ಚಿರತೆಯಂತೆ ಜಿಗಿದ ಕೀಗನ್ ಪೀಟರ್ಸನ್: ಅದ್ಭುತ ಕ್ಯಾಚ್‌ಗೆ ಪೂಜಾರ ಔಟ್‌

ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೊದಲ ಸೆಷನ್ ನಿಜಕ್ಕೂ ಸಾಕಷ್ಟು ಏರಿಳಿತಕ್ಕೆ ಸಾಕ್ಷಿಯಾಗಿತ್ತು. ನಿನ್ನೆ ಎರಡನೇ ದಿನದಾಟದಂತ್ಯಕ್ಕೆ ಜೊತೆಯಾಗಿದ್ದ ಕೊಹ್ಲಿ ಪೂಜಾರ ಅಜೇಯರಾಗಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದರು. ಕೊಹ್ಲಿ ಅಜೇಯ 14, ಪೂಜಾರ ಅಜೇಯ 9ರನ್‌ಗಳಿಸಿದ್ದು ತಂಡದ ಮೊತ್ತವನ್ನ ಹೆಚ್ಚಿಸುವ ಮಹತ್ತರ ಜವಾಬ್ದಾರಿ ಈ ಜೋಡಿ ಮೇಲಿತ್ತು.

ಆದ್ರೆ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ನಿರೀಕ್ಷೆಗಳನ್ನ ಹುಸಿಗೊಳಿಸಿದ ದಿನದ ಮೊದಲೆರಡು ಓವರ್‌ಗಳಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಅದ್ರಲ್ಲೂ ದಿನದ ಎರಡನೇ ಎಸೆತದಲ್ಲೇ ಚೇತೇಶ್ವರ ಪೂಜಾರ ಔಟಾದ ರೀತಿಯನ್ನ ಯಾರೂ ಅಂದಾಜಿಸಲು ಸಾಧ್ಯವಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCIದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCI

ಮೂರನೇ ಕ್ರಮಾಂಕದಲ್ಲಿ ಆಡುವ ಪೂಜಾರ ನಿನ್ನೆ ಅಜೇಯ 9 ರನ್‌ಗಳಿಸಿ, ಇಂದು ದೊಡ್ಡ ಇನ್ನಿಂಗ್ಸ್‌ ಕಲೆಹಾಕುವ ಯೋಚನೆಯಲ್ಲಿದ್ದರು. ಆದ್ರೆ ವೇಗಿ ಮಾರ್ಕೊ ಜಾನ್ಸೆನ್ ಹೊಸ ಚೆಂಡಿನೊಂದಿಗೆ ಪಕ್ಕೆಲುಬಿನ ಮೇಲೆ ದಾಳಿ ಮಾಡಿದರು, ಪರಿಣಾಮ ಚೆಂಡಿನ ಪುಟಿತವನ್ನ ಅರಿಯದ ಪೂಜಾರ ಅದನ್ನು ಸ್ಟಂಪ್‌ನ ಹಿಂದೆ ಲೆಗ್ ಸೈಡ್‌ಗೆ ಟಚ್ ಮಾಡಿದರ ಪರಿಣಾಮ ಸೀದಾ ಲೆಗ್‌ ಸ್ಲಿಪ್‌ ಕಡೆಗೆ ಚೆಂಡು ಧಾವಿಸಿತು. ಅಲ್ಲೇ ನಿಂತಿದ್ದ ಕೀಗನ್ ಪೀಟರ್ಸನ್ ಬಲಕ್ಕೆ ಜಿಗಿದು ಒಂದು ಕೈಯಿಂದ ಡೈವಿಂಗ್ ಕ್ಯಾಚ್ ಪಡೆದು ಪೂಜಾರ ಅವರ ಇನ್ನಿಂಗ್ಸ್ ಅನ್ನು ಬೇಗನೆ ಕೊನೆಗೊಳಿಸಿದರು.

ಕೀಗನ್ ಪೀಟರ್ಸನ್ ಈ ರೀತಿಯಾಗಿ ಹಿಡಿದ ಕ್ಯಾಚ್ ಸ್ವತಃ ಪೂಜಾರಗೆ ನಂಬಲ ಸಾಧ್ಯವಾಗದೆ ಒಂದು ಕ್ಷಣ ತಟಸ್ಥವಾಗಿ ನಿಂತುಬಿಟ್ರು. ಮತ್ತೊಂದು ಬದಿಯಲ್ಲಿದ್ದ ವಿರಾಟ್ ಕೂಡ ಏನು ಮಾತನಾಡದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟರು. ಅಷ್ಟರ ಮಟ್ಟಿಗೆ ಜಿಗಿದು ಒಂದೇ ಕೈನಲ್ಲಿ ಕೀಗರ್ ಪೀಟರ್ಸನ್ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ರು.

ದಿನದಾಟದ ಎರಡನೇ ಎಸೆತದಲ್ಲಿ ವಿಕೆಟ್‌ ಪತನಗೊಂಡಿದ್ದು ಸತತ ಎರಡನೇ ದಿನವಾಗಿದೆ. 2ನೇ ದಿನದಂದು, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ದಿನದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಏಡನ್ ಮಾರ್ಕ್ರಾಮ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಪೂಜಾರ ಈ ರೀತಿಯಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಂದಿನ ದಿನ ಅಜೇಯರಾಗಿ ಉಳಿದು, ನಂತರದ ದಿನ ಒಂದು ರನ್ ಗಳಿಸದೇ ಔಟಾಗಿದ್ದು 7ನೇ ಬಾರಿ ಎಂಬುದು ಕೂಡ ದಾಖಲೆಯಾಗಿದೆ.

ಪೂಜಾರ ನಂತರದಲ್ಲಿ ಕ್ರೀಸ್‌ಗಿಳಿದ ಅಜಿಂಕ್ಯ ರಹಾನೆ ಕೂಡ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ರು. ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದ ರಹಾನೆ ನಂತರದ ಓವರ್‌ನಲ್ಲೇ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

Mayank Agarwal ಮಾಡಿದ ಎಡವಟ್ಟಿಗೆ ಬೇಸರದಿಂದ Virat ಮಾಡಿದ್ದೇನು? | Oneindia Kannada

ಆದ್ರೆ ನಂತರ ಐದನೇ ವಿಕೆಟ್‌ಗೆ ನಾಯಕ ಕೊಹ್ಲಿ ಜೊತೆಗೂಡಿದ ರಿಷಭ್ ಪಂತ್ ಅಜೇಯ ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಊಟದ ವಿರಾಮಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿದ್ದು, 143 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದ ಲೈವ್ ಸ್ಕೋರ್ ಈ ಕೆಳಗಿನಂತಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 16:52 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X