ಪಾಕಿಸ್ತಾನದ ಈ ಕ್ರಿಕೆಟಿಗನ ಪತ್ನಿ ವಿರಾಟ್ ಕೊಹ್ಲಿಯ ಅಭಿಮಾನಿ

ಪಾಕಿಸ್ತಾನದ ಸ್ಟಾರ್ ಬೌಲರ್ ಪತ್ನಿ Virat Kohli ದೊಡ್ಡ ಫ್ಯಾನ್ | Oneindia Kannada

ವಿರಾಟ್ ಕೊಹ್ಲಿ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಸಹ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ ಇತರ ದೇಶದ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಸಹ ತಾವು ವಿರಾಟ್ ಕೊಹ್ಲಿಯ ಅಭಿಮಾನಿಗಳು ಎಂದು ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನ ಈ ಬೌಲರ್‌ಗೆ ಕೊಹ್ಲಿ ಹೆದರುತ್ತಾರೆ; ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್!

ಅದೇ ಸಾಲಿಗೆ ಇದೀಗ ಪಾಕಿಸ್ತಾನದ ವೇಗಿಯೊಬ್ಬನ ಪತ್ನಿ ಕೂಡ ಸೇರಿಕೊಂಡಿದ್ದಾರೆ. ಹೌದು ಸಾಮಾನ್ಯವಾಗಿ ಪಾಕಿಸ್ತಾನ ಮಂದಿ ಭಾರತೀಯ ಕ್ರಿಕೆಟಿಗರನ್ನು ಹೊಗಳುವುದು ಕಡಿಮೆ. ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಬೌಲರ್ ಹಸನ್ ಅಲಿಯ ಪತ್ನಿ ಶಾಮಿಯಾ ಅರ್ಜು ತಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂಬುದನ್ನು ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ವಿಫಲರಾದಾಗ ಈತ ತಂಡವನ್ನು ಕಾಪಾಡುತ್ತಾನೆ ಎಂದ ಮಾಜಿ ಕ್ರಿಕೆಟಿಗ ಎಂಎಸ್‌ಕೆ ಪ್ರಸಾದ್

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಯಾಯಿಗಳ ಜೊತೆ ಶಾಮಿಯಾ ಅರ್ಜು ಪ್ರಶ್ನೋತ್ತರದ ಸಂವಾದವನ್ನು ನಡೆಸಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಕೊಂಚವೂ ಯೋಚಿಸದ ಶಾಮಿಯಾ ವಿರಾಟ್ ಕೊಹ್ಲಿ ಎಂಬ ಉತ್ತರವನ್ನು ನೀಡಿದ್ದಾರೆ. ಶಾಮಿಯಾ ಅರ್ಜು ಮೂಲತಃ ಭಾರತೀಯಳಾಗಿದ್ದು ಪಾಕಿಸ್ತಾನದ ಹಸನ್ ಅಲಿ ಅವರನ್ನು ಮದುವೆಯಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, June 9, 2021, 8:12 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X