ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ಧೋನಿಗೆ 7ನೇ ಸ್ಥಾನ; ಇಲ್ಲಿದೆ ಟಾಪ್ 10 ಪಟ್ಟಿ

ಮೇ 29ರ ಭಾನುವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಮಹತ್ವದ ಫೈನಲ್ ಪಂದ್ಯದ ಮೂಲಕ ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿತ್ತು. ಈ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿದೆ.

3000ಕ್ಕಿಂತ ಹೆಚ್ಚು ಐಪಿಎಲ್ ರನ್ ಬಾರಿಸಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲದ 6 ನತದೃಷ್ಟ ಆಟಗಾರರಿವರು!3000ಕ್ಕಿಂತ ಹೆಚ್ಚು ಐಪಿಎಲ್ ರನ್ ಬಾರಿಸಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲದ 6 ನತದೃಷ್ಟ ಆಟಗಾರರಿವರು!

ಇನ್ನು ಈ ಬಾರಿ ನೂತನ ತಂಡವಾಗಿ ಕಣಕ್ಕಿಳಿದ ಗುಜರಾತ್ ಟೈಟನ್ಸ್ ತಂಡವನ್ನು ನಾಯಕನಾಗಿ ಅತಿ ಯಶಸ್ವಿಯಾಗಿ ಮುನ್ನಡೆಸಿದ್ದು ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯ. ಹೌದು, ಮುಂಬೈ ಇಂಡಿಯನ್ಸ್ ತಂಡದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಸಾರಥ್ಯವನ್ನು ವಹಿಸಿ ಅತ್ಯುತ್ತಮ ನಾಯಕತ್ವ ನಿರ್ವಹಿಸಿ, ಆಟಗಾರನಾಗಿಯೂ ಉತ್ತಮ ಪ್ರದರ್ಶನವನ್ನು ನೀಡಿ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ಗೆಲ್ಲುವುದರ ಜತೆಗೆ ಟ್ರೋಫಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.

IPL 2022: ಫ್ಲಾಪ್ ಆಗಿದ್ದರೂ ಐಪಿಎಲ್ 2023ಕ್ಕೆ ಈ ಮೂವರನ್ನು ಹೊರಹಾಕುವುದಿಲ್ಲ ಡೆಲ್ಲಿ ಕ್ಯಾಪಿಟಲ್ಸ್!IPL 2022: ಫ್ಲಾಪ್ ಆಗಿದ್ದರೂ ಐಪಿಎಲ್ 2023ಕ್ಕೆ ಈ ಮೂವರನ್ನು ಹೊರಹಾಕುವುದಿಲ್ಲ ಡೆಲ್ಲಿ ಕ್ಯಾಪಿಟಲ್ಸ್!

ಹೀಗೆ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದು ಐದನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. ಹೌದು, ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ 4 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಆಟಗಾರನಾಗಿ ಐದನೇ ಟ್ರೋಫಿಯನ್ನು ತಮ್ಮ ಟ್ರೋಫಿ ಪಟ್ಟಿಗೆ ಸೇರಿಸಿಕೊಂಡಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಟಾಪ್ 10 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಟಾಪ್ 10 ಪಟ್ಟಿ

ಟಾಪ್ 10 ಪಟ್ಟಿ

1. ರೋಹಿತ್ ಶರ್ಮಾ - 6 ಐಪಿಎಲ್ ಟ್ರೋಫಿ ( ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್)

2. ಹಾರ್ದಿಕ್ ಪಾಂಡ್ಯ - 5 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ )

3. ಜಸ್ ಪ್ರೀತ್ ಬುಮ್ರಾ - 5 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ )

4. ಅಂಬಾಟಿ ರಾಯುಡು - 5 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ )

5. ಕೀರನ್ ಪೊಲಾರ್ಡ್ - 5 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ )

6. ಆದಿತ್ಯ ತಾರೆ - 5 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ )

7. ಎಂಎಸ್ ಧೋನಿ - 4 ಐಪಿಎಲ್ ಟ್ರೋಫಿ ( ಚೆನ್ನೈ ಸೂಪರ್ ಕಿಂಗ್ಸ್ )

8. ಸುರೇಶ್ ರೈನಾ - 4 ಐಪಿಎಲ್ ಟ್ರೋಫಿ ( ಚೆನ್ನೈ ಸೂಪರ್ ಕಿಂಗ್ಸ್ )

9. ಲಸಿತ್ ಮಾಲಿಂಗ - 4 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ )

10. ಕರ್ಣ್ ಶರ್ಮಾ - 4 ಐಪಿಎಲ್ ಟ್ರೋಫಿ ( ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ )

11. ಹರ್ಭಜನ್ ಸಿಂಗ್ - 4 ಐಪಿಎಲ್ ಟ್ರೋಫಿ ( ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ )

ರೋಹಿತ್ ಶರ್ಮಾ ನಂಬರ್ 1

ರೋಹಿತ್ ಶರ್ಮಾ ನಂಬರ್ 1

2009ರಲ್ಲಿ ಆ್ಯಡಮ್ ಗಿಲ್ ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಗ ರೋಹಿತ್ ಶರ್ಮಾ ಆ ತಂಡದ ಭಾಗವಾಗಿದ್ದರು. ಇದಾದ ನಂತರ ಮುಂಬೈ ಇಂಡಿಯನ್ಸ್ ನಾಯಕನಾಗಿ 5 ಬಾರಿ ಟ್ರೋಫಿ ಗೆದ್ದ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ 6 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ಒಂದೇ ತಂಡದ ಪರ ಅತಿ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದವರು

ಒಂದೇ ತಂಡದ ಪರ ಅತಿ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದವರು

ಕೇವಲ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ಆಟಗಾರರು ಎಂಬ ದಾಖಲೆಯನ್ನು ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್ ಮತ್ತು ಜಸ್ ಪ್ರೀತ್ ಬೂಮ್ರಾ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್ ಮತ್ತು ಜಸ್ ಪ್ರೀತ್ ಬುಮ್ರಾ ಮೂವರೂ ಸಹ ಮುಂಬೈ ಇಂಡಿಯನ್ಸ್ ಪರ ತಲಾ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, June 5, 2022, 19:00 [IST]
Other articles published on Jun 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X