
ಟಿ20 ಪಂದ್ಯಗಳ ಭಾಗವಾಗಿಲ್ಲದಿದ್ದರೆ, ಬೇರೊಬ್ಬರಿಗೆ ಆ ಅವಕಾಶ
"ಭಾರತ ತಂಡದ ಆಯ್ಕೆಗಾರರು ಮುಂದಿನ ಟಿ20 ವಿಶ್ವಕಪ್‌ಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿ ನೋಡಲು ಪ್ರಯತ್ನಿಸಬೇಕು. ಅವರು ಟಿ20 ಪಂದ್ಯಗಳ ಭಾಗವಾಗಿಲ್ಲದಿದ್ದರೆ ಮತ್ತು ಬೇರೊಬ್ಬರು ಆ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ನಂತರ ಹಿರಿಯ ಆಟಗಾರರು ವಾಪಸ್ಸಾದಾಗ ಆ ಯುವ ಆಟಗಾರನನ್ನು ಕೈಬಿಡಲು ಆಯ್ಕೆದಾರರಿಗೆ ಎಷ್ಟು ಕಷ್ಟವಾಗುತ್ತದೆ?" ಮುಂಬರುವ ಭಾರತ ಮತ್ತು ಶ್ರೀಲಂಕಾ ಸರಣಿಯ ಅಧಿಕೃತ ಪ್ರಸಾರಕವಾದ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ಸಂವಾದದಲ್ಲಿ ಗೌತಮ್ ಗಂಭೀರ್ ಮಾತನಾಡಿದರು.
ಇದೆ ವೇಳೆ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಆಯ್ಕೆಗಾರರು ಏನು ಮಾಡುತ್ತಾರೆ? ಆ ಸಂದರ್ಭದಲ್ಲಿ ಆಟಗಾರರನ್ನು ಬದಲಾಯಿಸುವುದು ನ್ಯಾಯವೇ? ಎಂದು ಗೌತಮ್ ಗಂಭೀರ್ ಪ್ರಶ್ನಿಸಿದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ತಂಡದಲ್ಲಿ
2022ರಲ್ಲಿ ಭಾರತೀಯ ತಂಡಕ್ಕೆ ಹೆಚ್ಚು ಕಠಿಣವಾಗಿತ್ತು ಮತ್ತು 2023ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡದೊಂದಿಗೆ ಯಾವುದೇ ರೀತಿಯ ಬದಲಾವಣೆಯನ್ನು ಗೌತಮ್ ಗಂಭೀರ್ ಬಯಸುವುದಿಲ್ಲ. ಏಕೆಂದರೆ ಅದು 50 ಓವರ್ ವಿಶ್ವಕಪ್ ವರ್ಷವಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ತಂಡದಲ್ಲಿದ್ದಾರೆ.
ಬಹುತೇಕ ಏಕದಿನ ಸರಣಿಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ.

ಶಿಖರ್ ಧವನ್ 2022ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 688 ರನ್
ಕಳೆದ ಹತ್ತು ವರ್ಷಗಳಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಶಿಖರ್ ಧವನ್, 2022ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 74.21ರ ಕಡಿಮೆ ಸ್ಟ್ರೈಕ್‌ರೇಟ್‌ನೊಂದಿಗೆ 688 ರನ್ ಗಳಿಸಿದರು. ಬಾಂಗ್ಲಾದೇಶದ ವಿರುದ್ಧ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 18 ರನ್ ಗಳಿಸಿದರು.
ಏಕದಿನ ತಂಡಕ್ಕೆ ಪುನರಾಗಮನ ಮಾಡುವುದು ಶಿಖರ್ ಧವನ್‌ಗೆ ಕಷ್ಟದ ಕೆಲಸ ಎಂದು ಗೌತಮ್ ಗಂಭೀರ್ ಭಾವಿಸಿದ್ದಾರೆ. "ಯಾರು ಬೇಕಾದರೂ ಪುನರಾಗಮನ ಮಾಡಬಹುದು. ಆದರೆ ನನ್ನ ಪ್ರಕಾರ, ಶಿಖರ್ ಧವನ್‌ಗೆ ಪುನರಾಗಮನ ಮಾಡುವುದು ತುಂಬಾ ಕಷ್ಟ, ಏಕೆಂದರೆ ಅಗ್ರಕ್ರಮಾಂಕದಲ್ಲಿ ಇಶಾನ್ ಕಿಶನ್, ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಇದ್ದಾರೆ,'' ಎಂದು ಹೇಳಿದರು.