ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!

Kannada Chalanachitra Cup 2023: Team Names, Captains, Players List; Chris Gayle Part Of Sudeep Team

2023ರ ಮೂರನೇ ಆವೃತ್ತಿಯ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಟಿ10 ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಟೂರ್ನಿ ಆಯೋಜಕರಲ್ಲಿ ಒಬ್ಬರಾದ ಚಿತ್ರನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಕೆಸಿಸಿ ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ 11 ಮತ್ತು 12ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ, ದಿನಾಂಕ ಮತ್ತು ಸ್ಥಳ ಎರಡೂ ಬದಲಾವಣೆಯಾಗಿದೆ.

ಕನ್ನಡ ಚಲನಚಿತ್ರ ಕಪ್ 2023: ದಿನಾಂಕ, ಸ್ಥಳ ಬದಲಾವಣೆ; ಕ್ರಿಸ್ ಗೇಲ್, ಲಾರಾ, ರೈನಾ, ಗಿಬ್ಸ್ ಭಾಗಿಕನ್ನಡ ಚಲನಚಿತ್ರ ಕಪ್ 2023: ದಿನಾಂಕ, ಸ್ಥಳ ಬದಲಾವಣೆ; ಕ್ರಿಸ್ ಗೇಲ್, ಲಾರಾ, ರೈನಾ, ಗಿಬ್ಸ್ ಭಾಗಿ

ಕೆಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದು, ಇವರು ಕೆಸಿಸಿ ಪಂದ್ಯಾವಳಿಗೆ ಇನ್ನಷ್ಟು ಮೆರಗು ನೀಡಲಿದ್ದಾರೆ.

ಗುರುವಾರ, ಜನವರಿ 26ರ ಸಂಜೆ ಕೆಸಿಸಿ ಪಂದ್ಯಾವಳಿಗಾಗಿ ನಡೆದ ಆಟಗಾರರ ವಿಸ್ತೃತ ಹರಾಜು ಸಂದರ್ಭದಲ್ಲಿ, ತಂಡಗಳ ಮಾಲೀಕರು, ನಾಯಕರು ಮತ್ತು ಆಟಗಾರರನ್ನು ನಿರ್ಧರಿಸಲಾಯಿತು.

ಕೆಸಿಸಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು

ಕೆಸಿಸಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು

ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಗಂಗ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೇಟ್ರಿಯಾಟ್ಸ್, ಒಡೆಯರ್ ಚಾರ್ಜರ್ಸ್ ಮತ್ತು ಹೊಯ್ಸಳ ಈಗಲ್ಸ್ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಈ ಬಾರಿ ಕೆಸಿಸಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸುರೇಶ್ ರೈನಾ, ಸುಬ್ರಮಣ್ಯಂ ಬದರಿನಾಥ್, ಹರ್ಷಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಆಡುತ್ತಿದ್ದಾರೆ. ಗಿಬ್ಸ್ ಮತ್ತು ದಿಲ್ಶಾನ್ ಈ ಹಿಂದೆಯೂ ಟೂರ್ನಿಯಲ್ಲಿ ಆಡಿದ್ದರು ಎಂಬುದು ವಿಶೇಷ.

ಹೊಯ್ಸಳ ಈಗಲ್ಸ್ ತಂಡ

ಹೊಯ್ಸಳ ಈಗಲ್ಸ್ ತಂಡ

ಕ್ರಿಸ್ ಗೇಲ್, ಕಿಚ್ಚ ಸುದೀಪ್ (ನಾಯಕ), ಸಾಗರ್ ಗೌಡ, ಅನೂಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನೀಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅಭಿಷೇಕ್ ಬಾಡ್ಕರ್.

ಗಂಗಾ ವಾರಿಯರ್ಸ್ ತಂಡ

ಗಂಗಾ ವಾರಿಯರ್ಸ್ ತಂಡ

ಸುರೇಶ್ ರೈನಾ, ಡಾರ್ಲಿಂಗ್ ಕೃಷ್ಣ (ನಾಯಕ). ಧನಂಜಯ, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ನರೇಶ್ ಗಾಂಧಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಣ್, ಶಿವಕುಮಾರ್ ಬಿಯು.

ವಿಜಯನಗರ ಪೇಟ್ರಿಯಾಟ್ಸ್ ತಂಡ

ವಿಜಯನಗರ ಪೇಟ್ರಿಯಾಟ್ಸ್ ತಂಡ

ಹರ್ಷಲ್ ಗಿಬ್ಸ್, ಪ್ರದೀಪ್ (ನಾಯಕ), ಉಪೇಂದ್ರ, ತ್ರಿವಿಕ್ರಮ್, ಗರುಡ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಟ್ಠಲ್ ಕಾಮತ್, ಕಿರಣ್, ಸಚಿನ್, ಮಹೇಶ್, ಆದರ್ಶ್, ರಜತ್ ಹೆಗ್ಡೆ.

ಕದಂಬ ಲಯನ್ಸ್ ತಂಡ

ಕದಂಬ ಲಯನ್ಸ್ ತಂಡ

ತಿಲಕರತ್ನೆ ದಿಲ್ಶಾನ್, ಗಣೇಶ್ (ನಾಯಕ), ರೇಣುಕ್, ವ್ಯಾಸರಾಜ್, ಲೋಕಿ, ಪ್ರತಾಪ್ ವಿ, ಲೋಕಿ ಸಿಕೆ, ಯೋಗೇಶ್, ಪವನ್ ಒಡೆಯರ್, ಪ್ರೀತಂ ಗುಬ್ಬಿ, ರಕ್ಷಿತ್ ಎಸ್, ರಿಷಿ ಬೋಪಣ್ಣ, ರಾಜೀವ್ ಹನು.

ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ

ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ

ಸುಬ್ರಮಣ್ಯಂ ಬದ್ರಿನಾಥ್, ಜಯರಾಮ್ ಕಾರ್ತಿಕ್ (ನಾಯಕ), ಧ್ರುವ ಸರ್ಜಾ, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್.

ಒಡೆಯರ್ ಚಾರ್ಜರ್ಸ್ ತಂಡ

ಒಡೆಯರ್ ಚಾರ್ಜರ್ಸ್ ತಂಡ

ಬ್ರಿಯಾನ್ ಲಾರಾ, ಶಿವರಾಜಕುಮಾರ್(ನಾಯಕ), ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್ ಬಿ.ಎ, ರಾಹುಲ್ ಪ್ರಸನ್ನ, ಆರ್ಯನ್, ಥಮನ್ ಎಸ್.

Story first published: Friday, January 27, 2023, 18:45 [IST]
Other articles published on Jan 27, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X