ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅಗತ್ಯವಿತ್ತು, ಹೀಗಾಗಿ ಅವರ ವೃತ್ತಿಜೀವನ ಮುಂದೂಡಿದೆ; ಎಂಎಸ್‌ಕೆ ಪ್ರಸಾದ್

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಿಂದ ಅದ್ಭುತ ಫಾರ್ಮ್‌ನಲ್ಲಿ ಮುಂದುವರೆಯುತ್ತಿದ್ದಾರೆ.

ಈ ಮೊದಲು ಅರ್ಧಶತಕವನ್ನು ಶತಕಗಳಾಗಿ ಪರಿವರ್ತಿಸಲು ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ತಮ್ಮ ಕೊನೆಯ ನಾಲ್ಕು ಪಂದ್ಯಗಳಿಂದ 3 ಶತಕಗಳನ್ನು ಗಳಿಸಿದ್ದಾರೆ ಮತ್ತು 2023ರಲ್ಲಿ ಅತ್ಯುತ್ತಮ ಆರಂಭವನ್ನು ಪಡೆದಿದ್ದಾರೆ.

ಸುದೀರ್ಘ ವಿಶ್ರಾಂತಿಯನ್ನು ಪಡೆದು, ಮಾನಸಿಕ ಆರೋಗ್ಯದ ಹೋರಾಟಗಳ ಬಗ್ಗೆ ಸಾರ್ವಜನಿಕವಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದರು. ಅನಂತರ ಏಷ್ಯಾಕಪ್‌ನಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡರು.

IND vs NZ: ಈತನಿಗಾಗಿ ವಿರಾಟ್ ಕೊಹ್ಲಿ 3ನೇ ಸ್ಥಾನವನ್ನು ತ್ಯಾಗ ಮಾಡಬೇಕು ಎಂದ ಸಂಜಯ್ ಮಂಜ್ರೇಕರ್IND vs NZ: ಈತನಿಗಾಗಿ ವಿರಾಟ್ ಕೊಹ್ಲಿ 3ನೇ ಸ್ಥಾನವನ್ನು ತ್ಯಾಗ ಮಾಡಬೇಕು ಎಂದ ಸಂಜಯ್ ಮಂಜ್ರೇಕರ್

ಭಾರತದ ಈ ಸ್ಟಾರ್ ಬ್ಯಾಟ್ಸ್‌ಮನ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಫಾರ್ಮ್‌ಗೆ ಮರಳಿದ್ದು, ಉಳಿದವರಿಗಿಂತ ಹೆಚ್ಚು ಉತ್ತಮವಾಗಿ ಆಡುತ್ತಿದ್ದಾರೆ. ಇನ್ನು ಭಾರತ ತಂಡದ ಮಾಜಿ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾ, ವಿಶ್ರಾಂತಿಯು ವಿರಾಟ್ ಕೊಹ್ಲಿಯ ವೃತ್ತಿಜೀವನವನ್ನು ಕೆಲವು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಹೇಳಿದರು.

"ವಿರಾಟ್ ಕೊಹ್ಲಿಗೆ ನೀಡಿದ್ದ ವಿಶ್ರಾಂತ್ರಿಯಿಂದಲೇ ಅವರ ವೃತ್ತಿಜೀವನವನ್ನು 4-5 ವರ್ಷಗಳಷ್ಟು ಮುಂದಕ್ಕೆ ತಳ್ಳಲ್ಪಟ್ಟಿದೆ ಎಂದು ನಾನು ಭಾವಿಸುತ್ತೇನೆ. ಒತ್ತಡದಲ್ಲಿ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ ಮತ್ತು ಆ ಸವಾಲನ್ನು ಸ್ವೀಕರಿಸಿ ಸಾಗಿದ್ದಾರೆ. ವಿಶ್ರಾಂತಿಯು ಅವರ ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಮಾಡಿದೆ. ಇದೀಗ ನಾವು ಹಳೆಯ ವಿರಾಟ್ ಕೊಹ್ಲಿಯನ್ನು ಮರಳಿ ಪಡೆದಿದ್ದೇವೆ. ಅವರಿಗೆ ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ವಿರಾಮದ ಅಗತ್ಯವಿದೆ," ಎಂದು ಎಂಎಸ್‌ಕೆ ಪ್ರಸಾದ್ ಸಂದರ್ಶನವೊಂದರಲ್ಲಿ ತಿಳಿಸಿದರು.

ರನ್ ಗಳಿಸುವ ವಿಷಯದಲ್ಲಿ ವಿರಾಟ್ ಕೊಹ್ಲಿ 2016ಕ್ಕೆ ಹಿಂತಿರುಗಿದಂತೆ ಕಾಣುತ್ತಿದ್ದಾರೆ ಮತ್ತು ಅತ್ಯುತ್ತಮ ಮನಸ್ಥಿತಿಗೆ ಮರಳಿದ್ದಾರೆ ಎಂದು ಭಾರತದ ಮಾಜಿ ಆಟಗಾರರೂ ಅಗಿರುವ ಎಂಎಸ್‌ಕೆ ಪ್ರಸಾದ್ ಹೇಳಿದರು.

"2021ರ ಟಿ20 ವಿಶ್ವಕಪ್ ನಂತರ ಅವರು ವಿರಾಮ ತೆಗೆದುಕೊಳ್ಳಬೇಕಿತ್ತು ಎಂದು ನಾನು ಭಾವಿಸಿದ್ದೆ. ಅವರು 2022ರ ಏಷ್ಯಾಕಪ್‌ಗೆ ಮೊದಲು ವಿರಾಮ ತೆಗೆದುಕೊಂಡ ನಂತರ, ನಾವು ಮೊದಲಿನ ವಿರಾಟ್ ಕೊಹ್ಲಿಯನ್ನು ಮರಳಿ ಪಡೆದಿದ್ದೇವೆ. ಅವರು 2016ರಲ್ಲಿ ಹೆಚ್ಚಿನ ರನ್ ಗಳಿಸಿರುವುದನ್ನು ನಾವು ನೋಡಿದ್ದೇವೆ," ಎಂದು ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟರು.

IND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಜೂ. ಎನ್‌ಟಿಆರ್ ಭೇಟಿಯಾದ ಟೀಂ ಇಂಡಿಯಾ

ಬುಧವಾರ, ಜನವರಿ 18ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 21 ಮತ್ತು 24ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣ ಮತ್ತು ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ.

ಇನ್ನು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂದಿನ ಟಿ20 ಸರಣಿಯು ಜನವರಿ 27ರಿಂದ ರಾಂಚಿ, ಲಕ್ನೋ ಮತ್ತು ಅಹಮದಾಬಾದ್‌ನ ಕ್ರೀಡಾಂಗಣಗಳಲ್ಲಿ ಆಡಲಿದೆ. ಅನಂತರ ಆಸ್ಟ್ರೇಲಿಯಾ ವಿರುದ್ಧ ಭಾರತ 4 ಟೆಸ್ಟ್ ಪಂದ್ಯಗಳಲ್ಲಿ ಸೆಣಸಾಡಲಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿಗೆ ವಿರಾಟ್ ಕೊಹ್ಲಿಯ ಫಾರ್ಮ್ ನಿರ್ಣಾಯಕವಾಗಿದೆ ಎಂಬುದನ್ನು ಮರೆಯುವಂತಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Tuesday, January 17, 2023, 18:07 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X