ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

ನವದೆಹಲಿ: ವಿಶ್ವದಲ್ಲೇ ಬಲಿಷ್ಠ ಕ್ರಿಕೆಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಭಾರತ ತಂಡ ಪ್ರತಿನಿಧಿಸೋದು ಬಹುತೇಕ ಕ್ರಿಕೆಟಿಗರ ಕನಸು. ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಮಿನುಗಿ ಕ್ರಿಕೆಟ್ ವೃತ್ತಿ ಬದುಕಿನಲ್ಲೇ ಮುಂದುವರೆಯುವ ಆಟಗಾರರಿದ್ದಾರೆ. ಜೊತೆಗೆ ಕ್ರಿಕೆಟ್ ವೃತ್ತಿ ಬದುಕಿನ ಬಳಿಕ ಬೇರೆ ಕೆಲಸಗಳಿಗೆ ಒಗ್ಗಿಕೊಳ್ಳುವ ಆಟಗಾರರೂ ಅನೇಕರು ಇದ್ದಾರೆ.

ಭಾರತದಲ್ಲಿ ಟಿ20 ವಿಶ್ವಕಪ್‌ ನಡೆಸುವ ಬಿಸಿಸಿಐ ಆಸೆಗೆ ದೊಡ್ಡ ಹಿನ್ನಡೆ!

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮಿನುಗಿದ್ದ/ಮಿನುಗುತ್ತಿರುವ ಒಂದಿಷ್ಟು ಖ್ಯಾತ ಕ್ರಿಕೆಟಿಗರು ಬರೀ ಕ್ರಿಕೆಟ್ ಅಷ್ಟೇ ಅಲ್ಲದೆ ಸರ್ಕಾರಿ ಹುದ್ದಿಯನ್ನೂ ಹೊಂದಿದ್ದಾರೆ. ಟೀಮ್ ಇಂಡಿಯಾದಲ್ಲಿದ್ದು ಸರ್ಕಾರಿ ಹುದ್ದಿಯಲ್ಲಿರುವ/ಇದ್ದ 7 ಕ್ರಿಕೆಟಿಗರ ಕುತೂಹಲಕಾರಿ ಮಾಹಿತಿ ಇಲ್ಲಿದೆ.

7. ಕೆಎಲ್ ರಾಹುಲ್

7. ಕೆಎಲ್ ರಾಹುಲ್

ಕರ್ನಾಟಕದ ಮಂಗಳೂರಿನವರಾದ ಕೆಎಲ್ ರಾಹುಲ್ ಭಾರತ ತಂಡದಲ್ಲಿ ನೆಲೆಯೂರಲು ಪರದಾಡಿದ್ದರು. 2014ರಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿರುವ ರಾಹುಲ್ ಸದ್ಯ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರರ ಸಾಲಿನಲ್ಲಿದ್ದಾರೆ. ಅದ್ಹಾಗೆ 2018ರಲ್ಲಿ ಕೆಎಲ್ ರಾಹುಲ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ನೀಡಿತ್ತು. ಇದೇ ಕಾರಣಕ್ಕೆ ರಾಹುಲ್ ಈಗ ಆರ್‌ಬಿಐ ಸಂಬಂಧಿ ಟಿವಿ ಜಾಹೀರಾತುಗಳು ಬಂದರೆ ಅದರಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

6. ಉಮೇಶ್ ಯಾದವ್

6. ಉಮೇಶ್ ಯಾದವ್

ಸುಮಾರು ದಶಕದ ಹಿಂದೆ ವೇಗಿ ಉಮೇಶ್ ಯಾದವ್ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಉಮೇಶ್ ಯಾದವ್‌ಗೆ ಮೊದಲು ತಾನು ಪೊಲೀಸ್ ಆಗಬೇಕೆನ್ನೋ ಆಸೆಯಿತ್ತು. ಆದರೆ ಪೊಲೀಸ್ ಸಂಬಂಧಿ ಪರೀಕ್ಷೆಯನ್ನು ಯಾದವ್‌ಗೆ ಪೂರ್ಣಗೊಳಿಸಲಾಗಿರಲಿಲ್ಲ. ಹೀಗಾಗಿ ಯಾದವ್ ಕ್ರಿಕೆಟ್ ಕ್ಷೇತ್ರಕ್ಕೆ ಬಂದಿದ್ದರು. ಆದರೆ 2017ರಲ್ಲಿ ಆರ್‌ಬಿಐ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಯಾದವ್‌ಗೆ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ನೀಡಿತು. ಯಾದವ್ ಕೂಡ ಆರ್‌ಬಿಐ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳೋದು ಇದಕ್ಕೇನೆ.

