ಅಂದು ಕೆರಿಬಿಯನ್ನರನ್ನು ಮಣಿಸಿ ದೈತ್ಯ ಸಂಹಾರಿಯಾಗಿ ಕುಣಿದಾಡಿತು.

ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ಬಳಸಿದ ಬ್ಯಾಟ್ ಹೇಗಿದೆ? ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ಬಳಸಿದ ಬ್ಯಾಟ್ ಹೇಗಿದೆ?

ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ. ಲಾಯ್ಡ್ ಆಯ್ಕೆಯನ್ನು ಸಮರ್ಥಿಸಿಕೊಂಡ ವಿಂಡೀಸ್ ವೇಗಿಗಳು ಭಾರತ ತಂಡವನ್ನು 54.4 ಓವರ್ ಗಳಲ್ಲಿ 183 ರನ್ ಗಳಿಗೆ ನಿಯಂತ್ರಿಸಿಬಿಟ್ಟರು.

ವಿವಿಯನ್ ರಿಚರ್ಡ್ಸ್ ಕ್ಯಾಚ್

ವಿವಿಯನ್ ರಿಚರ್ಡ್ಸ್ ಕ್ಯಾಚ್

ಉತ್ತಮ ಬ್ಯಾಟ್ಸ್ ಮನ್ ಗಳನ್ನು ಹೊಂದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಗಾರ್ಡನ್ ಗ್ರೀನಿಡ್ಜ್ ಅವರು ಉತ್ತಮ ಆರಂಭ ನೀಡುವ ನಿರೀಕ್ಷೆಯಿತ್ತು. ಆದರೆ, ಬಲ್ವಿಂದರ್ ಸಂದು ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ಸೇರಿದ ಗ್ರೀಜಿಡ್ಜ್ ಗಳಿಸಿದ್ದು 1 ರನ್ ಮಾತ್ರ. ಡೆಸ್ಮಂಡ್ ಹೇಯ್ಸ್ 13ರನ್ ಗಳಿಸಿ ಔಟಾದರು.

ಸ್ಟಾರ್ ಆಟಗಾರ ಮಾಸ್ಟರ್ ಬ್ಲಾಸ್ಟರ್ ವಿವಿಯನ್ ರಿಚರ್ಡ್ಸ್ ಅವರು ಬಿರುಸಿನ ಆಟವಾಡಿ 28 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಮದನ್ ಲಾಲ್ ಅವರ ಎಸೆತದಲ್ಲಿ ಬಾರಿಸಿದ ಹೊಡೆತ ಕ್ಯಾಚಾಗಿ ಪರಿವರ್ತಿಸಿದ ಕಪಿಲ್ ಅವರು ವಿಶ್ವಕಪ್ ಗೆಲುವಿಗೆ ಕಾರಣರಾದರು.

ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ

ಭಾರತ ಇನ್ನಿಂಗ್ಸ್

ಭಾರತ ಇನ್ನಿಂಗ್ಸ್

ಸುನಿಲ್ ಗವಾಸ್ಕರ್ ಕೇವಲ 2 ರನ್ ಗಳಿಸಿ ಆಂಡಿ ರಾಬರ್ಟ್ಸ್ ಗೆ ಬಲಿಯಾದರು. ರಾಬರ್ಟ್ಸ್, ಜೋಲ್ ಗಾರ್ನರ್, ಮಾಲ್ಕಂ ಮಾರ್ಷಲ್ ಹಾಗೂ ಮೈಕಲ್ ಹೋಲ್ಡಿಂಗ್ ದಾಳಿಗೆ ಸಿಲುಕಿದ ಭಾರತದ ಬ್ಯಾಟ್ಸ್ ಮನ್ ಗಳು ಥರಗುಟ್ಟಿದರು. ಆರಂಭಿಕ ಆಟಗಾರ ಕ್ರಿಸ್ ಶ್ರೀಕಾಂತ್ ಅವರು 38ರನ್ ಗಳಿಸಿದ್ದೆ ಭಾರತದ ಇನ್ನಿಂಗ್ಸ್ ನ ವೈಯಕ್ತಿಕ ಗರಿಷ್ಟ ಮೊತ್ತವಾಗಿತ್ತು. ಕಪಿಲ್ 15ರನ್ ಗಳಿಸಿ, ಸಂದೀಪ್ ಪಾಟೀಲ್ 27ರನ್ ಗಳಿಸಿ, 54.4 ಓವರ್ ಗಳಲ್ಲಿ ಭಾರತ 183 ಆಲೌಟ್ ಆಯಿತು.

