ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್‌ಗಿದ್ದ ಪ್ರತಿಭೆಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು: ಕಪಿಲ್ ದೇವ್

Kapil Dev Says Sachin Tendulkar Should Have Done Even More In His Career

ವಿಶ್ವ ಕಂಡ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ದಾಖಲೆಗಳ ಮೇಲೆ ದಾಖಲೆ ಬರೆದ ಆಟಗಾರ ಸಚಿನ್. ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಯಲ್ಲೂ ಅದ್ಭುತವಾದದ್ದನ್ನು ಸಾಧಿಸಿದ್ದಾರೆ ಸಚಿನ್ ತೆಂಡೂಲ್ಕರ್. ಆದರೆ ಆತನ ಪ್ರತಿಭೆಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು ಎಂದಿದ್ದಾರೆ ಮಾಜಿ ನಾಯಕ ಕಪಿಲ್‌ದೇವ್.

ಖಾಸಗಿ ರೇಡಿಯೋ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್ ಈ ಮಾತನ್ನು ಹೇಳಿದ್ದಾರೆ. ಸಾಕಷ್ಟು ಜನರು ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಯಿದೆ. ನನ್ನ ಪ್ರಕಾರ ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಆದರೆ ನನಗೆ ಈಗಲೂ ಅನಿಸುತ್ತಿದೆ ಆತ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸಚಿನ್‌ಗೆ ಬೌಲಿಂಗ್‌ ಮಾಡುವಾಗ ವಾರ್ನ್ ಪಡುತ್ತಿದ್ದ ಕಷ್ಟ ವಿವರಿಸಿದ ಬ್ರೇಟ್ ಲೀಸಚಿನ್‌ಗೆ ಬೌಲಿಂಗ್‌ ಮಾಡುವಾಗ ವಾರ್ನ್ ಪಡುತ್ತಿದ್ದ ಕಷ್ಟ ವಿವರಿಸಿದ ಬ್ರೇಟ್ ಲೀ

ಈಗಾಗಲೇ ಸಚಿನ್ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ, ಆತನ ಮಟ್ಟಕ್ಕೇ ಯಾರೂ ತಲುಪಲು ಸಾಧ್ಯವಿಲ್ಲ, ಆದರೆ ಸಚಿನ್‌ಗೆ ಇದಕ್ಕಿಂತಲೂ ಹೆಚ್ಚಿನ ಪ್ರತಿಭೆಯಿತ್ತು ಎಂದು ಕಪಿಲ್ ದೇವ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ 24 ವರ್ಷ ದೇಶಕ್ಕಾಗಿ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಚಿನ್‌ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್.

ದೇಶಕ್ಕಾಗಿ 24 ವರ್ಷ ಕ್ರಿಕೆಟ್ ಆಡುವುದು ಹೇಳಲು ತುಂಬಾ ಸುಲಭ, ಆದರೆ ಅದನ್ನು ಸಾಧಿಸುವುದು ಸುಲಭವಲ್ಲ, ಎಲ್ಲಾ ಖುಷಿಯನ್ನು ಆತ ಭಾರತಕ್ಕೆ ನೀಡಿದ್ದಾರೆ, ಅದಕ್ಕಾಗಿ ಎಲ್ಲಾ ಸಂತೋಷವೂ ಆತನ ಪಾಲಿಗೆ ದೊರೆಯಲಿ ಎಂದು ಕಪಿಲ್ ದೇವ್ ಹಾರೈಸಿದ್ದಾರೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

ಅದೆಷ್ಟೋ ಯುವ ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್ ರೀತಿ ಕ್ರಿಕೆಟ್ ಆಡಬೇಕೆಂದು ಕನಸು ಕಂಡಿದ್ದಾರೆ, ಸಚಿನ್ ತೆಂಡೂಲ್ಕರ್ ರೀತಿ ಕ್ರಿಕೆಟರ್‌ಗಳು ತುಂಬಾ ಕಾಲ ಬಂದರೆ ಕ್ರೀಡೆ ಯಾವತ್ತಿಗೂ ಸಾಯಲಾರದು ಎಂದು ಕಪಿಲ್ ದೇವ್ ಸಚಿನ್ ತೆಂಡೂಲ್ಕರ್ ಅವರನ್ನು ಪ್ರಶಂಸಿಸಿದ್ದಾರೆ.

Story first published: Wednesday, April 29, 2020, 13:45 [IST]
Other articles published on Apr 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X