ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಷಾಂತ್ಯಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ನಂಬರ್ 1 ಆಗಿಯೇ ಮುಂದುವರಿದ ವಿರಾಟ್ ಕೊಹ್ಲಿ

Kohli remains No.1, Labuschagne overtakes Pujara

ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ ಸಾಮಾನ್ಯ ಆಟವನ್ನಷ್ಟೇ ಪ್ರದರ್ಶಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಂಬರ್‌ ವನ್ ಪಟ್ಟಕ್ಕೇರುವ ಕನಸು ನನಸಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2019ನ್ನು ನಂಬರ್1 ಆಗಿಯೇ ಕೊನೆಗೊಳಿಸಿದ್ದಾರೆ.

ಹಾಗಂತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವುದು ಸ್ಟೀವ್ ಸ್ಮಿತ್‌ಗೆ ಸುಲಭವಾಗಿಯೇನೂ ಇರಲಿಲ್ಲ. ಅದಾಗಲೇ ವಿರಾಟ್ ಕೊಹ್ಲಿ ಭಾರೀ ಅಂತರವನ್ನು ಕಾಯ್ದುಕೊಂಡಿದ್ದರು. ಇದನ್ನು
ಹಿಂದಿಕ್ಕಲು ಸ್ಟೀವ್ ಸ್ಮಿತ್ ಭಾರೀ ಪ್ರದರ್ಶನವನ್ನು ನೀಡಲೇ ಬೇಕಿತ್ತು. ಆದರೆ ಸ್ಟೀವ್ ಸ್ಮಿತ್ ಇದರಲ್ಲಿ ವಿಫಲರಾಗಿದ್ದಾರೆ.

ನ್ಯೂಜಿಲ್ಯಾಂಡ್ ಸರಣಿಯ ಬಾಕ್ಸಿಂಗ್ ಡೇ ಪಂದ್ಯದ ಅಂತ್ಯಕ್ಕೆ ಸ್ಟಿವ್ ಸ್ಮಿತ್ 911 ಅಂಕವನ್ನು ಗಳಿಸಿಕೊಂಡಿದ್ದಾರೆ. ಆದರೆ ಟೀ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 928 ಅಂಕಗಳಿಸಿದ್ದು ದೊಡ್ಡ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಆಸ್ಟ್ರೇಲಿಯಾದ ಯುವ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಈ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್‌ ರನ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದು ಟೆಸ್ಟ್‌ ಶ್ರೇಯಾಂಕದಲ್ಲೂ ಏರಿಕೆಯನ್ನು ಕಂಡಿದ್ದಾರೆ. ಟೀಮ್ ಯುವ ಪ್ರತಿಭಾವಂತ ಚೇತೇಶ್ವರ್ ಪೂಜಾರಾ ಅವರನ್ನು ಹಿಂದಿಕ್ಕುವಲಗಲಿ ಯಶಸ್ವಿಯಾಗಿದ್ದಾರೆ. ಪೂಜಾರಾ ಟಾಪ್ 5 ನಿಂದ ಕೆಳಕ್ಕೆ ಜಾರಿದ್ದಾರೆ.

ವಿರಾಟ್ ಕೊಹ್ಲಿ, ಪೂಜಾರಾ ಹೊರತು ಪಡಿಸಿ ಟೀಮ್ ಇಂಡಿಯಾ ಟೆಸ್ಟ್ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಟೆಸ್ಟ್‌ ಟಾಪ್ 10 ನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಗಾಯಗೊಂಡು ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.9ನೇ ಸ್ಥಾನದಲ್ಲಿರುವ ಆರ್.ಅಶ್ವಿನ್ ಮತ್ತು ಮೊಹಮ್ಮದ್ ಶಮಿ 10ನೇ ಸ್ಥಾನದಲ್ಲಿದ್ದು ಟಾಪ್ 10ರಲ್ಲಿರುವ ಮತ್ತಿಬ್ಬರು ಟೀಮ್ ಇಂಡಿಯಾದ ಬೌಲರ್‌ಗಳು.

Story first published: Tuesday, December 31, 2019, 11:33 [IST]
Other articles published on Dec 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X