ಭಾರತವನ್ನು ನಿಯಂತ್ರಿಸಿದ್ದ ರಾಬರ್ಟ್ಸ್

ಭಾರತವನ್ನು ನಿಯಂತ್ರಿಸಿದ್ದ ರಾಬರ್ಟ್ಸ್

ಬಿರುಗಾಳಿ ವೇಗದ ರಾಬರ್ಟ್ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸಿ 10 ಓವರ್ ಗಳಲ್ಲಿ 32 ರನ್ನಿತ್ತು 3 ವಿಕೆಟ್ ಕಬಳಿಸಿ ಭಾರತದ ಬೆನ್ನೆಲುಬು ಮುರಿದಿದ್ದರು. ರಾಬರ್ಟ್ ಸ್ಪೆಲ್ ನಲ್ಲಿ ಮೂರು ಮೇಡನ್ ಓವರ್ ಗಳಿತ್ತು. ಗಾರ್ನರ್ ಒಂದು ವಿಕೆಟ್ ಗಳಿಸಿದ್ದರೆ, ಮಾರ್ಷಲ್ ಹಾಗೂ ಹೋಲ್ಡಿಂಗ್ ತಲಾ 2 ವಿಕೆಟ್ ಪಡೆದಿದ್ದರು.20 ಇತರೆ ರನ್ ಭಾರತಕ್ಕೆ ನೆರವಾಯಿತು. ಆಂಡಿ ರಾಬರ್ಟ್ಸ್ 3, ಮಾರ್ಷಲ್, ಗೋಮ್ಸ್, ಹೋಲ್ಡಿಂಗ್ 2 ಹಾಗೂ ಗಾರ್ನರ್ 1 ವಿಕೆಟ್ ಕಿತ್ತರು.

ಮೋಹಿಂದರ್ ಅಮರನಾಥ್

ಮೋಹಿಂದರ್ ಅಮರನಾಥ್

ಆಲ್ ರೌಂಡರ್ ಮೋಹಿಂದರ್ ಅಮರನಾಥ್ ಅವರ ಆಟದ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿತ್ತು. ಆದರೆ, ಮೋಹಿಂದರ್ ಅಮರನಾಥ್ ಅವರು 7 ಓವರ್ ನಲ್ಲಿ 12 ರನ್ನಿತ್ತು 3 ಮಹತ್ವದ ವಿಕೆಟ್ ಗಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಎನಿಸಿದರು. ಮದನ್ ಲಾಲ್ ಕೂಡಾ 3 ವಿಕೆಟ್ ಕಬಳಿಸಿ ವಿಂಡೀಸ್ ತಂಡಕ್ಕೆ ಆಘಾತ ನೀಡಿದರು. ಅಂತಿಮವಾಗಿ ಭಾರತಕ್ಕೆ ಶರಣಾದ ದೈತ್ಯ ವಿಂಡೀಸ್ ಪಡೆ 43 ರನ್ ಗಳಿಂದ ಪಂದ್ಯ ಹಾಗೂ ವಿಶ್ವಕಪ್ ಅನ್ನು ಕಳೆದುಕೊಂಡಿತು.

Story first published: Monday, June 25, 2018, 16:19 [IST]
Other articles published on Jun 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X