5. ಕಪಿಲ್ ದೇವ್

5. ಕಪಿಲ್ ದೇವ್

ಭಾರತ ಮೊದಲ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದಾಗ ತಂಡವನ್ನು ಮುನ್ನಡೆಸಿದ್ದವರು ದಿಗ್ಗಜ ಕಪಿಲ್ ದೇವ್ ಅವರು. ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್‌ಗಳಲ್ಲಿರುವ ಕಪಿಲ್ ದೇವ್, 2008ರಲ್ಲಿ ಇಂಡಿಯನ್ ಟೆರಿಟೋರಿಯಲ್ ಆರ್ಮಿಯಿಂದ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ್ದರು.

4 ಜೋಗೀಂದರ್ ಶರ್ಮಾ

4 ಜೋಗೀಂದರ್ ಶರ್ಮಾ

2007ರ ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ಗೆಲ್ಲುವಲ್ಲಿ ಕೊಡುಗೆ ನೀಡಿದ್ದವರಲ್ಲಿ ಬೌಲರ್ ಜೋಗೀಂದರ್ ಶರ್ಮಾ ಕೂಡ ಒಬ್ಬರು. ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್‌ಗೂ ಕೆಲ ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ವೃತ್ತಿ ಬದುಕಿನಿಂದ ಜೋಗೀಂದರ್ ದೂರವಾಗುವ ವೇಳೆ ಶರ್ಮಾಗೆ ಹರ್ಯಾಣ ಪೊಲೀಸ್ ಠಾಣೆಯಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್ ಹುದ್ದೆ ನೀಡಲಾಗಿತ್ತು. ಈಗಲೂ ಶರ್ಮಾ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

3. ಯುಜುವೇಂದ್ರ ಚಾಹಲ್

3. ಯುಜುವೇಂದ್ರ ಚಾಹಲ್

ತರ್ಲೆ-ತಮಾಷೆಗಾಗಿ ಹೆಚ್ಚು ಗುರುತಿಸಿಕೊಳ್ಳುವ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ 2016ರ ವೇಳೆ ಭಾರತ ತಂಡದಲ್ಲಿ ಹೆಚ್ಚು ಮಿನುಗಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುವ ಯುಜುವೇಂದ್ರ ಚಾಹಲ್ ಇನ್‌ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಅನ್ನೋದು ಗೊತ್ತೆ?!

2. ಸಚಿನ್ ತೆಂಡೂಲ್ಕರ್

2. ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಕ್ರಿಕೆಟ್‌ ಗೊತ್ತಿರುವ ಯಾರಿಗಾದರೂ ಹೆಚ್ಚಿಗೆ ಹೇಳಬೇಕಾದ್ದಿಲ್ಲ. ಸುಮಾರು 23 ವರ್ಷಗಳ ಕಾಲ ಸಚಿನ್ ಕ್ರಿಕೆಟ್ ಜಗತ್ತನ್ನು ಆಳಿದ್ದರು. ಭಾರತ ತಂಡದ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಮತ್ತು ಏಕದಿನದಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದಾಖಲೆ ಈಗಲೂ ಸಚಿನ್ ಹೆಸರಿನಲ್ಲಿದೆ. ಅಂದ್ಹಾಗೆ, 2010ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಸಚಿನ್‌ಗೆ ಹುದ್ದೆ ನೀಡಲಾಗಿತ್ತು.

1. ಎಂಎಸ್ ಧೋನಿ

1. ಎಂಎಸ್ ಧೋನಿ

ಟೀಮ್ ಇಂಡಿಯಾಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಮುಖ ಟ್ರೊಫಿಗಳನ್ನು ಗೆಲ್ಲಿಸಿಕೊಟ್ಟ ನಾಯಕನೆಂಬ ಹಿರಿಮೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯದ್ದು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇನ್ನಿತರರು ಮಿನುಗುವಲ್ಲಿ ನಾಯಕನಾಗಿ ಧೋನಿ ಕೊಡುಗೆಯೂ ಇದೆ. 2011ರಲ್ಲಿ ಎಂಎಸ್‌ಡಿಗೆ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಿ ಗೌರವಿಸಲಾಗಿತ್ತು. 2019ರಲ್ಲಿ ಧೋನಿ 2 ತಿಂಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Saturday, June 5, 2021, 22:19 [IST]
Other articles published on Jun 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X