ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಕೇನ್ ವಿಲಿಯಮ್ಸ್‌ನ್

Posted By:
Kane williamson selected as captain of Sun raises Hyderabad

ಬೆಂಗಳೂರು, ಮಾರ್ಚ್ 29: ಡೇವಿಡ್ ವಾರ್ನರ್‌ ಅವರ ನಿಷೇಧದಿಂದಾಗಿ ತೆರವಾಗಿದ್ದ ಸನ್‌ರೈಸಸ್ ಹೈದರಾಬಾದ್ ತಂಡದ ನಾಯಕ ಸ್ಥಾನಕ್ಕೆ ಕೇನ್ ವಿಲಿಯಮ್ಸ್‌ನ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮುಂಚೆ ಹೈದರಾಬಾದ್ ತಂಡದ ನಾಯಕತ್ವ ವಹಿಸಿದ್ದ ಡೇವಿಡ್ ವಾರ್ನರ್ ಚೆಂಡು ವಿರೂಪ ಪ್ರಕರಣಕ್ಕೆ ಸಿಕ್ಕು ನಿಷೇಧಕ್ಕೆ ಒಳಗಾದ ಕಾರಣ ಸನ್‌ರೈಸರ್ಸ್ ಹೈದರಾಬಾದ್ ಆಡಳಿತ ಮಂಡಳಿ ಈ ನಿರ್ಣಯ ಕೈಗೊಂಡಿದೆ.

'ಐಪಿಎಲ್ 11 ರಲ್ಲಿ ಸನ್ ರೈಸಸ್ ಹೈದರಾಬಾದ್ ತಂಡವನ್ನು ಕೇನ್ ವಿಲಿಯಮ್‌ಸನ್ ಮುನ್ನಡೆಸಲಿದ್ದಾರೆ' ಎಂದು ಹೈದರಾಬಾದ್ ತಂಡದ ಸಿಇಒ ಕೆ.ಷಣ್ಮುಗನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡೇವಿಡ್ ವಾರ್ನರ್ ನಿಷೇಧದ ಬಳಿಕ ಹೈದರಾಬಾದ್ ತಂಡವನ್ನು ಶಿಖರ್ ಧವನ್ ಅವರು ಮುಂದುವರೆಸಲಿದ್ದಾರೆ ಎಂಬ ಊಹಾ ಪೋಹ ಹರಿದಾಡುತ್ತಿತ್ತು ಆದರೆ ನ್ಯೂಜಿಲೆಂಡ್ ತಂಡದ ನಾಯಕ ಸ್ಥಾನವನ್ನು ನಿಭಾಯಿಸಿ ಎರಡು ವರ್ಷಕ್ಕೂ ಹೆಚ್ಚು ನಾಯಕತ್ವದ ಅನುಭವ ಇರುವ ಕೇನ್ ವಿಲಿಯಮ್‌ಸನ್ ಅವರನ್ನು ಸನ್ ರೈಸಸ್ ಹೈದಬಾರಾದ್ ತಂಡದ ಆಡಳಿತ ಮಂಡಳಿ ಆಯ್ಕೆ ಮಾಡಿದೆ.

2005ರಿಂದಲೂ ಸನ್‌ರೈಸಸ್ ತಂಡದ ಪರ ಆಡಿದ ಅನುಭವ ಇರುವ ಕೇನ್ ವಿಲಿಯಮ್‌ಸನ್ ಅವರು ಜವಾಬ್ದಾರಿಯುತವಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರಿಗೊಂದು ರೋಮಾಂಚಕ ಅನುಭವ ಆಗಲಿದೆ ಎಂದು ಆಯ್ಕೆ ಮಂಡಳಿ ಸಿಇಓ ಹೇಳಿದ್ದಾರೆ.

ಐಪಿಎಲ್ 11 ಏಪ್ರಿಲ್ 7ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಮುಂಬೈ-ಚೆನ್ನೈ ವಿರುದ್ಧ ನಡೆಯಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 29, 2018, 15:29 [IST]
Other articles published on Mar 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